Secular TV
Friday, August 19, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

ಸರಕಾರಕ್ಕೆ ಕಾಂಗ್ರೆಸ್ ಸೈಕಲ್ ಜಾಥಾ ಬಿಸಿ ; ಬೆಲೆ ಇಳಿಸದಿದ್ದರೆ ಜನಪರ ಹೋರಾಟ ತೀವ್ರ: ಡಿ.ಕೆ. ಶಿವಕುಮಾರ್ ಎಚ್ಚರಿಕೆ

Secular TVbySecular TV
A A
Reading Time: 1 min read
ಸರಕಾರಕ್ಕೆ ಕಾಂಗ್ರೆಸ್ ಸೈಕಲ್ ಜಾಥಾ ಬಿಸಿ ; ಬೆಲೆ ಇಳಿಸದಿದ್ದರೆ ಜನಪರ ಹೋರಾಟ ತೀವ್ರ: ಡಿ.ಕೆ. ಶಿವಕುಮಾರ್ ಎಚ್ಚರಿಕೆ
Secular Tv

Secular Tv

3.5k videos , 6.6M views

Secular Tv is a digital infotainment platform with ethical and unbiased coverage. Portraying truth, impartial journalism. Secular Tv intends to deliver incisive factual reports with a focus on policymaking political development and governance. We are based in Bengaluru having a network globally. Secular Tv started its journey on Oct 2, 2020, with the Kannada language as its content platform. Media is the fourth pillar of democracy, Secular Tv with a dream to contribute to nation-building within its limitation.

0
SHARES
Share to WhatsappShare on FacebookShare on Twitter

ಬೆಂಗಳೂರು: ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ದಿನೇ ದಿನೆ ಇಂಧನ ಹಾಗೂ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದರ ವಿರುದ್ಧ ಸೈಕಲ್ ಜಾಥಾ ಮೂಲಕ ಕಾಂಗ್ರೆಸ್ ಪಕ್ಷದ ಮತ್ತೊಂದು ಸುತ್ತಿನ ಸಮರ ಸೋಮವಾರ ದಾಖಲಾಯಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ನೇತೃತ್ವದಲ್ಲಿ ಶಾಸಕರು ಕಾಂಗ್ರೆಸ್ ಕಚೇರಿಯಿಂದ ವಿಧಾನಸೌಧದವರೆಗೆ ಸೈಕಲ್ ಜಾಥಾ ಮಾಡಿ, ಪ್ರತಿಭಟನೆ ನಡೆಸಿದರು.

ಈ ಹಿಂದೆ ರಾಜ್ಯಾದ್ಯಂತ ಸೈಕಲ್ ಜಾಥಾ, 100 ನಾಟೌಟ್ ನಂತಹ ಕಾರ್ಯಕ್ರಮಗಳ ಮೂಲಕ ಜನರ ಪರವಾಗಿ ಬೀದಿಗಿಳಿದು ಹೋರಾಟ ಮಾಡಿದ್ದ ಕಾಂಗ್ರೆಸ್, ಕಳೆದ ವಾರ ವಿಧಾನ ಮಂಡಲ ಅಧಿವೇಶನದ ಮೊದಲ ದಿನ ಎತ್ತಿನಗಾಡಿ ಯಾತ್ರೆ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು.

ಈ ಹೋರಾಟದ ಮುಂದುವರಿದ ಭಾಗವಾಗಿ ಇಂದು ಸೈಕಲ್ ಜಾಥಾ ನಡೆಸಿ ಸರ್ಕಾರಕ್ಕೆ ಕಾಂಗ್ರೆಸ್ ಮತ್ತೆ ಬಿಸಿ ಮುಟ್ಟಿಸಿದೆ. ಇಂತಹ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ಬಂಡ ಬಿಜೆಪಿ ಸರ್ಕಾರ ಬೆಲೆ ಇಳಿಸಿ ಜನರ ಹೊರೆ ಕಡಿಮೆ ಮಾಡುವವರೆಗೂ ಮುಂದುವರಿಯಲಿದೆ ಎಂಬ ಸಂದೇಶ ರವಾನಿಸಿತು.

ವಿಧಾನಸೌಧಕ್ಕೆ ಆಗಮಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಬಿಜೆಪಿ ಸರ್ಕಾರ ದಿನನಿತ್ಯ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಜನರ ಬದುಕು ದುಸ್ಥಿತಿಗೆ ತಲುಪಿದೆ. ಯಾರಿಗೂ ಸಂಬಳ ಹೆಚ್ಚಾಗಿಲ್ಲ. ಪಿಂಚಣಿ ಹೆಚ್ಚಾಗಿಲ್ಲ. ಕೋವಿಡ್ ಸಂದರ್ಭದಲ್ಲಿ ಯಾರಿಗೂ ಪರಿಹಾರ ಸಿಕ್ಕಿಲ್ಲ ಎಂದು ಕಿಡಿಕಾರಿದ್ರು.

