ಬೆಂಗಳೂರು : ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್ ಕರೆ ಹಿನ್ನೆಲೆ ನಗರದ ಬಹುತೇಕ ಭಾಗಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಿವಾಜಿನಗರದಲ್ಲಿ ತಟ್ಟದ ಬಂದ್ ಬಿಸಿ, ಎಂದಿನಂತೆ ಬಸ್ ಸಂಚಾರ ಆರಂಭ. ಶಿವಾಜಿ ನಗರದ ಬಸ್ ನಿಲ್ದಾಣಕ್ಕೆ ಎಂದಿನಂತೆಯೇ ಆಗಮಿಸಿತ್ತಿರುವ ಪ್ರಯಾಣಿಕರು. ಟೀ ಅಂಗಡಿಗಳು ಕೂಡ ಎಂದಿನಂತೆ ಓಪನ್ ಆಗಿದ್ದು ಶಿವಾಜಿನಗರ ಬಸ್ ನಿಲ್ದಾಣದಿಂದ ಬೇರೆ ಬೇರೆ ಭಾಗಕ್ಕೆ ಬಸ್ ಗಳು ಯಥಾರೀತಿಯಲ್ಲಿಯೇ ತೆರಳುತ್ತಿವೆ.
ಆಟೋ ಮತ್ತು ಕ್ಯಾಬ್‌ಗಳ ಸಂಚಾರ ಕೂಡ ಎಂದಿನಂತೆ ಸಾಗುತ್ತಿದೆ. ಜನರ ಓಡಾಟ ಸ್ವಲ್ಪ ಕಡಿಮೆ ಇದ್ದು ಸುರಕ್ಷತೆ ದೃಷ್ಟಿಯಿಂದ ಆಚೆ ಬರದೇ ಮನೆಯಲ್ಲಿರಬಹುದು ಎಂದು ಊಹಿಸಲಾಗಿದೆ.
ಬಸ್ ನಿಲ್ದಾಣದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಖಾಕಿ ಕಟ್ಟೆಚ್ಚರ ವಹಿಸಿದೆ, ಪೊಲೀಸ್ ಇಲಾಖೆ ಶಿವಾಜಿನಗರ ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಿದ್ದು, ಯಾವುದೇ ಬಂದ್ ವಾತಾವರಣ ಶಿವಾಜಿನಗರದಲ್ಲಿ ಕಂಡು ಬರುತ್ತಿಲ್ಲ.