ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (UPSC) 2020ರಲ್ಲಿ ನಡೆದ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಘೋಷಿಸಿದೆ.
ಈ ಪರೀಕ್ಷೆಯಲ್ಲಿ ಒಟ್ಟು 761 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಶುಭಂ ಕುಮಾರ್ ಎಂಬ ಅಭ್ಯರ್ಥಿ ದೇಶಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.ಅವರ ರೋಲ್ ನಂಬರ್ 1519294 ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಈ ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು UPSCಯ ಅಧಿಕೃತ ವೆಬ್ಸೈಟ್ ಕ್ಲಿಕ್ ಮಾಡಿ ಫಲಿತಾಂಶ ಪರಿಶೀಲಿಸಬಹುದು.

ಸಾಮಾನ್ಯ ವರ್ಗದ 263 ಅಭ್ಯರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳ 86, ಇತರೆ ಹಿಂದುಳಿದ ವರ್ಗಗಳ 229, ಪರಿಶಿಷ್ಟ ಜಾತಿಯ 122, ಪರಿಶಿಷ್ಟ ಪಂಗಡದ 61 ಅಭ್ಯರ್ಥಿಗಳು 2020ರ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು 761 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದಲ್ಲದೇ 150 ಅಭ್ಯರ್ಥಿಗಳನ್ನು ಮೀಸಲಾತಿಗೆ ಅವಕಾಶ ನೀಡಲಾಗಿದೆ ಎಂದು UPSC ಪ್ರಕಟನೆಯಲ್ಲಿ ತಿಳಿಸಿದೆ.