ಮುಂಬೈ: 1983 ಭಾರತಕ್ಕೆ ಐತಿಹಾಸಿಕ ವರ್ಷ, ಕ್ರಿಕೆಟ್ ಜಗತ್ತಿನಲ್ಲಿ ಭಾರತ ಹೊಸ ಮೈಲುಗಲ್ಲು ಸಾಧಿಸಿತ್ತು, ಟೀಂ ಇಂಡಿಯಾ ಮೊಟ್ಟ ಮೊದಲ ವಿಶ್ವಕಪ್‌ಗೆ ಮುತ್ತಿಕ್ಕಿತ್ತು. ಇದೇ ಕಥೆಯನ್ನು ಆಧರಿಸಿ ನಿರ್ಮಿಸಲಾಗಿರುವ 83 ಚಿತ್ರ ಇದೇ ಕ್ರಿಸ್‌ಮಸ್ ಗೆ ತೆರೆ ಕಾಣಲಿದೆ.

1983ಯಲ್ಲಿ ಟೀಂ ಇಂಡಿಯಾದ ನಾಯಕನಾಗಿದ್ದ ಕಪಿಲ್‌ದೇವ್ ಪಾತ್ರದಲ್ಲಿ ರಣವೀರ್‌ಸಿಂಗ್ ಅಭಿನಯಿಸಿದ್ದು 80 ರ ದಶಕದ ಕ್ರಿಕೆಟ್ ಸಾಧನೆಯನ್ನು ತೆರೆಮೇಲೆ ತೆರವು ಪ್ರಯತ್ನ ಮಾಡಲಾಗಿದೆ.
83 ಚಿತ್ರವನ್ನು ಖ್ಯಾತ ನಿರ್ದೇಶಕ ಕಬೀರ್ ಖಾನ್ ನಿರ್ದೇಶಿಸಿದ್ದು, ಕ್ರಿಕೆಟ್ ವಿಶ್ವಕಪ್ ವಿಜಯದ ದಂತಕಥೆಯ ಸುತ್ತ ಹಲವು ಸ್ವಾರಸ್ಯಕರ ಘಟನೆಗಳನ್ನು ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ರಣವೀರ್ ಗೆ ದೀಪಿಕಾ ಪಡುಕೋಣೆ ನಾಯಕ ನಟಿಯಾಗಿದ್ದು, ಕಪಿಲ್‌ದೇವ್ ಪತ್ನಿಯಾಗಿ ನಟಿಸಿದ್ದಾರೆ.

ಅಕ್ಟೋಬರ್ 22ರಿಂದ ಚಿತ್ರಮಂದಿರಗಳನ್ನು ತೆರೆಯುವುದಾಗಿ ಮಹಾರಾಷ್ಟ್ರದ ಸಿಎಂ ಉದ್ದವ್ ಠಾಕ್ರೆ ಸೆಪ್ಟೆಂಬರ್ 25ರಂದು ಘೋಷಿಸಿದ ಬಳಿಕ 83 ಚಿತ್ರ ತಂಡ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರವು ಪಂಚ ಭಾಷೆಗಳಲ್ಲಿ ತೆರಕಾಣಲಿದ್ದು ಹಿಂದಿ, ಕನ್ನಡ, ತೆಲುಗು ತಮಿಳು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಲಿದೆ ಎಂದು ಚಿತ್ರತಂಡವು ಅಧಿಕೃತವಾಗಿ ಹೇಳಿದೆ.