ಬೆಂಗಳೂರು: ಕನ್ನಡ ಚಿತ್ರರಸಿಕರನ್ನು ರಂಜಿಸಲು ಇಂದು ಎರಡು ಚಿತ್ರಗಳು ಬಿಡುಗಡೆಗೊಂಡಿವೆ. ಇದರಲ್ಲಿ ಇತ್ತೀಚೆಗೆ ನಿಧರರಾದ ಪ್ರತಿಭನ್ವಿತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ ಲೀಡ್ ರೋಲ್‌ನಲ್ಲಿ ನಟಿಸಿರುವಂತಹ ಹಾಗೂ ತನ್ನ ಪೋಸ್ಟರ್ನಿಂದಯೇ ಗಾಂಧಿನಗರದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಪುಕ್ಸಟ್ಟೆ ಲೈಫ್ (Puksatte lifu) ಚಿತ್ರವು ಈ ವಾರ ತೆರೆಕಂಡಿದೆ.
ಈ ಚಿತ್ರ ಸಂಚಾರಿ ವಿಜಯ್ ಅವರ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು, ಇಂದು ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರವನ್ನು ಅರವಿಂದ್ ಕುಪ್ಲಿಕರ್ ನಿರ್ದೇಶಿಸಿದ್ದಾರೆ. ಈ ಚಿತ್ರವು ಸಮಾಜದ ಅಮಾಯಕರನ್ನು ಭ್ರಷ್ಟ ವ್ಯವಸ್ಥೆ ಯಾವ ರೀತಿ ಬಳಸಿಕೊಳ್ಳುತ್ತದೆ ಎಂಬುವುದನ್ನು ಹಾಸ್ಯದ ಮೂಲಕ ತಿಳಿಸಿದ್ದಾರೆ. ಈ ಚಿತ್ರಕ್ಕೆ ನಾಗರಾಜು ಸೋಮಯಾಜಿ ಬಂಡವಾಳ ಹಾಕಿದ್ದಾರೆ, ಚಿತ್ರದ ತಾರಾಗಣದಲ್ಲಿ ಮುಖ್ಯಮಂತ್ರಿ ಚಂದ್ರು, ಅಚ್ಯುತ್ ಕುಮಾರ್ ಅಂತಹ ಅನುಭವಿ ಕಲಾವಿದರಿದ್ದು, ಇದು ಬಹುತೇಕ ರಂಗಕರ್ಮಿಗಳಿಂದ ಕೂಡಿದೆ.
ಹಳ್ಳಿಯಲೊಂದು ಪ್ರೇಮ ಕಥೆ ಜನುಮದ ಜಾತ್ರೆ
ಹೊಸಬರೆ ಕೂಡಿಕೊಂಡು ಮಾಡಿರುವಂತಹ ಚಿತ್ರ ಜನುಮದ ಜಾತ್ರೆ, ಶ್ರೀ ಮಣಿಕುಪ್ಪೆ ಆಂಜನೇಯಸ್ವಾಮಿ ಪ್ರೊಡಕ್ಷನ್ ಅಡಿಯಲ್ಲಿ ದೊಡ್ಮನೆ ಮಂಜುನಾಥ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಆಟೋ ಚಾಲಕರಾಗಿದ್ದ ಆಟೋ ಆನಂದ್‌ರವರು ನಿರ್ದೇಶಿಸಿದ್ದಾರೆ.

ಪಕ್ಕಾ ಹಳ್ಳಿ ಸೊಗಡಿನ ಚಿತ್ರ ಇದಾಗಿದ್ದು ಅಪ್ಪ-ಅಮ್ಮ ಅವರನ್ನು ಒಪ್ಪಿಸಿ, ಯಾವ ರೀತಿ ಪ್ರೇಮಿಗಳು ಮದುವೆ ಆಗುತ್ತಾರೆ ಎಂಬುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಈ ಚಿತ್ರಕ್ಕೆ ವಿನು ಮನಸ್ಸು ಸಂಗೀತ ನೀಡಿದ್ದು, ಮುಂಜಾನೆ ಮಂಜು ಅವರ ಛಾಯಾಗ್ರಹಣ ಹಾಗೂ ದುರ್ಗಾ ಪಿಎಸ್ ಅವರ ಸಂಕಲನ ಈ ಚಿತ್ರಕ್ಕಿದೆ, ಚಿತ್ರದ ತಾರಾಗಣದಲ್ಲಿ ಮದನ್ ಕುಮಾರ್, ಚೈತ್ರಾ ಮಂಡ್ಯ, ಕೆಂಪ, ಅಂಜಲಿ , ಪರಮೇಶ್ ಸೂರ್ಯ,ಪ್ರಕಾಶ್ ಮುಂತಾದವರಿದ್ದಾರೆ.
~ ಕರಡಿಗಾಲ ಅರುಣ್ ಕುಮಾರ್