ಸೈಕಲ್‌ ಜಾಥಾದಲ್ಲಿ ಸಿದ್ದರಾಮಯ್ಯ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇರುವಾಗ ಅದರ ಲಾಭ ಮಾತ್ರ ಜನಸಾಮಾನ್ಯರಿಗೆ ಸಿಗುವಂತೆ ಮಾಡಿಲ್ಲ. ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ, ಡೀಸೆಲ್ 94 ಆಗಿದೆ, ಅಡುಗೆ ಅನಿಲ 880 ರೂ. ಆಗಿದೆ. ಇದರಿಂದ ಇತರೆ ದಿನಬಳಕೆ ವಸ್ತುಗಳ ಬೆಲೆಯೂ ಹೆಚ್ಚಾಗಿದೆ.

ಪೆಟ್ರೋಲ್ ಬೆಲೆಯಲ್ಲಿ 25 ರೂ. ಡೀಸೆಲ್ ಬೆಲೆಯಲ್ಲಿ 20 ರೂ. ಹಾಗೂ ಅಡುಗೆ ಅನಿಲದ ಬೆಲೆ 150 ರೂ. ಕಡಿಮೆ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ತಮ್ಮ ತಾಳಿ, ಒಡವೆ ಮಾರಿಕೊಂಡು ಜೀವನ ಮಾಡುವ ಸ್ಥಿತಿಗೆ ತಲುಪಿದ್ದಾರೆ.

ಕೋವಿಡ್ ಸಮಯದಲ್ಲಿ ಜನರ ಆಸ್ಪತ್ರೆ ಬಿಲ್ ನೀಡಲಿಲ್ಲ, ಸತ್ತವರ ಕುಟುಂಬಕ್ಕೆ ಪರಿಹಾರ ನೀಡಲಿಲ್ಲ. ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ, ಅವರಿಗೆ ಧೈರ್ಯ ತುಂಬಲಿಲ್ಲ.

ಕಾಂಗ್ರೆಸ್‌ ನಾಯಕರಿಂದ ಸೈಕಲ್‌ ಜಾಥಾ

ಸರ್ಕಾರದ ಈ ಜನವಿರೋಧಿ ನೀತಿ ವಿರೋಧಿಸಿ ನಾವಿಂದು ಈ ಪ್ರತಿಭಟನೆ ಮಾಡಿದ್ದೇವೆ. ಜನರ ಪರ ಧ್ವನಿ ಎತ್ತಲು ನಾವು ಮೊನ್ನೆ ಎತ್ತಿನ ಗಾಡಿಯಲ್ಲಿ ಸದನಕ್ಕೆ ಆಗಮಿಸಿದ್ದೆವು. ಇಂದು ಸೈಕಲ್ ಮೂಲಕ ಆಗಮಿಸಿದ್ದೇವೆ. ಸರ್ಕಾರ ಬೆಲೆ ಇಳಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯಲಿದೆ. ಜನರು ಕೂಡ ಈ ಕೆಟ್ಟ ಸರ್ಕಾರ ಕಿತ್ತೊಗೆಯಲು ಸಜ್ಜಾಗಬೇಕು ಎಂದು ಕರೆ ನೀಡುತ್ತೇನೆ ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಹ್ಯಾರಿಸ್, ಡಾ. ರಂಗನಾಥ್, ಎಂಎಲ್ಸಿಗಳಾದ ಎಸ್. ರವಿ, ಯು.ಬಿ. ವೆಂಕಟೇಶ್, ಗೋವಿಂದರಾಜು ಮತ್ತಿತರರು ಭಾಗವಹಿಸಿದ್ದರು.

RECOMMENDED

Top Stories

Secular Tv Top Stories : 10 ಮಕ್ಕಳ ಹೆತ್ತರೆ 13 ಲಕ್ಷ ಬಹುಮಾನ ಆಫರ್ | ಮತ್ತೆ ಸಿಎಂ ಆಗುವ ಕನಸು ಬಿಚ್ಚಿಟ್ಟ ಡಿಕೆಶಿ..!

