ಹೈದರಾಬಾದ್ : ಕಾಲಿವುಡ್ ಹಾಟ್ ಗರ್ಲ್ ನಯನತಾರಾ ಗೆಳೆಯ ವಿಘ್ನೇಶ್ ಜೊತೆ ತಿರುಮಲಕ್ಕೆ ಆಗಮಿಸಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ದರ್ಶನದಿಂದ ವಿಘ್ನೇಶ್ ಜೊತೆ ನಯನತಾರಾ ಹೊರಬಂದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಯನತಾರಾ ಕಡು ನೀಲಿ ಬಣ್ಣದ ಫುಲ್ ಸ್ಲೀಪ್ ಅನಾರ್ಕಲಿ ಡ್ರೆಸ್ ಧರಿಸಿದ್ರೆ, ವಿಘ್ನೇಶ್ ಶ್ವೇತ ಪಂಚೆ ಜೊತೆ ಕಡು ಕೆಂಪುಬಣ್ಣದ ಶಾಲು ಧರಿಸಿ ಪಕ್ಕಾ ಟ್ರೆಡಿಶನಲ್ ಲುಕ್ ನಲ್ಲಿ ಮಿಂಚಿದರು. ದೇವಸ್ಥಾನದಿಂದ ಹೊರ ಬಂದ ಬಳಿಕ ಕ್ಯೂಟ್ ಜೋಡಿ ಕ್ಯಾಮೆರಾಗಳಿಗೆ ಪೋಸ್ ನೀಡಿದರು.
ಇದನ್ನೂ ಓದಿ : ನಿನ್ನ ಮಾತುಗಳನ್ನು ಎಂದೆಂದಿಗೂ ಕೇಳುತ್ತೇನೆ – ವಿಶ್ವ ಮಗಳ ದಿನಾಚರಣೆಗೆ ಶುಭ ಹಾರೈಸಿದ ಯಶ್
ಸೆಪ್ಟೆಂಬರ್ 18ರಂದು ಗೆಳೆಯ ವಿಘ್ನೇಶ್ ಹುಟ್ಟುಹಬ್ಬದ ಹಿನ್ನೆಲೆ ನಯನತಾರಾ ವಿಶೇಷ ಪಾರ್ಟಿ ಆಯೋಜಿಸಿದ್ದರು. ಈ ಕುರಿತು ಬರ್ತ್ ಡೇ ಪಾರ್ಟಿ ಫೋಟೋಗಳನ್ನು ಸಹ ನಯನತಾರಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.
#VikkyNayan 🙏🏻 pic.twitter.com/D2u3vqWk51
— Nayanthara✨ (@NayantharaU) September 27, 2021
ಈ ಫೋಟೋಗೆ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಬರ್ತ್ ಡೇ ಆಚರಣೆಯ ಫೋಟೋ ಹಂಚಿಕೊಂಡಿದ್ದ ವಿಘ್ನೇಶ್, ಗೆಳತಿಗೆ ಥ್ಯಾಂಕ್ಯೂ ಹೇಳಿದ್ದರು. ನೀನು ನೀಡಿರುವ ಈ ಗಿಫ್ಟ್ ನನ್ನ ಜೀವನದಲ್ಲಿ ಮರೆಯಲಾರೆ ಎಂದು ಗೆಳತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ನೆತ್ರಿಕನ್ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಬೆರಳಿನಲ್ಲಿದ್ದ ಉಂಗುರು ತೋರಿಸಿ ವಿಘ್ನೇಶ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿದ್ದರು. ಇದೇ ವೇಳೆ ಮದುವೆ ಯಾವಾಗ ಪ್ರಶ್ನೆಗೆ ಉತ್ತರಿಸಿದ್ದ ನಟಿ, ಸದ್ಯಕ್ಕೆ ಈ ಬಗ್ಗೆ ಯಾವುದೇ ದಿನಾಂಕ ಅಂತಿಮಗೊಳಿಸಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ : This is 83 : ಕ್ರಿಸ್‌ಮಸ್ ಗೆ ತೆರೆ ಕಾಣಲಿದೆ ರಣವೀರ್ ಸಿಂಗ್ ಅಭಿನಯದ “83” ಚಿತ್ರ
ಕಳೆದ ಕೆಲ ವರ್ಷಗಳಿಂದ ನಯನತಾರಾ ಮತ್ತು ವಿಘ್ನೇಶ್ ನಡುವಿನ ಪ್ರೇಮ ಕಹಾನಿ ಬಣ್ಣದ ಲೋಕದಲ್ಲಿ ಸಖತ್ ಸೌಂಡ್ ಮಾಡಿತ್ತು. ಆದ್ರೆ ಜೋಡಿ ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡಿರಲಿಲ್ಲ. ದಕ್ಷಿಣ ಭಾರತದ ಸಿನಿ ಅಂಗಳದ ಬಹುಬೇಡಿಕೆಯ ನಟಿಯಾಗಿರುವ ನಯನತಾರಾ ಹಲವು ಸ್ಟಾರ್ ಗಳ ಜೊತೆ ತೆರೆಹಂಚಿಕೊಂಡಿದ್ದಾರೆ. 2003ರಲ್ಲಿ ಮಲಯಾಳಂನ ಮನಸ್ಸಿನಕ್ಕರೆ ಚಿತ್ರದ ಮೂಲಕ ಕ್ಯಾಮೆರಾ ಫೇಸ್ ಮಾಡಿದ್ದರು. ನಂತರ ಆರ್ಯ, ಲಕ್ಷ್ಮಿ, ಚಂದ್ರಮುಖಿ, ರಪ್ಪಕೈ, ಬಾಡಿಗಾರ್ಡ್, ಸಿಂಹ, ಕನ್ನಡದ ಸೂಪರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.