ನವದೆಹಲಿ : ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಕಾಣುತ್ತಿವೆ. ಓರ್ವ ವ್ಯಕ್ತಿಗೆ ಸೀಮಿತವಾಗುತ್ತಿದ್ದ ಸಿಎಂ ಸ್ಥಾನ ಈಗ ಅಲ್ಪಾವಧಿಗೆ ಅಂತ್ಯವಾಗುತ್ತಿರುವ ಬೆಳವಣಿಗೆ ಕಂಡು ಬರುತ್ತಿದೆ. ಇತ್ತೀಚೆಗೆ ಆರು ತಿಂಗಳಲ್ಲಿ ಆರು ಮಂದಿ ಮುಖ್ಯಮಂತ್ರಿಗಳು ಬದಲಾವಣೆ ಆಗಿರುವುದು ಇದಕ್ಕೆ ಪೂರಕ ಎನ್ನುವಂತಾಗಿದೆ.

ಈ ವರ್ಷದ ಮಾರ್ಚ್‌ನಿಂದ ಸಿಎಂ ಬದಲಾವಣೆಯ ಪರ್ವ ಆರಂಭಗೊಂಡಿದ್ದು, ಉತ್ತರಾಖಂಡ್, ಅಸ್ಸಾಂ, ಕರ್ನಾಟಕ, ಗುಜರಾತ್ ಮತ್ತು ಈಗ ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಬದಲಾಗಿದ್ದು ಮುಂದೆ ರಾಜಸ್ಥಾನದಲ್ಲೂ ಸಿಎಂ ಬದಲಾವಣೆ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : Navjot Singh Sidhu – ಪಂಜಾಬ್ ರಾಜಕೀಯ ವಲಯದಲ್ಲಿ ಕಿಂಗ್ ಮೇಕರ್ ಆದ ನವಜೋತ್ ಸಿಂಗ್
ಅಲ್ಪಾವಧಿಗೆ ಸಿಎಂ ಬದಲಾವಣೆ ಮಾಡುತ್ತಿರುವುದು ಭಾರತದ ರಾಜಕೀಯ ವಿದ್ಯಮಾನಗಳಲ್ಲಿ ಹೊಸ ಬೆಳವಣಿಗೆಯಾಗಿದೆ. ಈ ಹಿಂದೆ ಐದು ಅವಧಿಗೆ ಒಬ್ಬರೇ ವ್ಯಕ್ತಿ ಸಿಎಂ ಆಗಿ ಆಡಳಿತ ನೀಡಿದ ಉದಾಹರಣೆ ಭಾರತದಲ್ಲಿದೆ. ಆದರೆ ಈ ನಡುವೆ ಒಂದೇ ಅವಧಿ ಅಥವಾ ಅದಕ್ಕೂ ಕಡಿಮೆ ಸಮಯದಲ್ಲೆ ಸಿಎಂಗಳನ್ನು ರಾಜಕೀಯ ಪಕ್ಷಗಳು ಬದಲಾಯಿಸುತ್ತಿವೆ.
Uttarakhanda Former CM Trivendra Singh Rawat Uttarakhanda Current Tirath Singh Rawat
ಮಾರ್ಚ್‌ನಲ್ಲಿ 2017 ರಿಂದ ಉತ್ತರಾಖಂಡ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಕೆಳಗಿಳಿಸಿ ಮಾರ್ಚ್‌ನಲ್ಲಿ ಲೋಕಸಭಾ ಸಂಸದರಾಗಿದ್ದ ತಿರತ್ ಸಿಂಗ್ ಅವರನ್ನು ಬಿಜೆಪಿ ಹೈಕಮಾಂಡ್ ನೇಮಕ ಮಾಡಿತು. ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಂತದಲ್ಲೂ ರಿಸ್ಕ್ ತೆಗೆದುಕೊಂಡಿದ್ದ ಬಿಜೆಪಿ ತಿರತ್ ಸಿಂಗ್ ರಾವತ್ ಪಟ್ಟಕಟ್ಟಿತ್ತು. ತ್ರಿವೇಂದ್ರ ಸಿಂಗ್ ರಾವತ್ ಕಾರ್ಯ ವೈಖರಿಯ ಬಗ್ಗೆ ಬಿಜೆಪಿಯ ರಾಜ್ಯ ಘಟಕದಲ್ಲಿ ಹೆಚ್ಚುತ್ತಿರುವ ಅಸಮಾಧಾನ ನಿರ್ಗಮನಕ್ಕೆ ಕಾರಣವಾಯ್ತು. ಆದರೆ ಇದಾದ ಕೆಲವೆ ದಿನಗಳಲ್ಲಿ ವಿಧಾನಸಭೆಗೆ ತಿರತ್ ಸಿಂಗ್ ರಾವತ್ ಅವಕಾಶ ಕಲ್ಪಿಸಲು ಸಾಧ್ಯವಾಗದ ಹಿನ್ನಲೆ ಅವರನ್ನು ಬಿಜೆಪಿ ಹೈಕಮಾಂಡ್ ಬದಲಿಸಿತು. ಪುಷ್ಕರ್ ಸಿಂಗ್ ಧಾಮಿಯನ್ನು ಜುಲೈನಲ್ಲಿ ಉತ್ತರಾಖಂಡ ಮುಖ್ಯಮಂತ್ರಿಯಾಗಿ ನೇಮಿಸಲಾಯಿತು.

