ಮಂಗಳೂರು: ಹಳೆಯ ದ್ವೇಷದ ಹಿನ್ನಲೆ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರಕ್ಕೆ ಹಳೇ ವಿದ್ಯಾರ್ಥಿ ನುಗ್ಗಿ ಮೂವರು ಮಹಿಳಾ ಸಿಬ್ಬಂದಿಗಳ ಮೇಲೆ ತಲ್ವಾರ್ ಬೀಸಿರುವ ಘಟನೆ ನಿನ್ನೆ ಮಂಗಳೂರಿನಲ್ಲಿ ನೆಡೆದಿದೆ.
ನವೀನ್
ಮಂಗಳೂರಿನ ಕರಂಗಲ್ಪಾಡಿ ಬಳಿಯ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಸಿಬ್ಬಂದಿ ಕರ್ತವ್ಯದಲ್ಲಿ ನಿರತರಾಗಿದ್ದ ವೇಳೆ ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ 31 ವರ್ಷದ ನವೀನ್ ಎಂಬುವನು ನಿನ್ನೆಮಧ್ಯಾಹ್ನ 12.45ರ ಹೊತ್ತಿಗೆ ತರಬೇತಿ ಕೇಂದ್ರದ ಒಳನುಗ್ಗಿದ್ದು, ಗಿಫ್ಟ್ ಕೊಡುವುದಾಗಿ, ಬ್ಯಾಗ್ನಿಂದ ತಲ್ವಾರ್ ಎತ್ತಿ ಅಲ್ಲಿದ್ದ ಮೂವರು ಸಿಬ್ಬಂದಿಗೆ ತಲ್ವಾರ್ ನಿಂದ ಬೀಸಿದ್ದಾನೆ. ತಲ್ವಾರ್ ಬೀಸಿದ ಬಳಿಕ ತರಬೇತಿ ಕೇಂದ್ರದ ಒಳಗೆಯೇ ಕುರ್ಚಿಯಲ್ಲಿ ಕೂತು, ಬಂದ ಕೆಲಸ ಪೂರೈಸಿದಕ್ಕಾಗಿ ನಿಟ್ಟುಸಿರು ಬಿಟ್ಟಿದ್ದಾನೆ.
ಇದನ್ನೂ ಓದಿ : Priyanka Upendra : ಪರಮ ಸುಂದರಿಗೆ ಹೆಜ್ಜೆ ಹಾಕಿದ ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ
ಸ್ಟೆನೋಗ್ರಾಫರ್ ನಿರ್ಮಲಾ(43) ಎಂಬುವವರ ತಲೆ ಮತ್ತು ಕೈಗೆ ಗಂಭೀರ ಗಾಯಗಳಾದ್ದು, ಪ್ರಥಮ ದರ್ಜೆ ಸಹಾಯಕಿ ರೀನಾ ರಾಯ್(45),ಅಟೆಂಡರ್ ಗುಣವತಿ (58) ಮೇಲೆ ತಲ್ವಾರ್ನಿಂದ ದಾಳಿ ಮಾಡಿದ್ದಾನೆ. ದಾಳಿಯಿಂದ ಮಹಿಳೆಯರ ತಲೆ, ಕೈ, ಬೆನ್ನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಆರೋಪಿ ಕತ್ತಿ ಬೀಸಿದ್ದನ್ನು ಕಂಡು ಶಿಕ್ಷಣ ಕೇಂದ್ರದಲ್ಲಿದ್ದ ಇನ್ನೋರ್ವ ಮಹಿಳಾ ಸಿಬ್ಬಂದಿ ಓಡಿ ಹೊರಬಂದಿದ್ದು, ಸಹಾಯಕ್ಕಾಗಿ ಕಿರುಚಾಡಿದ್ದಾರೆ.
ಪಕ್ಕದಲ್ಲೇ ಮಂಗಳೂರು ಕೇಂದ್ರ ಕಾರಾಗೃಹವಿದ್ದು, ಜೈಲು ಸೆಕ್ಯೂರಿಟಿ ಮತ್ತು ಇತರ ಪೊಲೀಸರು ಆರೋಪಿಯನ್ನು ಹಿಡಿಯುವ ಸಲುವಾಗಿ ತರಬೇತಿ ಕೇಂದ್ರಕ್ಕೆ ಬಂದಾಗ ಮಹಿಳೆಯರು ರಕ್ತದ ಮಡುವಿನಲ್ಲಿದ್ದರೆ, ಆರೋಪಿ ಮಹಿಳೆಯರ ಎದುರು ಕುರ್ಚಿಯಲ್ಲಿ ಕೂತು ನಿಟ್ಟುಸಿರು ಬಿಡುತ್ತಿದ್ದನ್ನು ನೋಡಿ ತಕ್ಷಣ ಆತನನ್ನು ಹಿಡಿದ ಜೈಲು ಸಿಬ್ಬಂದಿ ಆತನನ್ನು ಬರ್ಕೆ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಳೆಯ ದ್ವೇಷದ ಹಿನ್ನಲೆ ದಾಳಿ : ಈ ಬಗ್ಗೆ ಮಾತನಾಡಿರುವ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರತ್ಯಕ್ಷದರ್ಶಿ ಸುಜಾತ, ಮಧ್ಯಾಹ್ನದ ಹೊತ್ತು ನಮ್ಮ ಕಚೇರಿಗೆ ಆ ವ್ಯಕ್ತಿ ನುಗಿ, ಸಾಮಾನ್ಯರಂತೇ ಬಂದು ಶಿಕ್ಷಕಿಯ ಹೆಸರನ್ನು ಕೇಳಿದ. ಅವರು ರಜೆಯಲ್ಲಿದ್ದಾರೆ ಎಂಬುದಾಗಿ ಹೇಳಿದಾಗ, ಅವರಿಗೊಂದು ಗಿಫ್ಟ್ ಕೊಡುವುದಕ್ಕೆ ಇದೆ ಅಂತಾ ಬ್ಯಾಗ್ನಿಂದ ತಲ್ವಾರ್ ತೆಗೆದು ದಾಳಿ ಮಾಡಿದ್ದಾನೆ.