ಮುಂಬೈ : ಬಾಲಿವುಡ್ ಸ್ಟಾರ್‌ಗಳ ಬಗ್ಗೆ ಜನರಲ್ಲಿ ಸಾಕಷ್ಟು ಕ್ರೇಜ್ ಇದ್ದೆ ಇದೆ, ಹಿಂದಿ ಸಿನಿ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಗಳ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಇಷ್ಟ ಪಡುತ್ತಾರೆ. ವಿಶೇಷವಾಗಿ ಅಭಿಮಾನಿಗಳು ಅವರ ವೈಯಕ್ತಿಕ ಜೀವನದ ಬಗ್ಗೆ ತುಂಬಾ ಉತ್ಸುಕರಾಗಿರುತ್ತಾರೆ. ಇಂತಹ ಸನ್ನಿವೇಶದಲ್ಲಿ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಪ್ರೇಮ ವಿವಾಹವನ್ನು ಹೊಂದಿದ್ದ ಬಾಲಿವುಡ್ ಕಲಾವಿದರ ಬಗ್ಗೆ, ಆದರೆ ಈ ಬಾಲಿವುಡ್ ಕಲಾವಿದರು ಕಾರು ಬದಲಿಸುವ ಹಾಗೆ ತಮ್ಮ ಜೊತೆಗಿನ ವೈವಾಹಿಕ ಜೀವನಕ್ಕೆ ವಿಚ್ಛೇದನ ನೀಡಿ, ತಮ್ಮ ತಮ್ಮ ಜೋಡಿಗಳನ್ನು ಬದಲಾಯಿಸಿಕೊಳ್ಳುವ ಮೂಲಕ ವಿಚ್ಛೇದನ ಪಡೆದುಕೊಂಡಿರುವ ಬಾಲಿವುಡ್ ಕಲಾವಿದರು ಜೀವನಾಂಶವಾಗಿ ದೊಡ್ಡ ಮೊತ್ತವನ್ನು ಪಾವತಿಸಿದ್ದಾರೆ.

ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ : 90ರ ದಶಕದ ಜನಪ್ರಿಯ ನಟಿ, ಕರಿಷ್ಮಾ ಕಪೂರ್ 2003 ರಲ್ಲಿ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಆದರೆ ಮದುವೆಯಾದ 11 ವರ್ಷಗಳ ನಂತರ ಅವರು ವಿಚ್ಛೇದನ ಪಡೆದರು. ವರದಿಗಳ ಪ್ರಕಾರ ಕರಿಷ್ಮಾ ಅವರು ಸಂಜಯ್ ಅವರ ತಂದೆಯ ಮನೆಯನ್ನು ಪಡೆದಿದ್ದಾರೆ, ಆ ಮನೆಯನ್ನು ಕರಿಷ್ಮಾ ಕಪೂರ್ ಹೆಸರಿನಲ್ಲಿ ವರ್ಗಾಯಿಸಲಾಗಿದೆ. ಅದೇ ಸಮಯದಲ್ಲಿ ಸಂಜಯ್ ಪ್ರತಿ ತಿಂಗಳು ಮಕ್ಕಳ ವೆಚ್ಚಕ್ಕಾಗಿ 10 ಲಕ್ಷ ರೂಪಾಯಿಗಳನ್ನು ನೀಡುತ್ತಾರೆ ಎಂದು ವರದಿಯಾಗಿದೆ. ಕರಿಷ್ಮಾ ಮತ್ತು ಸಂಜಯ್ ಗೆ ಇಬ್ಬರು ಮಕ್ಕಳು ಇದ್ದಾರೆ.