ಮೇ ತಿಂಗಳಲ್ಲಿ ಅಸ್ಸಾಂ ಮುಖ್ಯಮಂತ್ರಿಯಾಗಿ ಸರ್ಬಾನಂದ ಸೋನೋವಾಲ್ ಬದಲಿಗೆ ಹಿಮಂತ ಬಿಸ್ವಾ ಶರ್ಮಾ ಅವರನ್ನು ನೇಮಿಸಲಾಯಿತು. ಸರ್ಬಾನಂದ ಸೋನೋವಾಲ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೂ ರಾಜಕೀಯ ಕಾರಣಗಳಿಂದ ಅವರ ಬದಲಾವಣೆ ಅಗತ್ಯವಾಗಿತ್ತು.
Sarbananda Sonowal Himanta Biswa Sarma
ಇದಾದ ಬಳಿಕ ದಕ್ಷಿಣ ಭಾರತದಲ್ಲಿ ಬಿಜೆಪಿ ಆಡಳಿತದಲ್ಲಿರುವ ಏಕೈಕ ರಾಜ್ಯ ಕರ್ನಾಟಕದಲ್ಲೂ ಸಿಎಂ ಬದಲಾವಣೆ ಮಾಡಲು ಬಿಜೆಪಿ ಮುಂದಾಯಿತು. ಲಿಂಗಾಯತ ಸಮುದಾಯದ ಪ್ರಬಲ ನಾಯಕ ಅಂತ್ಲೆ ಕರೆಸಿಕೊಂಡಿದ್ದ ಬಿ.ಎಸ್ ಯಡಿಯೂರಪ್ಪ ಅವರನ್ನು ಬದಲಾಯಿಸಿ ಬಸವರಾಜ್ ಬೊಮ್ಮಾಯಿಗೆ ಅಧಿಕಾರ ನೀಡಿತು. ಎರಡು ವರ್ಷ ಅವಧಿ ಪೂರ್ಣಗೊಳಿಸಿದ ಯಡಿಯೂರಪ್ಪ ಅಧಿಕಾರ ಹಸ್ತಾಂತರ ಮಾಡಿದರು.
B S Yadiyurappa Basavaraj Bommai
ಇನ್ನೂ ಇತ್ತೀಚೆಗಷ್ಟೇ ಗುಜರಾತ್ ನಲ್ಲಿ ಸಿಎಂ ವಿಜಯ್ ರೂಪಾಣಿ ಬದಲಿಸಿ ಭೂಪೇಂದ್ರ ಪಟೇಲ್ ಗೆ ಬಿಜೆಪಿ ಹೈಕಮಾಂಡ್ ಪಟ್ಟ ಕಟ್ಟಿತು. 2016 ರಿಂದ ಸಿಎಂ ಆಗಿದ್ದ ರೂಪಾಣಿ 2022 ರ ವಿಧಾನಸಭೆ ಚುನಾವಣೆ 14 ತಿಂಗಳು ಬಾಕಿ ಇರುವಾಗ ರಾಜೀನಾಮೆ ನೀಡಿದರು. ಮೊದಲ ಬಾರಿಗ ಶಾಸಕರಾಗಿ ಆಯ್ಕೆಯಾಗಿದ್ದ ಭೂಪೇಂದ್ರ ಪಟೇಲ್ಗೆ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿ ಬಿಜೆಪಿ ಹೈಕಮಾಂಡ್ ಅಚ್ಚರಿ ಮೂಡಿಸಿತ್ತು.
