ಬೆಂಗಳೂರು : ನಗರದ ಲಕ್ಕಸಂದ್ರದಲ್ಲಿ ಮೂರಂತಸ್ಥಿನ ಕಟ್ಟಡವೊಂದು ನೋಡುನೋಡುತ್ತಿದ್ದಂತೆಯೇ ಧರೆಗುರುಳಿದ ಘಟನೆ ಇನ್ನು ಮುಂಜಾನೆ ಸಂಭವಿಸಿದೆ.
ಲಕ್ಕಸಂದ್ರದಲ್ಲಿ ನಮ್ಮ ಮೆಟ್ರೋದ ವಲಸೆ ಕಾರ್ಮಿಕರಿಗೆ ಇದ್ದ ಮೂರು ಅಂತಸ್ತಿನ ಕಟ್ಟಡವು ಸೋಮವಾರ ಬೆಳಿಗ್ಗೆ 11:45 ರ ಸುಮಾರಿಗೆ ಕುಸಿದಿದೆ. ಪೊಲೀಸರ ಪ್ರಕಾರ, ಇದುವರೆಗೆ ಯಾವುದೇ ಸಾವು -ನೋವುಗಳ ವರದಿಯಾಗಿಲ್ಲ.ಕಟ್ಟಡದಲ್ಲಿ ಸುಮಾರು 20 ಕಾರ್ಮಿಕರು ವಾಸಿಸುತ್ತಿದ್ದರು ಎಂದು ವರದಿಯಾಗಿದೆ.