ಗಿನ್ನಿಸ್ ವಿಶ್ವ ದಾಖಲೆ ಸಂಸ್ಥೆ ಇತ್ತೀಚೆಗೆ ಅಮೆರಿಕಾದ ನಾಯಿಯೊಂದಕ್ಕೆ “ಅತ್ಯಂತ ಉದ್ದವಾಗಿರುವ ಶ್ವಾನ ಕಿವಿಗಳು(ಲಿವಿಂಗ್)” ಎಂಬ ದಾಖಲೆಯನ್ನು ನೀಡಿವೆ ಎಂದು ಗಿನ್ನಿಸ್ ಬಿಡುಗಡೆ ಮಾಡಿದೆ. ಲೌ ಹೆಸರಿನ 3 ವರ್ಷದ ಅಮೇರಿಕನ್ ಶ್ವಾನವೊಂದು ಈಗ ಹೊಸ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ 2022 ಪುಸ್ತಕದಲ್ಲಿ ತನ್ನ ಹೆಸರನ್ನು ದಾಖಲಿಸಿದೆ.

ಲೌ ಕಪ್ಪು ಮತ್ತು ಕಂದುಬಣ್ಣದ ಅಮೇರಿಕನ್ ಶ್ವಾನದ ಕಿವಿಗಳು ಬರೊಬ್ಬರಿ 13.38 ಇಂಚು ಉದ್ದವಿದ್ದು ಕನಿಷ್ಠ ಮೂಗಿನ ತುದಿಯರೆಗೆ ಚಾಚುತ್ತವೆ. ಅಮೆರಿಕದ ಒರೆಗಾನ್ ನ ವಾಸಿ ಪೈಗೆ ಓಲ್ಸೆನ್ ಈ ಶ್ವಾನದ ಮಾಲೀಕರಾಗಿದ್ದಾರೆ.

ಈ ಶ್ವಾನದ ಚಿತ್ರಗಳು ಮತ್ತು ವಿಡಿಯೋಗಳು ಇದೀಗ ವಿಶ್ವದಾದ್ಯಂತ ವೈರಲ್ ಆಗಿವೆ.