ಬೆಂಗಳೂರು : ಇತ್ತೀಚಿನ ದಿನಳಲ್ಲಿ ಮಹಿಳೆಯರಿಗೆ ಮನೋರಂಜನೆ ಸಿಗುವುದು ಟಿ.ವಿಯಲ್ಲಿ ಮಾತ್ರ. ಅದರಲ್ಲೂ ಸೀರಿಯಲ್ ಅಂದ್ರೆ ಮನೆಯಲ್ಲಿರುವ ಮಹಿಳೆಯರಿಗೆ ಅಚ್ಚುಮೆಚ್ಚು. ಈಗಂತೂ ಕನ್ನಡದಲ್ಲಿ ಒಂದರ ನಂತರ ಒಂದು ಹೊಸ ಕಥಗಳು ಹುಟ್ಟಿಕೊಳ್ಳುತ್ತಿವೆ. ಒಂದಕ್ಕಿಂತ ಒಂದು ಚಾನೆಲ್ ಗಳಲ್ಲಿ ವಿಭಿನ್ನವಾದ ಕಥೆ ಇರುವ ಸೀರಿಯಲ್ ಗಳು ಮೂಡಿ ಬರುತ್ತಿವೆ. ಟಿವಿ ಚಾನೆಲ್ ನವರು ಮತ್ತು ಧಾರವಾಹಿ ತಯಾರಕರು, ಈ ಕಥೆಯನ್ನು ಜನ ಇಷ್ಟಪಡುತ್ತಾರೆ ಎಂದು ಭಾವಿಸಿ, ಸೀರಿಯಲ್ ಶುರು ಮಾಡುತ್ತಾರೆ. ಆದರೆ, ಕೆಲವೊಂದು ಬಾರಿ ಸೀರಿಯಲ್ ತುಂಬಾ ಕೂತೂಹಲಕರವಾಗಿದ್ದರೂ, ಧಾರವಾಹಿ ನಿಲ್ಲಿಸುವ ಸಂಧರ್ಭ ಎದುರಾಗುತ್ತದೆ.

ಈ ಸಾಲಿನಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೂಮಳೆ ಧಾರವಾಹಿ ಕೂಡ ಸೇರಿ ಈಗ ಪ್ರಸಾರ ನಿಲ್ಲಿಸಿದೆ. ಲಹರಿಗೆ ಕೂಡ ಯದುವೀರ್ ಮೇಲೆ ಬಹಳ ಪ್ರೀತಿ ಬಂದಿದೆ. ಯದುವೀರ್ ಮಗ ಇಶಾನ್ ನನ್ನು ಸ್ವಂತ ಮಗನಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾಳೆ ಲಹರಿ. ಸಧ್ಯಕ್ಕೆ ಸೀರಿಯಲ್ ನಲ್ಲಿ ಬ್ಯೂಟಿ ಕಾಂಟೆಸ್ಟ್ ನಡೆಯುತ್ತಿದ್ದು, ಲಹರಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾಳೆ. ಧಾರವಾಹಿ ಒಂದು ರೀತಿ ಕುತೂಹಲಕಾರಿಯಿಯಾಗಿ ಸಾಗುತ್ತಿದ್ದರು ನಿಲ್ಲಿಸುವ ನಿರ್ಧಾರ ಮಾಡಲಾಗಿದೆ.

