ಬೆಂಗಳೂರು: BBMP ವ್ಯಾಪ್ತಿಯ ದಕ್ಷಿಣ ವಲಯದ ಲಕ್ಕಸಂದ್ರ ಬಹುಮಹಡಿ ಕಟ್ಟಡ ಕುಸಿತ (lakkasandra building collapse) ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಲೀಕನ ವಿರುದ್ಧ ದೂರು ದಾಖಲು ಮಾಡಲಾಗಿದೆ.
ಹೌದು ನಿನ್ನೆ ಸುಮಾರು 70 ಮಂದಿ ಮೆಟ್ರೋ ಕಾರ್ಮಿಕರು ವಾಸವಿದ್ದ ಲಕ್ಕಸಂದ್ರದ 7ನೇ ಮುಖ್ಯರಸ್ತೆ, 14ನೇ ಕ್ರಾಸ್ನಲ್ಲಿನ ಮೂರು ಅಂತಸ್ತಿನ ಕಟ್ಟಡಕುದಿತವಾಗಿದೆ. ಈ ಕಟ್ಟಡವನ್ನಾ 1974ರಲ್ಲಿ ನಿರ್ಮಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದ್ದು ಸುರೇಶ್ ಎಂಬ ವ್ಯಕ್ತಿಗೆ ಈ ನಿವಾಸ ಸೇರಿದ್ದಾಗಿದೆ. ಶಿಥಿಲಾವ್ಯವಸ್ಥೆಯಲ್ಲಿದ್ದ ಕಟ್ಟಡದ ಬಗ್ಗೆ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೇ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದರು ಜೊತೆಗೆ ಬಾಡಿಗೆ ನೀಡಿದ್ದರು ಎನ್ನುವ ಆರೋಪದ ಮೇಲ ದೂರು ದಾಖಲಾಗಿದೆ.

ಬಿಬಿಎಂಪಿ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮನೆ ಮಾಲೀಕರ ವಿರುದ್ಧ ಕೇಸ್ ದಾಖಲಿಸಿ, ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದೆ.