ನವದೆಹಲಿ : ಹಲವಾರು ಖ್ಯಾತ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಮಾಡೆಲ್ ಒಬ್ಬರು ಕೂದಲಿನ ಟ್ರೀಟ್‌ಮೆಂಟ್ ಮತ್ತು ವಿನ್ಯಾಸಕ್ಕಾಗಿ ಹೋದಾಗ ತಪ್ಪಾದ ಹೇರ್ ಕಟ್ ಮಾಡಿದರ ಪರಿಣಾಮವಾಗಿ ತಮಗೆ ಸಿಕ್ಕ ಅವಕಾಶಗಳಿಂದ ವಂಚಿತರಾಗಿ ಪರಿಹಾರಕ್ಕಾಗಿ ಗ್ರಾಹಕ ವಾಜ್ಯಗಳ ಪರಿಹಾರ ವೇದಿಕೆ ಮೊರೆ ಹೋದ ಘಟನೆ ವರದಿಯಾಗಿದೆ.

ಇದಕ್ಕೂ ಮೇಲಾಗಿ ಮತ್ತೊಂದು ಅಚ್ಚರಿಯ ವಿಷಯ ಎನಪ್ಪಾ ಅಂದರೆ ಗ್ರಾಹಕ ವಾಜ್ಯಗಳ ಪರಿಹಾರ ವೇದಿಕೆ ದೆಹಲಿ ಮೂಲದ ಐಷಾರಾಮಿ ಹೋಟೆಲೊಂದಕ್ಕೆ ಈ ಘಟನೆಗೆ ಸಂಭಂದಿಸಿ ಆ ರೂಪದರ್ಶಿಗೆ ಬರೊಬ್ಬರಿ ಎರಡು ಕೋಟಿ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶ ಕೊಟ್ಟಿದೆ.
ಇದನ್ನೂ ಓದಿ : ಮತ್ತೊಂದು ಸಾಧನೆಯತ್ತ KMC ಆಸ್ಪತ್ರೆ: ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ
ಖ್ಯಾತ ರೂಪದರ್ಶಿ ಆಶ್ನಾ ರಾಯ್ ಹೇರ್ ಕಟ್ ಮಾಡಿಸಿಕೊಳ್ಳಲು ಮತ್ತು ಕೂದಲಿನ ಆರೈಕೆಗೆ ಹೊಟೇಲ್ ನ ಸಲೂನ್ ಗೆ ತೆರಳಿದ್ದಾಗ ಅಲ್ಲಿನ ಸಿಬ್ಬಂದಿ ತಪ್ಪಾದ ಹೇರ್ ಕಟ್ ಮಾಡಿದ್ದರು. ಇದರಿಂದ ರೂಪದರ್ಶಿ ಆಶ್ನಾ ರಾಯ್ ಹಲವಾರು ಕಂಪನಿಗಳ ಕೇಶ ಉತ್ಪನ್ನಗಳ ಜಾಹೀರಾತುಗಳನ್ನು ಕಳೆದುಕೊಂಡಿದ್ದರು. ಹಾಗಾಗಿ ಕಂಪನಿ ವಿರುದ್ದ ಎನ್ ಸಿಡಿ ಆರ್ ಸಿ (The National Consumer Disputes Redressal Commission) ದೂರು ನೀಡಿದ್ದರು. ಆಕೆಯ ದೂರಿನ ಅನ್ವಯ ನ್ಯಾಯಮೂರ್ತಿ ಆರ್ ಕೆ ಅಗರವಾಲ್ ಮತ್ತು ಡಾ ಎಸ್. ಎಂ. ಕಾಂತಿಕರ್ ಈ ಆದೇಶವನ್ನು ಜಾರಿಗೊಳಿಸಿದ್ದಾರೆ. ರೂಪದರ್ಶಿಗೆ 2 ಕೋಟಿ ಪರಿಹಾರ ನೀಡಬೇಕು ಎಂದು ಆದೇಶ ನೀಡಿದ್ದಾರೆ.

ಘಟನೆಯ ವಿವರ
ರೂಪದರ್ಶಿ ಹೇಳಿರುವುದಕ್ಕಿಂತ ಹೆಚ್ಚು ಕೂದಲನ್ನು ಸ್ಟೈಲಿಸ್ಟ್ ಕತ್ತರಿಸಿರುವುದನ್ನ ಗಮನಿಸಿ, ಅದನ್ನು ವಿರೋಧಿಸಿದ್ದಾರೆ. ಹೀಗಾಗಿ ಸಲೂನ್ ಸಿಬ್ಬಂದಿ ರೂಪದರ್ಶಿಗೆ ಉಚಿತ ಕೂದಲಿನ ಚಿಕಿತ್ಸೆ ಆಫರ್ ನೀಡಿದ್ದಾರೆ. ಇದು ರೂಪದರ್ಶಿ ಇನ್ನಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಅಲ್ಲದೇ, ಆ ಉತ್ಪನ್ನಗಳಿಂದಾಗಿ ಕೂದಲಿಗೆ ಹಾನಿಯುಂಟಾಗಿತ್ತು. ಅದಲ್ಲದೇ ಇದರಿಂದ ಅವರಿಗೆ ಸಾಕಷ್ಟು ಸಮಸ್ಯೆಯಾಗಿದೆ ಎಂದು ಆಯೋಗ ತಿಳಿಸಿದೆ. ಘಟನೆಯ ಬಳಿಕ ರೂಪದರ್ಶಿ ನೋವು ಮತ್ತು ಆಘಾತವನ್ನು ಅನುಭವಿಸುತ್ತಿದ್ದರು ಎಂದು ಆಯೋಗವು ಹೇಳಿದೆ.
Wrong Hair Treatment 2 Crore compensation New Delhi