ಹೃತಿಕ್ ರೋಷನ್ ಮತ್ತು ಸುಸೇನ್ನೆ ಖಾನ್ : ಬಾಲಿವುಡ್‌ನ ಅತ್ಯಂತ ದುಬಾರಿ ವಿಚ್ಛೇದನಗಳ ಪಟ್ಟಿಯಲ್ಲಿ ನಟ ಹೃತಿಕ್ ರೋಷನ್ ಅವರ ಹೆಸರೂ ಸೇರಿದೆ. 2000 ರಲ್ಲಿ ಹೃತಿಕ್ ಸುಸ್ಸಾನ್ನೆ ಖಾನ್ ಅವಳನ್ನು ವಿವಾಹವಾದರು. ಆದರೆ ಇವರಿಬ್ಬರ ವಿವಾಹವು ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಅವರು 2013ರಲ್ಲಿ ವಿಚ್ಛೇದನ ಪಡೆದರು. ವರದಿಗಳ ಪ್ರಕಾರ ಸುಸ್ಸಾನ್ನೆ ಜೀವನಾಂಶವಾಗಿ 400 ಕೋಟಿ ರೂ. ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ : ಸದ್ಯ ಕರೀನಾ ಕಪೂರ್ ಅವರನ್ನು ಮದುವೆಯಾಗಿರುವ ಸೈಫ್ ಅಲಿ ಖಾನ್ 1991ರಲ್ಲಿ ಅಮೃತಾ ಸಿಂಗ್ ರವರೊಡನೆ ಪ್ರೇಮ ವಿವಾಹವಾಗಿದ್ದರು. ಅಮೃತಾ ತನ್ನ ವಯಸ್ಸಿನಲ್ಲಿ ಸೈಫ್ ಅಲಿಗಿಂತಲೂ 13 ವರ್ಷ ದೊಡ್ಡವಳು. ಇವರಿಬ್ಬರಲ್ಲೂ ವಯಸ್ಸಿನ ಭೇದಭಾವ ಮೂಡದಿದ್ದರೂ ಇಬ್ಬರೂ ಮದುವೆಯಾದರು. ಆದರೆ 2004ರಲ್ಲಿ ಇಬ್ಬರೂ ಬೇರೆಯಾದರು. ಸಂದರ್ಶನವೊಂದರಲ್ಲಿ ಸೈಫ್ ವಿಚ್ಛೇದನದ ಸಮಯದಲ್ಲಿ 5 ಕೋಟಿ ಜೀವನಾಂಶವನ್ನು ಕೊಟ್ಟಿದ್ದಾರೆ ಎಂದು ಹೇಳಿದ್ದರು

ಸಂಜಯ್ ದತ್ ಮತ್ತು ರಿಯಾ ಪಿಳ್ಳೈ : ಬಾಬಾ ಎಂದೇ ಜನಪ್ರಿಯತೆ ಪಡೆದಿರುವ ಸಂಜಯ್ ದತ್ ಎರಡನೇ ವಿವಾಹವಾಗಿ ರಿಯಾ ಪಿಳ್ಳೈ ಅವರನ್ನು ವಿವಾಹವಾಗಿದ್ದರು. 1998ರಲ್ಲಿ ಇಬ್ಬರೂ ಮದುವೆಯಾದರೂ ಇವರಿಬ್ಬರ ವೈವಾಹಿಕ ಜೀವನವು ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಈ ಜೋಡಿ 2005ರಲ್ಲಿ ವಿಚ್ಛೇದನ ಪಡೆಯಿತು. ಸಂಜಯ್ ದತ್ ರಿಯಾ ಪಿಳ್ಳೈಗೆ 8 ಕೋಟಿ ಪರಿಹಾರದ ಜೊತೆಗೆ ಒಂದು ಐಷಾರಾಮಿ ಕಾರನ್ನು ಸಹ ನೀಡಿದ್ದಾರೆ ಎನ್ನಲಾಗಿದೆ.

ಆದಿತ್ಯ ಚೋಪ್ರಾ ಮತ್ತು ಪಾಯಲ್ ಖನ್ನಾ : ರಾಣಿ ಮುಖರ್ಜಿ ಅವರ ಪತಿ ಆದಿತ್ಯ ಚೋಪ್ರಾ ಮೊದಲ ಬಾರಿಗೆ ಪಾಯಲ್ ಅವರನ್ನು ವಿವಾಹವಾಗಿದ್ದರು. ಇವರಿಬ್ಬರೂ 2001ರಲ್ಲಿ ವಿವಾಹವಾದರು. ಆದರೆ ಇವರೂ ಕೂಡ ತಮ್ಮ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿ 2009ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನ ಪಡೆಯಲು ಆದಿತ್ಯ ಚೋಪ್ರಾ 50 ಕೋಟಿ ಪಾವತಿಸಿದ್ದ ಎಂದು ಹೇಳಲಾಗಿದೆ.