ದಾವಣಗೆರೆ : ನಗರದ ಹಳೆ ಪ್ರವಾಸಿ ಮಂದಿರ ರಸ್ತೆಯ ಮಲ್ಲಿಕಾರ್ಜುನ ಲಾಡ್ಜ್ ಹಾಗೂ ಸಾರಸ್ವತ ಬ್ಯಾಂಕ್ ಹಿಂಭಾಗದಲ್ಲಿರುವ ಮೊಬೈಲ್ ಟವರ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಅವಘಡಕ್ಕೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಅಗ್ನಿಶಾಮಕ ದಳ ಸಕಾಲದಲ್ಲಿ ಆಗಮಿಸಿ ಬೆಂಕಿ ನಂದಿಸುವ ಮೂಲಕ ಅಪಾಯವನ್ನು ತಪ್ಪಿಸಿದೆ. ಅಗ್ನಿಶಾಮಕದಳದವರು ಕೂಡಲೇ ಸ್ಥಳಕ್ಕೆ ಬಾರದೇ ಇರುತ್ತಿದ್ದರೆ ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿಯ ಜ್ವಾಲೆ ಹರಡುವ ಸಾಧ್ಯತೆ ಇತ್ತು.
ಬ್ಯಾಟರಿ, ಜನರೇಟರ್, ಕೇಬಲ್ ಗಳು ಬೆಂಕಿಗೆ ಆಹುತಿಯಾಗಿದೆ. ಇತ್ತೀಚೆಗೆ ರಾಜ್ಯದಲ್ಲಿ ಅಗ್ನಿ ಅವಘಡಗಳು ಹೆಚ್ಚುತ್ತಿದ್ದು ಕಳೆದ ಒಂದೇ ವಾರದಲ್ಲಿ ಬೆಂಗಳೂರಲ್ಲಿ ಮೂರು ಘಟನೆಗಳು ಸಂಭವಿಸಿದ್ದು ಮೊದಲಿಗೆ ಅಪಾರ್ಟ್ ಮೆಂಟ್ ಒಂದರಲ್ಲಿ ದುರಂತ ಸಂಭವಿಸಿ ಇಬ್ಬರು ಮೃತರಾಗಿದ್ದರೆ ನಂತರ ಅತ್ತಿಬೆಲೆ ಸಮೀಪದ ಕಾರ್ಖಾನೆಯೊಂದರಲ್ಲಿ ಬೆಂಕಿ ತನ್ನ ರೌದ್ರಾವತಾರ ಮೆರೆದಿತ್ತು. ಮತ್ತೊಂದು ಬೆಂಕಿ ಅವಘಡ ಬೆಂಗಳೂರಿನ ಜನನೀಬಿಡ ಪ್ರದೇಶದಲ್ಲಿದ್ದ ಚಿಕ್ಕ ಗೋಡೌನ್ ವೊಂದರಲ್ಲಿ ಸಂಭವಿಸಿ ಅಲ್ಲಿ ಹಲವರು ಮೃತರಾಗಿದ್ದರು.