ನವದೆಹಲಿ: ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಮತ್ತು ಗುಜರಾತ್ ದಲಿತ ನಾಯಕ ಜಿಗ್ನೇಶ್ ಮೇವಾನಿ ಇಂದು ಕಾಂಗ್ರೆಸ್ ಸೇರಿದ್ದಾರೆ. ಅವರನ್ನು ನವದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಚೇರಿಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಬರಮಾಡಿಕೊಳ್ಳಲಾಯಿತು.

ಈ ಇಬ್ಬರು ನಾಯಕರ ಆಗಮನದಿಂದಾಗಿ, ಕಾಂಗ್ರೇಸ್‌ನಲ್ಲಿ ಜನರೊಂದಿಗೆ ಸಂಪರ್ಕ ಸಾಧಿಸುವ ಮತ್ತು ಅವರ ನಡುವೆ ಹಿಡಿದಿಟ್ಟುಕೊಳ್ಳುವ ನಾಯಕರು ಹೆಚ್ಚಾಗುತ್ತರೆಎಂದು ನಂಬಲಾಗಿದೆ. ಪ್ರಸ್ತುತ, ರಾಹುಲ್ ಗಾಂಧಿ ವಿರೋಧ ಪಕ್ಷದ ಮುಖವಾಗಿದ್ದು, ಅವರು ನಿರಂತರವಾಗಿ ಪ್ರಧಾನಿ ಮೋದಿ, ಬಿಜೆಪಿ ಮತ್ತು ಸಂಘಕ್ಕೆ ನೇರವಾಗಿ ಸವಾಲು ಹಾಕುತ್ತಿದ್ದಾರೆ. ಇತ್ತೀಚೆಗೆ, ಪಕ್ಷದ ಕಾರ್ಯಕ್ರಮವೊಂದರಲ್ಲಿ, ಅವರು ತಮ್ಮ ಸಂದೇಶವೊಂದರಲ್ಲಿ ಬಿಜೆಪಿ-ಸಂಘವನ್ನು ನೇರವಾಗಿ ಎದುರಿಸುವ ಧೈರ್ಯವನ್ನು ಹೊಂದಿರುವವರು ತಮ್ಮ ಸ್ಥಾನ ಕಾಂಗ್ರೆಸ್‌ನಲ್ಲಿರಬೇಕು ಎಂದು ಹೇಳಿದ್ದರು. ಕನ್ಹಯ್ಯಾ ಕುಮಾರ್ ಮತ್ತು ಜಿಗ್ನೇಶ್ ಮೇವಾನಿ, ಬಿಜೆಪಿ ಮತ್ತು ಸಂಘದ ವಿರುದ್ಧ ಧ್ವನಿ ಎತ್ತಿದ ಇಬ್ಬರು ಯುವ ಮುಖಗಳು ಮಂಗಳವಾರ ಕಾಂಗ್ರೆಸ್ ಸೇರಿದ್ದು ರಾಹುಲ್ ಗಾಂಧಿಯವರ ಮಾತಿಗೆ ಪುಷ್ಟಿ ಕೊಟ್ಟಿದೆ.