ಬೀದರ್ : ಬೀದರ್ ನಲ್ಲಿ ಒಂದೇ ಕುಟುಂಬದಲ್ಲಿ ಅಣ್ಣ ಐಪಿಎಸ್, ತಮ್ಮ ಐಎಎಸ್ ಹುದ್ದೆ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಶುಕ್ರವಾರ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಮಹಮ್ಮದ್ ಹ್ಯಾರಿಸ್ ಸುಮೈರ್ 277 ರ್ಯಾಂಕ್ ಪಡೆದಿದ್ದಾರೆ. ಇವರ ಅಣ್ಣ ಮಹಮದ್ ನದಿ ಮುದ್ದಿನ್ ಕಳೆದ ವರ್ಷ ಯುಪಿಎಸ್ ಸಿ ಪರೀಕ್ಷೆಯಲ್ಲಿ 456 ರ್ಯಾಂಕ್ ಪಡೆದು ಕೇರಳದಲ್ಲಿ ಐಪಿಎಸ್ ಅಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದಾರೆ.

ಮಹಮ್ಮದ್ ಹ್ಯಾರಿಸ್ ಇಂಜಿನಿಯರ್ ಬಳಿಕ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು. ಮೊದಲ ಪ್ರಯತ್ನದಲ್ಲಿ ಪರೀಕ್ಷೆ ಬರೆದರು ಪಾಸಾಗಿರಲಿಲ್ಲ ಈಗ ಎರಡನೇ ಪ್ರಯತ್ನದಲ್ಲಿ ಪರೀಕ್ಷೆ ತೇರ್ಗಡೆ ಆಗುವಲ್ಲಿ ಯಶಸ್ವಿಯಾಗಿದ್ದಾರೆ. 2018 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ನದಿ ಮುದ್ದಿನ್ ಐಆರ್ ಎಸ್ ಹುದ್ದೆಗೆ ಆಯ್ಕೆಯಾಗಿದ್ದರು. ಇಷ್ಟಕ್ಕೆ ತೃಪ್ತರಾಗದ ನದಿ ಮುದ್ದಿನ್ 2019ರಲ್ಲಿ ಮತ್ತೆ ಪರೀಕ್ಷೆ ಬರೆದು ಐಪಿಎಸ್ ಹುದ್ದೆಗೆ ಆಯ್ಕೆಯಾದರು.
ಮೊಹಮ್ಮದ್ ಹ್ಯಾರಿಸ್ ಸುಮೈರ್ ಹಾಗೂ ಮೊಹಮದ್ ನದಿ ಮುದ್ದಿನ್ ಬೀದರ್ ನ ಏರ್ಪೋರ್ಸ್ ಸ್ಕೂಲ್ನಲ್ಲಿ ಎಲ್ಕೆಜಿ-ಯುಕೆಜಿ ಬಳಿಕ ಕೇಂದ್ರೀಯ ವಿದ್ಯಾಲಯದಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಅಧ್ಯಯನ ಮಾಡಿದ್ದರು. ಹೈದರಾಬಾದ್ನ ಚೈತನ್ಯ ಅಕಾಡೆಮಿಯಲ್ಲಿ ಇಬ್ಬರೂ ಪಿಯುಸಿ ವ್ಯಾಸಂಗ ಮಾಡಿ ಬೆಂಗಳೂರಿನ ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುಮೈರ್ ಸಿಎಸ್ ಹಾಗೂ ನದಿ ಮುದ್ದಿನ್ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು. 2020 ನೇ ಸಾಲಿನ ಯುಪಿಎಸ್ ಸಿ ಪರೀಕ್ಷೆಯಲ್ಲಿ 270 ರನ್ ಗಳಿಸಿರುವ ಮೊಹಮ್ಮದ್ ಹ್ಯಾರಿಸ್ ಅವರು” ನಾನು ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರಿಂದ ಪ್ರಭಾವಿತನಾಗಿದ್ದೇನೆ. ನಾನು ಎಂದಿಗೂ ಎಷ್ಟು ಗಂಟೆ ಓದಬೇಕು ಎಂದು ಸಮಯ ಲೆಕ್ಕ ಹಾಕುತ್ತಿರಲಿಲ್ಲ. ಬದಲಿಗೆ ಎಷ್ಟು ಪುಸ್ತಕ ಓದಬೇಕು ಎಂದು ಪುಸ್ತಕಗಳನ್ನು ಮಾತ್ರ ಎಣಿಸುತ್ತಿದೆ ಹಾಗೂ ನಿತ್ಯ ನಾಲ್ಕರಿಂದ ಎಂಟು ಗಂಟೆ ವರೆಗೆ ಅಧ್ಯಯನ ಮಾಡುತ್ತಿದ್ದೆ” ಎಂದು ಹೇಳಿದ್ದಾರೆ.
ಮೊಹಮ್ಮದ್ ಹ್ಯಾರಿಸ್ ಅವರ ತಂದೆ ಮಾತನಾಡಿ “ಒಬ್ಬ ಮಗ ಐಎಎಸ್ ಇನ್ನೊಬ್ಬ ಮಗ ಐಪಿಎಸ್ ಆಗಿದ್ದು ನನಗೆ ಹೆಮ್ಮೆಯಾಗಿದೆ. ಬೀದರ್ ಜಿಲ್ಲೆಯಲ್ಲಿ ನನ್ನ ಮಕ್ಕಳು ಇತಿಹಾಸ ಬರೆದಿದ್ದಾರೆ ಸೂಕ್ತ ಮಾರ್ಗದರ್ಶನ ಪ್ರೋತ್ಸಾಹ ನೀಡಿದ್ದಕ್ಕೆ ಇಂದು ಸ್ಥಾನಕ್ಕೆ ತಲುಪಿದ್ದಾರೆ” ಎಂದು ಹೆಮ್ಮೆಪಟ್ಟರು.