ಬೆಂಗಳೂರು : ಸದ್ಯ ಸೋಶಿಯಲ್ ಮೀಡಿಯಾಗಳಲ್ಲೇಲ್ಲಾ ಪರಮ ಸುಂದರಿಯದ್ದೇ ಹವಾ. ಇನ್ಸ್ಟಾ ರೀಲ್ ಗಳಲ್ಲಂತೂ ಪರಮ ಸುಂದರಿಯದ್ದೇ ಡಾನ್ಸ್. ಇದಕ್ಕೆ ಸೆಲೆಬ್ರೇಟಿಗಳು ಹೊರತಾಗಿಲ್ಲಾ. ಮಿಮಿ ಚಿತ್ರದ ಪರಮ ಸುಂದರಿ ಹಾಡಿಗೆ ಎಲ್ಲರೂ ಭರ್ಜರಿ ಸ್ಟೇಪ್ಸ್ ಹಾಕ್ತಿದ್ದಾರೆ.

ಬಾಲಿವುಡ್ ನಟಿ ಕೃತಿ ಸನೋನ್ ಹೆಜ್ಜೆ ಹಾಕಿರುವ ಪರಮ ಸುಂದರಿ ಸಾಂಗ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡ್ ಕ್ರಿಯೇಟ್ ಮಾಡಿದೆ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರೂ ಈ ಹಾಡಿಗೆ ಹೆಜ್ಜೆ ಹಾಕ್ತಿದಾರೆ. ಅದ್ರಲ್ಲೂ ಕಿರುತೆರೆ, ಹಿರಿತೆರೆ ಹಾಗೂ ಮಾಡೆಲ್ ಗಳ ಮೋಸ್ಟ್ ಫೆವರೇಟ್ ಸಾಂಗ್ ಇದಾಗಿದೆ.
ಇದನ್ನೂ ಓದಿ : Aadhar Card : ನಿಮ್ಮ ಆಧಾರ್ ಮಾಹಿತಿ ಬಳಸಿ ಯಾರಾದರೂ ಸಿಮ್ ಕಾರ್ಡ್ ಉಪಯೋಗಿಸುತ್ತಿದ್ದಾರೆಯೇ?
ಸದ್ಯ ಈ ಸಾಂಗ್ ಗೆ ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಕೂಡ ಹೆಜ್ಜೆ ಹಾಕಿದ್ದಾರೆ. ಪರಮ ಸುಂದರಿ ಹಾಡಿಗೆ ಭರ್ಜರಿ ಸ್ಟೇಪ್ಸ್ ಹಾಕಿರೋ ಅವ್ರು ಆ ವಿಡಿಯೋವನ್ನಾ ತಮ್ಮ ಇನ್ಸ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇನ್ನೂ ನೆಚ್ಚಿನ ನಟಿ ಪ್ರಿಯಾಂಕ ಉಪೇಂದ್ರ ಅವರ ಈ ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.. ಸೂಪರ್, ಬ್ಯೂಟಿಫುಲ್ ಅಂತಾ ತಮ್ಮ ಫೇವರೇಟ್ ನಟಿಗೆ ಕಾಮೆಂಟ್ ಮಾಡ್ತಿದಾರೆ.