ಬೆಂಗಳೂರು : ನಗರದ ನ್ಯೂ ತರಗುಪೇಟೆಯಲ್ಲಿ ನಿಗೂಢ ಸ್ಫೋಟ ಸ್ಥಳಕ್ಕೆ ಶಾಸಕ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ವೈಯಕ್ತಿಕವಾಗಿ ಪರಿಹಾರ ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸೋದಾಗಿ ಹೇಳಿದ್ದಾರೆ. ಜೊತೆಗೆ ಸರ್ಕಾರ ಕೂಡ ಮೃತರ ಕುಟುಂಬಗಳಿಗೆ ಪರಿಹಾರ ನೀಡಲಿ. ಗೋದಾಮಿನಲ್ಲಿ ಪಟಾಕಿ ಸಂಗ್ರಹಿಸಿದ್ದ ಮಾಹಿತಿ ಇದೆ. ಮಾಲೀಕನ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಸ್ಫೋಟದ ತೀವ್ರತೆಗೆ ಮೃತದೇಹ ಛಿದ್ರ ಛಿದ್ರವಾಗಿ, ಸುಮಾರು 20 ಮೀಟರ್ ದೂರ ಹಾರಿ ಬಿದ್ದಿವೆ. ಸ್ಥಳದಲ್ಲಿ ಶ್ವಾನದಳದಿಂದ ಪರಿಶೀಲನೆ ನಡೆಸಲಾಗಿದ್ದು, ಘಟನಾ ಸ್ಥಳಕ್ಕೆ ಬಾಂಬ್ ಪತ್ತೆ ದಳ ಕೂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ಇದನ್ನೂ ಓದಿ : ಒಳಚರಂಡಿ ನಿರ್ಮಿಸುವ ವ್ಯವಸ್ಥೆ ಅವೈಜ್ಞಾನಿಕ – ಬಿ.ಎಂ.ಫಾರೂಕ್
ಸ್ಥಳಕ್ಕೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಇಮ್ರಾನ್ ಕೂಡ ಭೇಟಿ ನೀಡಿದ್ದಾರೆ. ಘಟನೆಗೆ ಹೇಗೆ ಸಂಭವಿಸಿದೆ, ಕಾರಣವೇನೆಂದು ಗೊತ್ತಿಲ್ಲ. ಪಟಾಕಿ ಸ್ಟೋರೇಜ್ ಮಾಡುವವರನ್ನ, ಅನುಮತಿ ಇಲ್ಲದೇ ಮಾರಾಟ ಮಾಡುವವರ ಬಗ್ಗೆ ಕ್ರಮ ಕೈಗೊಳ್ಳಬೇಕು. ಸರ್ಕಾರದ ಗೈಡ್ ಲೈನ್ಸ್ ಪಾಲನೆ ಮಾಡಬೇಕು. ಕೆಲವರು ಅದನ್ನು ನಿರ್ಲಕ್ಷ್ಯ ಮಾಡ್ತಾರೆ ಎಂದು ಹೇಳಿದ್ದಾರೆ.

ಇನ್ನೂ ಈ ನಿಗೂಢ ಸ್ಫೋಟಕ್ಕೆ ಅಕ್ಕಪಕ್ಕದ ಮನೆಯ ಕಿಟಕಿ ಗಾಜುಗಳು ಪುಡಿಪುಡಿ ಆಗಿವೆ. ಸ್ಫೋಟದ ಸಂದರ್ಭ ವಿದ್ಯುತ್ ಸಂಪರ್ಕ ಕಡಿತವಾಗಿತ್ತು ಎನ್ನಲಾಗ್ತಿದೆ. ಒಂದು ವೇಳೆ ವಿದ್ಯುತ್ ಸಂಪರ್ಕ ಇದ್ದಿದ್ದರೂ ಶಾರ್ಟ್ ಸರ್ಕ್ಯೂಟ್ ಆಗಿ ಇನ್ನೂ ದೊಡ್ಡ ಅನಾಹುತವಾಗುವ ಸಂಭವವಿತ್ತು. ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಕೂಡ ಭೇಟಿ ನೀಡಿದ್ದಾರೆ. ಡಿಸಿಪಿಯಿಂದ ಮಾಹಿತಿ ಪಡೆದಿದ್ದು ನಿಗೂಢ ಸ್ಫೋಟದಲ್ಲಿ ಮನೋಹರ, ಅಸ್ಲಾಂ ಎಂಬವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಅಕ್ರಮವಾಗಿ ಪಟಾಕಿ ಸಂಗ್ರಹದಿಂದ ಸ್ಪೋಟ? ಸ್ಫೋಟದ ಸ್ಥಳದಲ್ಲಿ ಒಟ್ಟು 80 ಬಾಕ್ಸ್ ಪಟಾಕಿ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ ಸ್ಫೋಟಗೊಂಡಿದ್ದು 1-2 ಬಾಕ್ಸ್ ಪಟಾಕಿ ಮಾತ್ರ, ಎಲ್ಲಾ ಪಟಾಕಿ ಬಾಕ್ಸ್‌ಗಳು ಸ್ಫೋಟಗೊಂಡಿದ್ರೆ ಭಾರಿ ಅನಾಹುತಕ್ಕೆ ಕಾರಣವಾಗ್ತಿತ್ತು. ಸದ್ಯ ನಿಗೂಢ ಸ್ಫೋಟಕ್ಕೆ ಅಸಲಿ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅದು ಟ್ರಾನ್ಸ್ಪೋರ್ಟ್ ಗೋದಾಮು ಎಂಬ ಮಾಹಿತಿ ಲಭ್ಯವಾಗಿದ್ದು ಅಲ್ಲಿಗೆ ಪಟಾಕಿ ಹೇಗೆ ಬಂತು? ಎಷ್ಟು ದಿನಗಳಿಂದ ಪಟಾಕಿ ಶೇಖರಿಸಲಾಗಿತ್ತು? ಅನುಮತಿ ಪಡೆದಿದ್ರಾ ಅಥವಾ ಅಕ್ರಮವಾಗಿ ಸಂಗ್ರಹಿಸಲಾಗಿತ್ತಾ ಎಂಬ ವಿಚಾರವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Gas cylinder blast Bangalore investigation MLA visit