ಅಸ್ತಿತ್ವದಲ್ಲಿರುವ ಆಧಾರ್ ಮಾರ್ಗಸೂಚಿಗಳ ಪ್ರಕಾರ ವೈಯಕ್ತಿಕ ಮೊಬೈಲ್ ಚಂದಾದಾರರು ತಮ್ಮ ಹೆಸರಿನಲ್ಲಿ 9 ಮೊಬೈಲ್ ನಂಬರ್ ಸಂಪರ್ಕಗಳನ್ನು ನೋಂದಾಯಿಸಿಕೊಳ್ಳಬಹುದು. ಆದರೆ ಒಂದೆರಡು ಮೊಬೈಲ್ ಫೋನ್ ಬಳಕೆ ಮಾಡುತ್ತಿರುವ ನಾವುಗಳು ಅಬ್ಬಬ್ಬಾ ಎಂದರೆ ಒಂದು ನಾಲ್ಕು ಸೀಮ್ ಕಾರ್ಡ್ ಬಳಸುತ್ತಿರಬಹುದು ಅಥವಾ ಒಂದೆರೆಡು ಸೀಮ್ ಕಾರ್ಡ್‌ಗಳ ನಂಬರ್ ಹೊಂದಿರಬಹುದು.

ನಿಮ್ಮ ವೈಯಕ್ತಿಕ ಆಧಾರ್ ದಾಖಲೆಯಿಂದ ಮತ್ತೊಂದು ಮೋಬೈಲ್ ಹೊಸ ನಂಬರ್ ನಿಮಗೆ ಗೊತ್ತಿಲ್ಲದೇ ಚಾಲ್ತಿಯಲ್ಲಿರುವುದನ್ನು ಹಾಗೂ ಬೇರೆ ನಂಬರ್ ಹೊಂದಿರುವದನ್ನು ಪತ್ತೆ ಹಚ್ಚುವುದಕ್ಕೆ ಕೇಂದ್ರ
ದೂರ ಸಂಪರ್ಕ ಇಲಾಖೆ ಗ್ರಾಹಕರಿಗೆ ಸರಳ ಉಪಾಯ ಮಾಡಿಕೊಟ್ಟಿದೆ.
ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ನೋಂದಾಯಿಸಲಾದ ಎಲ್ಲಾ ಮೊಬೈಲ್ ಫೋನ್ ಸಂಖ್ಯೆಗಳನ್ನು ಈಗ ನೀವು ಪರಿಶೀಲಿಸಬಹುದು ಎಂದು ನಿಮಗೆ ತಿಳಿದಿದೆಯೇ?
ಹೌದು ದೂರ ಸಂಪರ್ಕ ಇಲಾಖೆಯು ಇತ್ತೀಚೆಗೆ ಹೊಸ ಪೋರ್ಟಲ್ ನ್ನು ಪ್ರಾರಂಭಿಸಿದ್ದು, ಬಳಕೆದಾರರು ತಮ್ಮ ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾದ ತಮ್ಮ ವೈಯಕ್ತಿಕ ಎಲ್ಲಾ ಫೋನ್ ಸಂಖ್ಯೆಗಳನ್ನು ಖಾತ್ರಿಪಡಿಸಲು ಸುಲಭವಾಗಿ
ಅನುವು ಮಾಡಿಕೊಟ್ಟಿದೆ.

ನೀವು ಇದನ್ನು ದೂರಸಂಪರ್ಕ ಇಲಾಖೆ (ಡಿಒಟಿ) ಹೊಸ ವೆಬ್‌ಸೈಟ್‌ನೊಂದಿಗೆ ಕಂಡು ಹಿಡಿಯಬಹುದು. ಡಿಒಟಿ ಇಲಾಖೆ ಇತ್ತೀಚೆಗೆ ಪೋರ್ಟಲ್ ನ್ನು ಆರಂಭಿಸಿದೆ, ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (TAFCOP), ಇದು ಬಳಕೆದಾರರು ತಮ್ಮ ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾದ ಎಲ್ಲಾ ಫೋನ್ ಸಂಖ್ಯೆಗಳನ್ನು ಪರಿಶೀಲನೆ ಮಾಡಬಹುದು.
ಇದನ್ನೂ ಓದಿ : Planning to Buy Used Cars : ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವ ಯೋಚನೆಯಲ್ಲಿದ್ದಿರಾ ? ಹಾಗಾದರೆ ತಪ್ಪದೇ ಓದಿ
ಈ ವೆಬ್‌ಸೈಟ್ ಚಂದಾದಾರರಿಗೆ ಸಹಾಯ ಮಾಡಲು ಅಭಿವೃದ್ಧಿಪಡಿಸಲಾಗಿದೆ ಅವರ ಹೆಸರಿನಲ್ಲಿ ಕೆಲಸ ಮಾಡುವ ಮೊಬೈಲ್ ಸಂಪರ್ಕಗಳ ಸಂಖ್ಯೆಯನ್ನು ಪರಿಶೀಲಿಸಿ ಮತ್ತು ಅವರ ಹೆಚ್ಚುವರಿ ಮೊಬೈಲ್ ಸಂಪರ್ಕಗಳನ್ನು ಯಾವುದಾದರೂ ಇದ್ದರೆ ಅದನ್ನು ಕ್ರಮಬದ್ಧಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಇಲ್ಲಿ ಉಪಾಯಗಳಿದ್ದು ವಂಚನೆ ನಿರ್ವಹಣೆ ಮತ್ತು ಗ್ರಾಹಕ ರಕ್ಷಣೆಗಾಗಿ ಟೆಲಿಕಾಂ ಅನಾಲಿಟಿಕ್ಸ್ ಹಾಗೂ ಗ್ರಾಹಕರ ಭದ್ರತೆಯನ್ನು ಬಲಪಡಿಸುವುದಾಗಿದೆ, ಗ್ರಾಹಕರ ಪ್ರಾಥಮಿಕ ಜವಾಬ್ದಾರಿಗಳು ಸೇವಾ ಪೂರೈಕೆದಾರರ ಮೇಲಿದೆ ಎಂದು TAFCOP ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.