ಬೆಂಗಳೂರು : ಇಂದು ಮದ್ಯಾನ್ಹ ಸುಮಾರು 3.45 ಕ್ಕೆ ಬೆಂಗಳೂರಿನ ದೇವರ ಚಿಕ್ಕನಹಳ್ಳಿ ಬಳಿಯ ಆಶ್ರಿತ್ ಅಪಾರ್ಟಮೆಂಟ್‌ವೊಂದರಲ್ಲಿ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ. ಐವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಮಹಿಳೆಯೊಬ್ಬರು ಸೇರಿ ಇಬ್ಬರು ವೃದ್ದರು ಸಜೀವ ದಹನಗೊಂಡಿದ್ದಾರೆ. ಹಲವರು ಸಿಲುಕಿರುವ ಶಂಕೆ. ಅದೇ ಅಪಾರ್ಟ್ಮೆಂಟ್ನ ಒಳಗೆ ಇನ್ನಿಬ್ಬರು ಸಿಲುಕಿದ್ದಾರೆ ಎಂಬ ಮಾಹಿತಿಯು ಲಭ್ಯವಾಗಿದ್ದು, ಮೃತಪಟ್ಟವರ ಸಂಖ್ಯೆಯಲ್ಲೂ ಏರಿಕೆಯಾಗುವ ಸಾಧ್ಯತೆಯಿದೆ.
ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳೊಂದಿಗೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ಸಂದಿಸುವುದಕ್ಕೆ ಹರಸಾಹಸ ಪಡುತ್ತಿದೆ. ಸದ್ಯ ಸ್ಥಳದಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.