ಕನ್ನಡ, ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ನೆಲೆಸಿರುವ ಒಂದು ಭಾಷೆ. ಈ ಭಾಷೆಯ ವೈಭವವು ಶತಮಾನಗಳಷ್ಟು ಹಿಂದಿನದು ಮತ್ತು ಇದನ್ನು ಕರ್ನಾಟಕ ರಾಜ್ಯದಲ್ಲಿ ಮಾತ್ರ ಬಳಸಲಾಗಿದ್ದರೂ, ಈ ಭಾಷೆಯ ಶ್ರೀಮಂತಿಕೆಯು ಪ್ರಪಂಚದಾದ್ಯಂತ ಹರಡಿದೆ. ಕನ್ನಡದ ಬಗ್ಗೆ ನಿಮಗೆ ತಿಳಿಯದ ಅಥವಾ ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿರಬೇಕಾದ ಕೆಲವು ಸಂಗತಿಗಳನ್ನು ಇಂದಿನ ಈ ವಿಶೇಷ ಲೇಖನದಲ್ಲಿ ತಿಳಿಸಲಿದ್ದೆವೆ.

ಕನ್ನಡವು ಭಾರತದ ಅತ್ಯಂತ ಹಳೆಯ ಭಾಷೆಯಾಗಿದೆ

ವಿದೇಶಿ ಪ್ರಜೆ ಫರ್ಡಿನ್ಯಾಂಡ್ ಕಿಟೆಲ್ ನಿಘಂಟು ಬರೆದ ಏಕೈಕ ಭಾರತೀಯ ಭಾಷೆ ಕನ್ನಡ

ಕನ್ನಡವು ತಾರ್ಕಿಕವಾಗಿ ಮತ್ತು ವೈಜ್ಞಾನಿಕವಾಗಿ 99.99% ಪರಿಪೂರ್ಣವಾಗಿದೆ

ಕನ್ನಡ ಸಾಹಿತ್ಯ “ಕವಿರಾಜಮಾರ್ಗ” ವನ್ನು ಅಮೋಘವರ್ಷ ಬರೆದಾಗ, ಇಂಗ್ಲಿಷ್ ತೊಟ್ಟಿಲಲ್ಲಿ ಮಗುವಾಗಿತ್ತು ಮತ್ತು ಹಿಂದಿ ಇನ್ನೂ ಹುಟ್ಟಿರಲೇ ಇಲ್ಲ.

ಕನ್ನಡ ಲಿಪಿ ವಿಶ್ವ ಲಿಪಿಗಳ ರಾಣಿ – ಶ್ರೀ ವಿನೋಭಾ ಭಾವೆ

ಸಾಹಿತ್ಯಕ್ಕಾಗಿ ಗರಿಷ್ಟ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾರತೀಯ ಲೇಖಕ ಶ್ರೀ ಕುವೆಂಪು ಒಬ್ಬ ಹೆಮ್ಮೆಯ ಕನ್ನಡಿಗ

ಗರಿಷ್ಠ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾರತೀಯ ಭಾಷೆ ಕನ್ನಡ.
ಕನ್ನಡ -8, ಹಿಂದಿ -6, ತೆಲುಗು -2, ಮಲಯಾಳಂ -3 ಮತ್ತು ತಮಿಳು -2

ವಿಕಿಪೀಡಿಯಾ ಲೋಗೋದಲ್ಲಿ ಕಾಣಿಸುವ ಭಾರತೀಯ ಭಾಷೆಗಳಲ್ಲಿ ಕನ್ನಡವೂ ಒಂದು

ಚಾರಿಶನ್ ಮೈಮ್, ಪ್ರಾಚೀನ ಗ್ರೀಕ್ ನಾಟಕ (2 ನೇ ಶತಮಾನದಲ್ಲಿ) ಕನ್ನಡ ನುಡಿಗಟ್ಟುಗಳನ್ನು ಬಳಸಿದ್ದರು
