ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ ನಡೆದಿದೆ. ಅತ್ತಿಬೆಲೆಯ ಲೇಟ್ ಕೆಮಿಕಲ್ ಪ್ರೈವೇಟ್ ಲಿಮಿಟೆಡ್ ನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಪೋಟಗೊಂಡು ಅಗ್ನಿ ದುರಂತ ಸಂಭವಿಸಿದೆ.

ಸುಮಾರು1 ಗಂಟೆ ಸುಮಾರಿಗೆ ಬಾಯ್ಲರ್ ಸ್ಪೋಟಗೊಂಡು ಕೆಮಿಕಲ್ ಫ್ಯಾಕ್ಟರಿಗೆ ಹೊತ್ತಿ ಉರಿದಿದೆ. ಕೆಮಿಕಲ್ ಫ್ಯಾಕ್ಟರಿ ಆಗಿರೋ ಹಿನ್ನಲೆ ಅಗ್ನಿಯ ಕೆನ್ನಾಲಿಗೆಯ ತೀವ್ರತೆ ಕೂಡ ಹೆಚ್ಚಾಗಿದ್ದು ಸ್ಥಳಕ್ಕೆ ಎರಡು ಅಗ್ನಿಶಾಮಕ ದೌಡಾಯಿಸಿದ್ದಾವೆ.. ಸದ್ಯ ಬೆಂಕಿ ಆರಿಸುವ ಕಾರ್ಯವನ್ನು ಅಗ್ನಿಶಾಮಕ ದಳದವರು ಮಾಡುತ್ತಿದ್ದಾರೆ..
ಒಬ್ಬ ವ್ಯಕ್ತಿ ಸಾವನ್ನಪ್ಪಿರುವ ಶಂಕೆ ಇದ್ದು, 6 ಜನರಿಗೆ ಗಾಯವಾಗಿದೆ.. ಇನ್ನೂ ಇಬ್ಬರು ಸ್ಥಿತಿ ಗಂಭಿರವಾಗಿದೆ.. ಅಕ್ಕಪಕ್ಕದಲ್ಲಿ ಫ್ಯಾಕ್ಟರಿಗಳು ಇದ್ದು 100 ಮೀಟರ್ ಅಂತರದಲ್ಲಿ ಮನೆಗಳಿವೆ ಹೀಗಾಗಿ ಸದ್ಯ ಆತಂಕದ ವಾತಾವರಣ ಮನೆ ಮಾಡಿದೆ.
Bangalore blast boiler blast attibele chemical factory