ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ದಿನಗಳ ಅಮೆರಿಕ ಭೇಟಿಗಾಗಿ ಗುರುವಾರ ಮುಂಜಾನೆ ವಾಷಿಂಗ್ಟನ್ ಡಿಸಿಗೆ ಆಗಮಿಸಿದರು. ಪಿಎಂ ಮೋದಿ ಗುರುವಾರ ಮುಂಜಾನೆ 3.30 ಕ್ಕೆ (ಐಎಸ್‌ಟಿ) ವಾಷಿಂಗ್ಟನ್ ಡಿಸಿಯ ಜಂಟಿ ಬೇಸ್ ಆಂಡ್ರ್ಯೂಸ್ ವಾಯುನೆಲೆಗೆ ಬಂದಿಳಿದರು. ಪ್ರಧಾನಮಂತ್ರಿಯವರನ್ನು ಅಮೇರಿಕಾದಲ್ಲಿ ಭಾರತದ ರಾಯಭಾರಿಯಾದ ಶ್ರೀ ತರಂಜಿತ್ ಸಿಂಗ್ ಸಂಧು ಮತ್ತು ಶ್ರೀ. ಟಿ. ಎಚ್. ಬ್ರಿಯಾನ್ ಮ್ಯಾಕ್ ಕೆಯೊನ್, ಯುಎಸ್ ಮ್ಯಾನೇಜ್ಮೆಂಟ್ ಮತ್ತು ಸಂಪನ್ಮೂಲಗಳ ರಾಜ್ಯ ಉಪ ಕಾರ್ಯದರ್ಶಿ ಬರಮಾಡಿಕೊಂಡರು.

ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯರು ಕೂಡ ಪಿಎಂ ಮೋದಿಯನ್ನು ಭಾರತದ ಧ್ವಜವನ್ನು ತೋರಿಸುವ ಮೂಲಕ ಸ್ವಾಗತಿಸಿದರು. ಅವರ ಈ ಆತ್ಮೀಯ ಸ್ವಾಗತಕ್ಕಾಗಿ ಭಾರತೀಯ ವಲಸಿಗರಿಗೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದರು. ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಮೊದಲ ಯುಎಸ್ ಭೇಟಿ ಇದಾಗಿದ್ದು ಶುಕ್ರವಾರ ಶ್ವೇತಭವನದಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ಮೊದಲ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ತದನಂತರ ಕ್ವಾಡ್ ನಾಯಕರ ಶೃಂಗಸಭೆ ನಡೆಯಲಿದೆ.

ಗುರುವಾರ, ಪ್ರಧಾನಿ ಮೋದಿ ಐದು ಪ್ರಮುಖ ಕಂಪನಿಗಳಾದ ಕ್ವಾಲ್ಕಾಮ್, ಅಡೋಬ್, ಫಸ್ಟ್ ಸೋಲಾರ್, ಜನರಲ್ ಆಟಮಿಕ್ ಮತ್ತು ಬ್ಲಾಕ್ ಸ್ಟೋನ್ ಸಿಇಒಗಳನ್ನು ಭೇಟಿಯಾಗಲಿದ್ದಾರೆ. ನಂತರ ಅವರು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರನ್ನು ವಿಲ್ಲಾರ್ಡ್ ಹೋಟೆಲ್‌ನಲ್ಲಿ ರಾತ್ರಿ 11 ಗಂಟೆಗೆ (IST) ಭೇಟಿಯಾಗಲಿದ್ದಾರೆ. ಇದಾದ ನಂತರ, ಪ್ರಧಾನಿ ಮೋದಿ ಅವರು ಐಸನ್‌ಹೋವರ್ ಕಾರ್ಯನಿರ್ವಾಹಕ ಕಚೇರಿ ಕಟ್ಟಡಕ್ಕೆ ತೆರಳಲಿದ್ದು, ಮಧ್ಯಾಹ್ನ 12: 30 ಕ್ಕೆ (ಐಎಸ್‌ಟಿ) ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಲಿದ್ದಾರೆ.
ಇದನ್ನೂ ಓದಿ : Subramanian Swamy Tweet about PM Modi : ಕುದುರೆಯನ್ನು ನೀರಿನವರೆಗೂ ಕರೆದೋಯ್ಯಬಹುದು ನೀರನ್ನು ಅದು ಸ್ವತಃ ಕುಡಿಯಬೇಕು

ಪ್ರಧಾನಮಂತ್ರಿಯವರು ಶನಿವಾರ ನ್ಯೂಯಾರ್ಕ್ ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್ ಜಿಎ) 76 ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನ್ಯೂಯಾರ್ಕ್‌ಗೆ ಭೇಟಿ ನೀಡಿದಾಗ, ಪಿಎಂ ಮೋದಿ ಮ್ಯಾನ್ಹ್ಯಾಟನ್‌ನ ಲೊಟ್ಟೆ ನ್ಯೂಯಾರ್ಕ್ ಪ್ಯಾಲೇಸ್ ಹೋಟೆಲ್‌ನಲ್ಲಿ ತಂಗಲಿದ್ದಾರೆ.