August 19, 2022
Crime News : 3.500ಸಾವಿರ ರೂ ಹಣಕ್ಕಾಗಿ ಮಹಿಳೆ ಕೊಲೆ ಮಾಡಿದ್ದ ಆರೋಪಿ ಅಂದರ್

Crime News : 3.500ಸಾವಿರ ರೂ ಹಣಕ್ಕಾಗಿ ಮಹಿಳೆ ಕೊಲೆ ಮಾಡಿದ್ದ ಆರೋಪಿ ಅಂದರ್

August 18, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

Top Stories
Just-In

Secular Tv Top Stories : 10 ಮಕ್ಕಳ ಹೆತ್ತರೆ 13 ಲಕ್ಷ ಬಹುಮಾನ ಆಫರ್ | ಮತ್ತೆ ಸಿಎಂ ಆಗುವ ಕನಸು ಬಿಚ್ಚಿಟ್ಟ ಡಿಕೆಶಿ..!

August 19, 2022
Crime News : 3.500ಸಾವಿರ ರೂ ಹಣಕ್ಕಾಗಿ ಮಹಿಳೆ ಕೊಲೆ ಮಾಡಿದ್ದ ಆರೋಪಿ ಅಂದರ್
Crime

Crime News : 3.500ಸಾವಿರ ರೂ ಹಣಕ್ಕಾಗಿ ಮಹಿಳೆ ಕೊಲೆ ಮಾಡಿದ್ದ ಆರೋಪಿ ಅಂದರ್

August 18, 2022
Siddaramaiah : ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ? : ಟಗರು ಕೆಂಡ
Just-In

Siddaramaiah : ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ? : ಟಗರು ಕೆಂಡ

August 18, 2022
MLA Suresh Gowda : ಮೈಶುಗರ್ ಫ್ಯಾಕ್ಟರಿ ಕ್ರೆಡಿಟ್ ಅಕ್ಕಂಗೆ ಹೋಗಲಿ..!
Just-In

MLA Suresh Gowda : ಮೈಶುಗರ್ ಫ್ಯಾಕ್ಟರಿ ಕ್ರೆಡಿಟ್ ಅಕ್ಕಂಗೆ ಹೋಗಲಿ..!

August 18, 2022
Arun Singh : ಬಿಎಸ್‌ವೈ ರಾಜಕೀಯ ಅನುಭವ ಪಕ್ಷಕ್ಕೆ ಲಾಭ : ಅರುಣ್​ ಸಿಂಗ್
India

Arun Singh : ಬಿಎಸ್‌ವೈ ರಾಜಕೀಯ ಅನುಭವ ಪಕ್ಷಕ್ಕೆ ಲಾಭ : ಅರುಣ್​ ಸಿಂಗ್

August 18, 2022
Kamlihula Movie : ಕಂಬ್ಳಿಹುಳ ಸಿನಿಮಾದ  ಫಸ್ಟ್ ಸಾಂಗ್ಸ್  ರಿಲೀಸ್…!
Uncategorized

Kamlihula Movie : ಕಂಬ್ಳಿಹುಳ ಸಿನಿಮಾದ ಫಸ್ಟ್ ಸಾಂಗ್ಸ್ ರಿಲೀಸ್…!

August 18, 2022
Siddaramaiah : ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆಯಲು ಯತ್ನ..!
Just-In

Siddaramaiah : ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆಯಲು ಯತ್ನ..!

August 18, 2022
Bigboss kannada: ಶುರುವಾಗೇ ಬಿಡ್ತು ನೋಡಿ ಜಡೆಜಗಳ…..!
Entertainment

Bigboss kannada: ಶುರುವಾಗೇ ಬಿಡ್ತು ನೋಡಿ ಜಡೆಜಗಳ…..!

August 18, 2022
Next Post
ಅಭಿಮಾನಿಗಳಿಗೆ ಡಬಲ್ ಶಾಕ್ – T20 ಬಳಿಕ RCB ತಂಡದ ನಾಯಕತ್ವಕ್ಕೂ ವಿರಾಟ್ ಕೊಹ್ಲಿ ಗುಡ್ ಬೈ

Virat Kohli RCB Captancy : ಆಕ್ರಮಣಕಾರಿ ನಾಯಕ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದು ಯಾಕೇ ಗೊತ್ತಾ?

SIIMA Awards 2021 Winners; ಸೈಮಾದಲ್ಲಿ ಮಿಂಚಿದ ‘ಯಜಮಾನ ‘

SIIMA Awards 2021 Winners; ಸೈಮಾದಲ್ಲಿ ಮಿಂಚಿದ 'ಯಜಮಾನ '

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist