ಬೆಂಗಳೂರು : ಸೂಪರ್ ಸ್ಟಾರ್ ಉಪೇಂದ್ರ ಮತ್ತು ಚಂದ್ರು ಕಾಂಬಿನೇಷನ್ ನ ಬಹು ನಿರೀಕ್ಷಿತ ‘ಕಬ್ಜ’ ಚಿತ್ರದ ಟೀಸರ್ ದೀಪಾವಳಿಯಲ್ಲಿ ಬಿಡುಗಡೆ ಆಗಲಿದ್ದು, ಚಿತ್ರವನ್ನು ವಿಶ್ವವ್ಯಾಪ್ತಿ 2022ರಲ್ಲಿ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ‘ಕಬ್ಜ’ ಚಿತ್ರದ ಮೋಷನ್ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದ್ದು ಸಾಕಷ್ಟು ಸದ್ದು ಮಾಡುತ್ತಿದೆ. ಲಕ್ಷಾಂತರ ಜನರು ಪೋಸ್ಟರ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ನಲ್ಲಿ ಉಪ್ಪಿ ಆಯುಧ ಹಿಡಿದು ಅಬ್ಬರಿಸುತ್ತಿರುವುದು ಕುತೂಹಲ ಮೂಡಿಸಿದ್ದು, ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

1980ರಲ್ಲಿ ಮಾಫಿಯಾ ಪ್ರಬಲವಾಗಿದ್ದ ಸಮಯದ ಕತೆಯನ್ನು ಚಿತ್ರ ಒಳಗೊಂಡಿದೆ. ಚಿತ್ರದ ಮೇಕಿಂಗ್, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಮೊದಲಾದ ಅಂಶವನ್ನು ಮೋಷನ್ ಪೋಸ್ಟರ್ ಮೂಲಕ ಅಭಿಮಾನಿಗಳಿಗೆ ತಿಳಿಸುವ ಪ್ರಯತ್ನ ಮಾಡಲಾಗಿದ್ದು ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.
ಇದನ್ನೂ ಓದಿ : Priyanka Upendra : ಪರಮ ಸುಂದರಿಗೆ ಹೆಜ್ಜೆ ಹಾಕಿದ ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ
40 ದಿನಗಳ ಯೋಜನೆಯೊಂದಿಗೆ ಬೆಂಗಳೂರಿನಲ್ಲಿ ಚಿತ್ರೀಕರಣವನ್ನು ಪುನರಾರಂಭಿಸಲಾಗುವುದು. ನಂತರ ಹೈದರಾಬಾದ್‌ಗೆ ತೆರಳಿ ಚಿತ್ರವನ್ನು ಮುಗಿಸಲು ಯೋಜನೆ ರೂಪಿಸಲಾಗಿದೆ” ಎಂದು ನಿರ್ದೇಶಕ ಚಂದ್ರು ಹೇಳಿದ್ದಾರೆ. ಈ ತಿಂಗಳ ಕೊನೆಯಲ್ಲಿ ಮಿನರ್ವ ಮಿಲ್ ಆವರಣದಲ್ಲಿ ಹಾಕಲಾಗಿರುವ ಅದ್ದೂರಿ ಸೆಟ್ ನಲ್ಲಿ ಮತ್ತೊಂದು ಹಂತದ ಚಿತ್ರೀಕರಣ ನಡೆಯಲಿದೆ. ಈಗಾಗಲೆ ಚಿತ್ರದ ಶೇ.60ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ.
ಚಿತ್ರದಲ್ಲಿ ಮಿಂಚಲಿರುವ ಸುದೀಪ್: ಉಪೇಂದ್ರ ಅಲ್ಲದೇ ಕಿಚ್ಚ ಸುದೀಪ್ ಸಹ ಚಿತ್ರದಲ್ಲಿ ನಟನೆ ಮಾಡಲಿದ್ದಾರೆ. ಚಿತ್ರದಲ್ಲಿ ಸುದೀಪ್ ಅವರು ಭಾರ್ಗವ್ ಭಕ್ಷಿ ಪಾತ್ರದಲ್ಲಿ ನಟಿಸಲಿದ್ದಾರೆ. ಭಾರ್ಗವ್ ಬಕ್ಷಿ ಪಾತ್ರಕ್ಕೆ ಸುದೀಪ್ ಅವರೇ ಪರ್ಫೆಕ್ಟ್ ಆಗಿ ಸೂಟ್ ಆಗುತ್ತಾರೆ ಎನ್ನುವ ನಂಬಿಕೆ ಆರ್.ಚಂದ್ರು ಅವರಿಗಿತ್ತು. ಕಿಚ್ಚ ಅವರಿಗೆ ಪಾತ್ರ ಹಾಗೂ ಕಥೆಯ ಬಗ್ಗೆ ಆರ್.ಚಂದ್ರು ವಿವರಿಸಿದ ಬಳಿಕ ‘ಕಬ್ಜ’ ಚಿತ್ರದಲ್ಲಿ ನಟಿಸಲು ಸುದೀಪ್ ಒಪ್ಪಿಕೊಂಡರು. ಉಪ್ಪಿ, ಕಿಚ್ಚ ಇಬ್ಬರನ್ನೂ ಒಳಗೊಂಡ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದ್ದು ಅಭಿಮಾನಿಗಳಿಗೆ ಕಚಗುಳಿ ಇಡುತ್ತಿದೆ. ಇಬ್ಬರ ಖಡಕ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಅಬ್ಬರದ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ನೋಡುಗರನ್ನು ತನ್ನ ಕಡೆಗೆ ಸೆಳೆಯುತ್ತಿದೆ. ಕಬ್ಜಕ್ಕೆ ಎಜೆ ಶೆಟ್ಟಿ ಛಾಯಾಗ್ರಹಣ ಮಾಡಲಿದ್ದಾರೆ.
ಮತ್ತೆ ಒಗ್ಗೂಡಿದ ಚಂದ್ರು – ಉಪ್ಪಿ: ‘ಐ ಲವ್ ಯು’ ಚಿತ್ರದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಿರ್ದೇಶಕ ಆರ್.ಚಂದ್ರು ಈ ಚಿತ್ರದ ಮೂಲಕ ಒಂದಾಗಿದ್ದಾರೆ. ‘ಕಬ್ಜ’ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಕನ್ನಡ ಅಲ್ಲದೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ.
ಇದನ್ನೂ ಓದಿ : ಸ್ಯಾಂಡಲ್‌ವುಡ್ ನ ಬಹು ನಿರೀಕ್ಷಿತ ಚಿತ್ರ ‘ಬಂಧನ 2’ ನಾಯಕನಾಗಿ ಆದಿತ್ಯ
ಚಿತ್ರದಲ್ಲಿ ಶ್ರೀನಿವಾಸ್ ರಾವ್ ಕೋಟ, ಪ್ರಕಾಶ್ ರಾಜ್, ಜಗಪತಿ ಬಾಬು, ಕಬೀರ್ ದುಹಾನ್ ಸಿಂಗ್ , ಅನೂಪ್ ರೇವಣ್ಣ, ಪ್ರಮೋದ್ ಶೆಟ್ಟಿ ಮೊದಲಾದ ಹಿರಿಯ ಕಲಾವಿದರು ನಟಿಸಲಿದ್ದಾರೆ. ಕಬ್ಜ ಅಲ್ಲದೇ ಉಪೇಂದ್ರ ನಿರ್ದೇಶನ ಮಾಡಲು ಹೊರಟಿರುವ ಶೀರ್ಷಿಕೆ ಇಡದ ಹೊಸ ಚಿತ್ರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈ ಚಿತ್ರದ ಬಗ್ಗೆ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.