ಯುಎಇನಲ್ಲಿ ಐಪಿಎಲ್ ನ ಎರಡನೇ ಆವೃತ್ತಿ ನಡೀತಾ ಇದೆ. ಫ್ಲೇ ಆಫ್ ಗೇರಲು ತಂಡಗಳು ಗೆಲುವಿಗಾಗಿ ಕಠಿಣ ಹೋರಾಟ ನಡೆಸುತ್ತಿವೆ. ಇವುಗಳ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಆಪದ್ಬಾಂಧವ ಅಂತ ಕರೆಸಿಕೊಳ್ಳೋ ಎಬಿ ಡಿವಿಲಿಯರ್ಸ್ ಯಾಕೋ ಮಂಕಾಗಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲೂ ಅವರ ಮೇಲಿಟ್ಟಿರೋ ನಿರೀಕ್ಷೆ ಹುಸಿಗೊಳಿಸಿದ್ದಾರೆ.

ಇನ್ನೂ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಆರ್ ಸಿ ಬಿ ಪಂದ್ಯವನ್ನು ಎಬಿಡಿ ಮಗ ಹಾಗೂ ಪತ್ನಿ ಡೆನಿಯಲ್ ವೀಕ್ಷಿಸಿದ್ದಾರೆ. 17ನೇ ಓವರ್ನಲ್ಲಿ ಕೇವಲ 11 ರನ್ ಗಳಿಸಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ಕೀಪರ್ ಕ್ವಿಂಟನ್ ಡಿಕಾಕ್ಗೆ ಎಬಿಡಿ ಕ್ಯಾಚ್ ನೀಡಿದ್ದಾರೆ. ಎಬಿಡಿ ಔಟ್ ಆಗಿದ್ದು ಆರ್ಸಿಬಿ ತಂಡಕ್ಕೆ ಮಾತ್ರವಲ್ಲದೆ ಅವರ ಹೆಂಡತಿ ಡೆನಿಯಲ್ ಹಾಗೂ ಮಗನಿಗೂ ಶಾಕ್ ಆಗಿದೆ.
ಡಿವಿಲಿಯರ್ಸ್ ಔಟಾದ ತಕ್ಷಣ ಅವರ ಮಗ ತಮ್ಮ ಕೈಯನ್ನು ಕೂತಿದ್ದ ಚೇರ್ಗೆ ಬಡಿದು ನೋವನ್ನು ಹೊರಹಾಕುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇನ್ನೂ ಡಿವಿಲಿಯರ್ಸ್ ಎರಡನೇ ಇನ್ಸಿಂಗ್ಸ್ ಐಪಿಎಲ್ನಲ್ಲಿ ಎದುರಾಳಿಗೆ ಮಾರಕವಾಗಿಲ್ಲ. ಆಡಿದ ಮೂರು ಪಂದ್ಯಗಳಲ್ಲಿ ಎಬಿಡಿ ಬ್ಯಾಟ್ ಸದ್ದು ಮಾಡಿಲ್ಲ.
Royal Challengers Bangalore AB de Villiers sun video viral