ಆಕ್ರಮಣಕಾರಿ ನಾಯಕನೆಂದು ಇಂದಿಗೂ ಗೂಗಲ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೇಡಿಂಗ್ ಇರುವ ವಿಶ್ವ ಕ್ರಿಕೆಟ್‌ನ ಟೀಮ್ ನಾಯಕನೆಂದರೆ ವಿರಾಟ್ ಕೊಹ್ಲಿ ಮಾತ್ರ. ಈ ಮೊದಲು ಟೀಮ್ ಇಂಡಿಯಾದಲ್ಲಿ ಪ್ರಸ್ತುತ ಬಿಸಿಸಿಐನ ಅಧ್ಯಕ್ಷ ಕೂಡ ಆಕ್ರಮಣಕಾರಿ ನಾಯಕನಾಗಿ ಕ್ರಿಕೆಟ್‌ನಲ್ಲಿ ನಾಯಕತ್ವ ನಿಭಾಯಿಸಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದಾರೆ.

ಆದರೆ 3 ಫ್ಯಾರ್ಮೇಟಗಳಲ್ಲಿ ನಾಯಕತ್ವವನ್ನು ಮುಂದುವರಿಸುತ್ತಿದ್ದ ವಿರಾಟ್ ಕೊಹ್ಲಿ ನಾಯಕತ್ವ ನಿಭಾಯಿಸಲು ಹೆಚ್ಚು ಒತ್ತಡವನ್ನು ಅನುಭವಿಸಿದ್ದಾರೆ ಎಂದು ಕ್ರಿಕೆಟ್‌ನ ಮಾಜಿ ಆಟಗಾರರು ಹಾಗೂ ಕ್ರಿಕೆಟ್ ವಿಶ್ಲೇಷಣೆಯಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ : Virat Kohli : ನನ್ನ ತಂಡ ಆರ್‌ಸಿಬಿ(Royal Challengers Bengaluru) ಬಿಟ್ಟು ಬೇರೆ ತಂಡದಲ್ಲಿ ಆಡಲಾರೆ ವಿರಾಟ್ ಕೊಹ್ಲಿ ಭಾವುಕ
ಇದ್ದಲ್ಲದೇ ಈ ನಾಯಕತ್ವ ನಿಭಾಯಿಸುವ ಮಧ್ಯ 2021ರ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಏಕದಿನ ಸರಣಿಯ ಐಸಿಸಿ ವಿಶ್ವ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ಕಳೆದುಕೊಂಡಿದೆ ಹಾಗೂ ಟೆಸ್ಟ್‌ನಲ್ಲಿ ಕೂಡ ಟಾಪ್ 5 ಶ್ರೇಯಾಂಕದಲ್ಲಿ ಟೀಮ್ ಇಂಡಿಯಾ ಹಿಂದಿದ್ದು ಇಂತಹ ಸಮಯದಲ್ಲಿ ಒಬ್ಬನೇ ಕ್ಯಾಪ್ಟನ್ ಆಗಿ ಮೂರು ಫ್ಯಾರ್ಮೇಟನಲ್ಲಿ ಭಾರತ ಕ್ರಿಕೆಟ್‌ನ್ನು ಚಾಂಪಿಯನ್ ಮಾಡುವುದು ಕಷ್ಟಕರ ಎಂಬುದನ್ನು ಬಿಸಿಸಿಐ ಕೂಡ ಅರಿತು ಮುಂದಿನ ವರ್ಷದಲ್ಲಿ ಕ್ರಿಕೇಟ್‌ನಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದು ಎಂದು ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.

ಈ ಎಲ್ಲ ಅಂಶಗಳನ್ನು ಆಲಿಸಿರುವ ಬಿಸಿಸಿಐ ಕಳೆದ ನಾಲ್ಕು ತಿಂಗಳಿಂದ ನಾಯಕತ್ವ ಬದಲಾವಣೆಯ ಚರ್ಚೆಯನ್ನು ಬಿಸಿಸಿಐ ವಿರಾಟ್ ಕೊಹ್ಲಿ ಅವರೊಂದಿಗೆ ಮನವಿಯನ್ನು ಮುದಿಟ್ಟು ಆಗಾಗ್ಗೆ ನಾಯಕತ್ವ ಬದಲಾವಣೆ ಕುರಿತು
ಚರ್ಚೆಗಳು ನಡೆಯುತ್ತಲೇ ಇದ್ದವು ಇದೆಲ್ಲದರ ಮಧ್ಯದಲ್ಲಿ ನಾಯಕ
ವಿರಾಟ್ ಕೊಹ್ಲಿಗೆ ಸೂಕ್ತ ಕಾರಣಗಳನ್ನು ಬಿಸಿಸಿಐ ಸೂಚಿಸಿತ್ತಾ ಬಂದಿತ್ತು ಎನ್ನಲಾಗಿದೆ.

ಇನ್ನು ಒಟ್ಟು 9 ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುತ್ತಾ ಬಂದಿದ್ದ ವಿರಾಟ್ ಕೊಹ್ಲಿ ಐಸಿಸಿ ಟಿ-20 ನಾಯಕತ್ವವನ್ನು ತ್ಯಜಿಸುವುದಾಗಿ ಹೇಳಿದ ನಂತರ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಹೆಚ್ಚಿನ ಸವಾಲು ಎದುರಿಸಲು ಸಜ್ಜಾಗಿರುವ ಕೊಹ್ಲಿ ಐಪಿಎಲ್ ತಂಡದ ನಾಯಕತ್ವವನ್ನು ಬಿಟ್ಟುಕೊಟ್ಟರೆ ಸೂಕ್ತ ಎಂದು ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕತ್ವ ಗಮನಾರ್ಹ ಎಂದು ಕೊಹ್ಲಿ ಅಂದುಕೊಂಡು ಈ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.