ಬೆಂಗಳೂರು: ವಿಶ್ವ ಮಗಳ ದಿನಾಚರಣೆ ಪ್ರಯುಕ್ತ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮಗಳು ಐರಾಗೆ ಆತ್ಮೀಯವಾಗಿ ಶುಭಕೋರಿದ್ದು ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಾನು ನಿನ್ನ ಮಾತುಗಳನ್ನು ಎಂದೆಂದಿಗೂ ಕೇಳುತ್ತೇನೆ. ಹೆಣ್ಣು ಮಕ್ಕಳು ಜೀವನವನ್ನು ವಿಶೇಷ ಎನಿಸುವಂತೆ ಮಾಡುತ್ತಾರೆ. ವಿಶ್ವದ ಎಲ್ಲಾ ಹೆಣ್ಣು ಮಕ್ಕಳಿಗೆ ವಿಶ್ವ ಮಗಳ ದಿನಾಚರಣೆ ಶುಭಾಶಯಗಳು ಎಂದು ಯಶ್ ಶುಭ ಹಾರೈಸಿದ್ದಾರೆ.

ಯಶ್ ಅವರ ಶುಭ ಸಂದೇಶಕ್ಕೆ ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗಳ ಜೊತೆ ಇರುವ ಯಶ್ ಅವರ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ ವಿಶ್ವ ಮಗಳ ದಿನಾಚರಣೆಯ ಶುಭಾಶಯವನ್ನು ಅಭಿಮಾನಿಗಳು ಕೋರಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಸಧ್ಯ ಕೆಜಿಎಫ್ 2 ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದ ಈ ಚಿತ್ರವನ್ನು ಮುಂದಿನ ವರ್ಷದ ಏಪ್ರಿಲ್ 14ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಕೆಜಿಎಫ್ 2 ಚಿತ್ರದಲ್ಲಿ ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ಪ್ರಸಿದ್ಧ ಕಲಾವಿದರು ನಟಿಸುತ್ತಿದ್ದು ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದನ್ನೂ ಓದಿ: This is 83 : ಕ್ರಿಸ್‌ಮಸ್ ಗೆ ತೆರೆ ಕಾಣಲಿದೆ ರಣವೀರ್ ಸಿಂಗ್ ಅಭಿನಯದ “83” ಚಿತ್ರ