ರಾಜನಂದಗಾಂವ್ (ಛತ್ತಿಸಗಡ್) : ಛತ್ತಿಸ್‌ಗಢದ ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ರಾಜಿಂದರ್ ಪಾಲ್ ಸಿಂಗ್ ಭಾಟಿಯಾ ರಾಜನಂದಗಾಂವ್ ಜಿಲ್ಲೆಯ ಚುರಿಯಾ ಪಟ್ಟಣದ ತಮ್ಮ ನಿವಾಸದಲ್ಲಿ ಭಾನುವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಎಂದು ಶಂಕಿಸಿದ ಪೊಲೀಸ್ ತಂಡ, ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. 72 ರ ಹರೆಯದ ಭಾಟಿಯಾ ಸಂಜೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳದಲ್ಲಿ ಯಾವುದಾದರೂ ಡೆತ್ ನೋಟ್ ಸಿಕ್ಕಿದೆಯೇ ಎಂಬುದನ್ನು ಸದ್ಯ ಪೊಲೀಸರು ಧೃಡಪಡಿಸಬೇಕು.
ಇದನ್ನೂ ಓದಿ : D V Sadananda Gowda; ಡಿವಿಎಸ್ ವಿಡಿಯೋ ರಿಲೀಸ್ ಮಾಡಿದ್ದವರು ಯಾರು?

ರಾಜಿಂದರ್ ಪಾಲ್ ಸಿಂಗ್ ಭಾಟಿಯಾ ಅವರ ಸಾವಿಗೆ ಕಾರಣ ಇನ್ನು ತಿಳಿದುಬಂದಿಲ್ಲ, ಇದೇ ವರ್ಷ ಮಾರ್ಚ್‌ನಲ್ಲಿ ಭಾಟಿಯಾರವರಿಗೆ ಕೋವಿಡ್ ಪಾಸಿಟಿವ್ ಧೃಡಪಟ್ಟಿತ್ತು, ಕೋವಿಡ್‌ನಿಂದ ಚೇತರಿಕೆ ಕಂಡಿದ್ದರೂ ಅವರ ಆರೋಗ್ಯ ಸತತವಾಗಿ ಹದಗೆಡುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಅವರ ಪತ್ನಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು ಮತ್ತು ಅವರ ಏಕೈಕ ಪುತ್ರ ಜಗಜೀತ್ ಸಿಂಗ್ ಭಾಟಿಯಾ ರಾಯ್‌ಪುರದ ಖಾಸಗಿ ಆಸ್ಪತ್ರೆಯ ಮ್ಯಾನೇಜ್‌ಮೆಂಟ್‌ನಲ್ಲಿದ್ದಾರೆ.
ಇದನ್ನೂ ಓದಿ : Second puc result 2021; ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಜಿಲ್ಲೆಯ ಖುಜ್ಜಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ಭಾಟಿಯಾ ಅವರು ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದ ಮೊದಲ ಬಿಜೆಪಿ ಸರ್ಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವರಾಗಿದ್ದರು.