ಇದನ್ನೂ ಓದಿ : Rajinder Pal Singh Bhatia – ಬಿಜೆಪಿಯ ಎಕ್ಸ್ ಮಿನಿಸ್ಟರ್ ನಿಗೂಢ ಸಾವು
Vijay Rupani Bhupendrabhai Patel
ಇನ್ನು ಇದೇ ಹಾದಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಂದುವರಿದಿದ್ದು ಪಂಜಾಬ್ ಸಿಎಂ ಬದಲಾವಣೆ ಮಾಡಿದೆ. ಕಾಂಗ್ರೆಸ್ ಕೂಡಾ ಚುನಾವಣೆ ಒಂದು ವರ್ಷ ಬಾಕಿ ಇರುವಾಗ್ಲೆ ಸಿಎಂ ಬದಲಾವಣೆ ಮಾಡಿ ಅಚ್ಚರಿ ಮೂಡಿಸಿದೆ. ಆತಂರಿಕ ಕಲಹದ ಕಾರಣ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಅವರನ್ನು ಕಾಂಗ್ರೆಸ್ ಬದಲಾಯಿಸಿದೆ. ಅಮರಿಂದರ್ ಸಿಂಗ್ ಬದಲಿಗೆ ಚರಣ್ಜಿತ್ ಸಿಂಗ್ ಚನ್ನಿ ಪಂಜಾಬ್ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ. ರಾಜಸ್ಥಾನದಲ್ಲೂ ಶೀಘ್ರದಲ್ಲೇ ಮುಖ್ಯಮಂತ್ರಿ ಬದಲಾಗಬಹುದು ಎನ್ನಲಾಗುತ್ತಿದೆ.
Captain Amarinder Singh Charanjit Singh Channi
ಈವರೆಗೂ ರಾಜೀನಾಮೆ ನೀಡಿದ ಈ ಎಲ್ಲ ಸಿಎಂಗಳು ಸಿಎಂ ಆಗಿ ಸುಧೀರ್ಘ ಸೇವೆ ಸಲ್ಲಿಸಿಲ್ಲ. ಬೇರೆ ಬೇರೆ ರಾಜಕೀಯ ಕಾರಣಗಳಿಂದ ಅವರನ್ನು ತೆಗೆದು ಹಾಕಲಾಗಿದೆ. ಆದರೆ ಈ ಮೊದಲು ಸಿಎಂ ಆಗಿದ್ದ ನಾಯಕರು ಐದೈದು ಅವಧಿಗೆ ಸಿಎಂ ಆಗಿದ್ದರು ಅವರು ಯಾರು ಅಂತಾ ನೋಡಿದ್ರೆ
ಸ್ವತಂತ್ರ ಭಾರತದ ಸುದೀರ್ಘ ಅವಧಿಗೆ ಮುಖ್ಯಮಂತ್ರಿ : ಪವನ್ ಕುಮಾರ್ ಚಾಮ್ಲಿಂಗ್ ಸ್ವಾತಂತ್ರದ ನಂತರ ರಾಜ್ಯವೊಂದರ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್‌ನ ಸ್ಥಾಪಕ ಅಧ್ಯಕ್ಷರಾಗಿದ್ದ ಚಾಮ್ಲಿಂಗ್ 1994 ರಿಂದ 2019 ರ ನಡುವೆ ಸಿಕ್ಕಿಂ ಅನ್ನು ಆಳಿದರು.

ಅವರ ನಂತರ ಜ್ಯೋತಿ ಬಸು 1977 ಮತ್ತು 2000 ರ ನಡುವೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. 2000 ರಲ್ಲಿ ತನ್ನ ಅಧಿಕಾರಾವಧಿಯನ್ನು ಆರಂಭಿಸಿದ ಒಡಿಶಾದ ನವೀನ್ ಪಟ್ನಾಯಕ್ ಈಗ ಎರಡು ದಶಕಗಳಿಗೂ ಹೆಚ್ಚು ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಣಿಕ್ ಸರ್ಕಾರ್ 1998 ರಿಂದ 2018 ರವರೆಗೆ ತ್ರಿಪುರಾವನ್ನು ಆಳಿದರು.

ಈ ಪಟ್ಟಿಯಲ್ಲಿ ರಾಜಸ್ಥಾನದಲ್ಲಿ ಮೋಹನ್ ಲಾಲ್ ಸುಖಾಡಿಯಾ (1954-1971), ಛತ್ತೀಸ್ಗಢದಲ್ಲಿ ರಮಣ್ ಸಿಂಗ್ (2003-2018), ದೆಹಲಿಯಲ್ಲಿ ಶೀಲಾ ದೀಕ್ಷಿತ್ (1998-2013), ಅಸ್ಸಾಂನಲ್ಲಿ ತರುಣ್ ಗೊಗೊಯ್ (2001) -2016), ಮಣಿಪುರದಲ್ಲಿ ಒಕ್ರಮ್ ಇಬೋಬಿ ಸಿಂಗ್ (2002-2017), ಮತ್ತು ನರೇಂದ್ರ ಮೋದಿ ಗುಜರಾತ್‌ನಲ್ಲಿ (2001-2014) ಸುಧೀರ್ಘ ಅವಧಿಗೆ ಸಿಎಂ ಆಗಿದ್ದರು. ಆದರೆ ಈಗ ಟ್ರೆಂಡ್ ಬದಲಾದಂತೆ ಕಂಡು ಬರುತ್ತಿದ್ದು ಸಿಎಂ ಸ್ಥಾನದಲ್ಲಿರುವ ನಾಯಕರು ವೇಗವಾಗಿ ಬದಲಾಗುತ್ತಿದ್ದಾರೆ.