ಸದ್ಯ ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಸೇರಿದಂತೆ ಇರುವ ನಾಲ್ಕೈದು ಮನರಂಜನಾ ಚಾನೆಲ್ಗಳಲ್ಲಿ ಸೀರಿಯಲ್ಗಳದೇ ಮೇಲುಗೈ. ಕಲರ್ಸ್ ಕನ್ನಡ ಚಾನೆಲ್ನಲ್ಲಿ ಸದ್ಯ ಸಾಕಷ್ಟು ಮನರಂಜನೆ ನೀಡುತ್ತಿರೋದು ಕನ್ನಡತಿ, ನನ್ನರಸಿ ರಾಧೆ, ಮಂಗಳಗೌರಿ ಮದುವೆ ಧಾರವಾಹಿಗಳು ಜನರ ಮನಸ್ಸನ್ನು ಗೆದ್ದಿದೆ. ಧಾರವಾಹಿಗಳಿಗೆ ಟಿ.ಆರ್ .ಪಿ ರೇಟ್ ಮುಖ್ಯವಾಗಿರುತ್ತದೆ. ಧಾರವಾಹಿಗಳು ಕೂತುಹಲಕರವಾಗಿ ಇದ್ದರೂ ಟಿ.ಆರ್ .ಪಿ ಕಡಿಮೆ ಇರುವ ಕಾರಣ, ಧಾರವಾಹಿಯನ್ನು ನಿಲ್ಲಿಸಲಾಗುತ್ತದೆ. ಈ ಧಾರವಾಹಿಯಲ್ಲಿಯ ಟಿ.ಆರ್.ಪಿ ಕಡಿಮೆ ಆಗಿದೆ. ಆರಂಭದಲ್ಲಿ ಇದ್ದ ಟಿ.ಆರ್.ಪಿ ಈಗ ಇಲ್ಲದ ಕಾರಣ ಹೂಮಳೆ ಧಾರವಾಹಿಯನ್ನು ನಿಲ್ಲಿಸಲಾಗುತ್ತಿದೆ. ಧಾರವಾಹಿಯ ಅಭಿಮಾನಿಗಳಿಗೆ ಇದು ಬಹಳ ಬೇಸರ ತಂದಿದೆ.
ಇದನ್ನೂ ಓದಿ : Nikhil Kumarswamy and Revati : ದೊಡ್ಡ ಗೌಡರ ಮನೆಗೆ ಮರಿ ಮೊಮ್ಮಗನ ಎಂಟ್ರಿ
ಹೂಮಳೆಯ ಕೊನೆಯ ದಿನ : ಹೂಮಳೆಯ ಧಾರವಾಹಿಯ ತಂಡ ಇಂದು ಕೊನೆದಿನದ ಶೂಟಿಂಗ್ ಮುಗಿಸಿ, ಒಟ್ಟಾಗಿ ಸೇರಿದ್ದಾರೆ. ಧಾರವಾಹಿಯ ಟೆಕ್ನಿಶಿಯನಿಂದ ಹಿಡಿದು ಧಾರವಾಹಿಯಲ್ಲಿ ಅಭಿನಯಿಸುವ ಎಲ್ಲರೂ ಒಟ್ಟಾಗಿ ಸೇರಿದ್ದಾರೆ. ಧಾರವಾಹಿಯ ಕೊನೆಯ ದಿನವೆಂದು ನಾನ್ ವೆಜ್ ಭೋಜನದ ಸಿದ್ಧತೆಯಲ್ಲಿ ಪ್ರತಿಯೊಬ್ಬರು ತೊಡಗಿದ್ದಾರೆ. ಚಂದನಾ ಅನಂತಕೃಷ್ಣ, ರಕ್ಷಿತಾ ಭಾಸ್ಕರ್, ಭವಾನಿ ಪ್ರಕಾಶ್, ಶೋಭಾ, ಶ್ರೀರಾಮ್, ಸೂರ್ಯ ಕಿರಣ್, ಅನುಪಲ್ಲವಿ ಗೌಡ ಹೀಗೆ ತೆರೆಯ ಹಿಂದೆ ಕೆಲಸ ಮಾಡುವವರು, ತೆರೆಯ ಮೇಲೆ ಮಿಂಚುವ ತಾರೆಯರು ಒಟ್ಟಾಗಿ ಒಂದೆಡೆ ಸೇರಿದ್ದಾರೆ. ಸದ್ಯ ಈ ಧಾರವಾಹಿಯ ನಂತರ ಬೇರೊಂದು ಕಾರ್ಯಕ್ರಮ ಬರುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ, ತರಾತುರಿಯಲ್ಲಿ ಧಾರವಾಹಿಯನ್ನು ಅರ್ಧಕ್ಕೆ ನಿಲ್ಲಿಸುವ ಪ್ರಯತ್ನ ಹೂಮಳೆ ತಂಡ ಮಾಡುತ್ತಿದೆ.