ತೊಂಬತ್ತರ ದಶಕದಲ್ಲಿ ವಿಶ್ವದಾದ್ಯಂತ ಬಿಡುಗಡೆಗೊಂಡ ಹಾಲಿವುಡ್ ನ ಖ್ಯಾತ ಅನಿಮೇಷನ್ ಚಿತ್ರ ದಿ ಲಯನ್ ಕಿಂಗ್ ಎಲ್ಲರಿಗೂ ಚಿರಪರಿಚಿತ.

ಅದರಲ್ಲಿ ಮೂಫಾಸ ಪಾತ್ರ ಗೊತ್ತಿಲ್ಲದವರು ಬಹುಷಃ ಯಾರು ಇಲ್ಲ. ಚಿತ್ರದ ಒಂದು ಸನ್ನಿವೇಶದಲ್ಲಿ ಮೂಫಾಸ ತನ್ನ ಅಣ್ಣನ ಜೊತೆ ಕಾದಾಡುತ್ತಾ ಆಳವಾದ ಕಣಿವೆಗೆ ಬಿದ್ದು ಸಾಯುವಂತಹ ದೃಶ್ಯ ಒಂದಿದೆ. ಬಹುತೇಕ ಈ ದೃಶ್ಯವು ಪ್ರತಿಯೊಬ್ಬರ ಕಣ್ಣಂಚಲ್ಲಿ ಒಂದು ಹನಿ ಮೂಡಿಸುತ್ತದೆ. ಅದಕ್ಕೆ ಕಾರಣ ಮೂಫಾಸ ತನ್ನ ಅಣ್ಣನಿಂದಲೇ ಉದ್ದೇಶಪೂರ್ವಕವಾಗಿ ಸಾಯಲ್ಪಡುತ್ತದೆ.

ಇದನ್ನು ನೋಡಿದ ಮೂಫಾಸನ ಮಗ ಸಿಂಬ ತನ್ನ ತಂದೆಯ ಸಾವಿಗೆ ತಾನೇ ಕಾರಣವೆಂದು ತಿಳಿದು ತನ್ನ ಕಾಡನ್ನು ಬಿಟ್ಟು ಬೇರೆ ಕಡೆ ಹೊರಟುಹೋಗುತ್ತದೆ ಚಿತ್ರದ ಈ ದೃಶ್ಯವು ಪ್ರತಿಯೊಬ್ಬರಿಗೂ ಬಹಳ ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳುತ್ತದೆ. ಈ ದೃಶ್ಯವನ್ನು ಯಾರು ಸಹ ಮರೆಯಲು ಸಾಧ್ಯವಿಲ್ಲ.

ಈಗ ಇಂತಹುದೇ ಒಂದು ದೃಶ್ಯವನ್ನು ನಿಜ ಜೀವನದಲ್ಲಿ ನೀವು ಎಂದಾದರೂ ನೋಡಿದ್ದೀರಾ. ಒಂದು ವೇಳೆ ಇಲ್ಲ ಅಂದರೆ ನಾವು ಇಂದು ತೋರಿಸುತ್ತೇವೆ ಬನ್ನಿ. ದಿ ಲಯನ್ ಕಿಂಗ್ ಚಿತ್ರದ ಐತಿಹಾಸಿಕ ದೃಶ್ಯವನ್ನು ಎರಡು ಮಾರ್ಜಾಲಗಳು ನಕಲಿಕರಿಸಿವೆ.
ವ್ಯಕ್ತಿಯೊಬ್ಬ ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದು ದ ಲಯನ್ ಕಿಂಗ್ ಚಿತ್ರದ ರೀತಿಯಲ್ಲಿಯೇ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾನೆ ಇದನ್ನ ನೋಡಿದ ಪ್ರೇಕ್ಷಕರು ವಾವ್ ಎನ್ನುತ್ತಿದ್ದಾರೆ. ನೀವಿನ್ನು ಆ ವಿಡಿಯೋವನ್ನ ನೋಡಿಲ್ಲವೆಂದರೆ ಇಲ್ಲಿದೆ ನೋಡಿ.