ಮುಂಬೈ: ಬಾಲಿವುಡ್ ಸ್ಟಾರ್ ಅಮೀರ್ ಖಾನ್ ತಮ್ಮ ಖಯಾಮತ್ ಸೇ ಖಯಾಮತ್ ತಕ್ ಚಿತ್ರದ ಮೂಲಕ ರಾತ್ರೋರಾತ್ರಿ ಬಿಗ್ ಸ್ಟಾರ್ ಆಗಿ ಹೊರಹೊಮ್ಮಿದ್ದರು.
ಆದರೆ, ಈ ಚಿತ್ರದ ಪ್ರಚಾರಕ್ಕಾಗಿ ಆಮೀರ್ ತಮ್ಮದೇ ಸಿನಿಮಾದ ಪೋಸ್ಟರ್‌ಗಳನ್ನು ಹಂಚುವ ಮತ್ತು ಫೋಸ್ಟರ್ ಅಂಟಿಸುವ ಕೆಲಸವನ್ನು ಮಾಡಿದ್ದರಂಥೇ!
ಈ ಸಮಯದಲ್ಲಿ ಆಮೀರ್ ಖಾನ್ ತಮ್ಮ ಚಿತ್ರದ ಪೋಸ್ಟರ್ ಅನ್ನು ಓರ್ವ ಆಟೋ ಚಾಲಕ ಕೋಪಗೊಂಡು ಆಮೀರ್ ಖಾನ್ ಎದುರಿಗೆ ಸಿನಿಮಾ ಫೋಸ್ಟರಗಳನ್ನು ಹರಿದು ಬೀಸಾಡಿದ್ದನು.

ಹೌದು ನಟಿ ಜೂಹಿ ಚಾವ್ಲಾ ಪ್ರಮುಖ ಪಾತ್ರದಲ್ಲಿ ನಟಿಸಿದ ‘ಕಯಾಮತ್ ಸೆ ಖಯಾಮತ್ ತಕ್’ ಚಿತ್ರದ ಮೂಲಕ ಅಮೀರ್ ಖಾನ್ ರಾತ್ರೋರಾತ್ರಿ ಸ್ಟಾರ್ ಆಗಿದ್ದರು.ಆದರೆ ಈ ಚಿತ್ರದ ಪ್ರಚಾರಕ್ಕಾಗಿ ಆಮೀರ್ ಸ್ವತಃ ತಮ್ಮ ಚಿತ್ರದ ಪೋಸ್ಟರ್‌ಗಳನ್ನು ಹಾಕಲು ರಾತ್ರಿ ಸಮಯದಲ್ಲಿ ಮುಂಬೈ ನಗರದಲ್ಲಿ ಫೋಸ್ಟರ್ ಅಂಟಿಸಿದ್ದರು!

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅವರ ಮೊದಲ ಚಿತ್ರ ‘ಹೋಳಿ’ಯಲ್ಲಿ ಅವರಿಗೆ ಯಾವುದೇ ಮನ್ನಣೆ ಹಾಗೂ ಸಿನಿಮಾದ ಯಶಸ್ಸು ಸಿಗಲಿಲ್ಲ, ಈ ಸಿನಿಮಾದ ನಂತರದ ಮುಂದಿನ ಚಿತ್ರ ಆಮೀರ್ ಖಾನ್ ಅವರ ಚಿಕ್ಕಪ್ಪನು ಖಯಾಮತ್ ಸೆ ಖಯಾಮತ್ ತಕ್ ಎಂಬ ಚಿತ್ರವನ್ನು ನಿರ್ಮಿಸಿದರು. ಇದರಲ್ಲಿ ಜೂಹಿ ಚಾವ್ಲಾ ಅವರೊಂದಿಗೆ ಸಹಿ ಹಾಕಲಾಯಿತು.

ಈ ಸಿನಿಮಾ ಕಡಿಮೆ ಬಜೆಟ್ ಇದ್ದ ಕಾರಣ ಈ ಚಿತ್ರದ ಪ್ರಚಾರಕ್ಕಾಗಿ ಹೆಚ್ಚು ಖರ್ಚು ಮಾಡಲಾಗಲಿಲ್ಲ, ಚಿತ್ರದ ಪ್ರಚಾರದ ಜವಾಬ್ದಾರಿಯನ್ನು ಸ್ವತಃ ಆಮೀರ್ ಖಾನ್ ವಹಿಸಿಕೊಂಡರು. ಬಜೆಟ್ ಇಲ್ಲದ ಪರಿಣಾಮ ಆಮೀರ್ ಚಿತ್ರದ ಪ್ರಚಾರಕ್ಕೆ
ಬೇರೇನೂ ದಾರಿ ಕಾಣದೆ ಮುಂಬೈನಲ್ಲಿ ಆಟೋ ರಿಕ್ಷಾದ ಹಿಂದೆ ಚಿತ್ರದ ಸಣ್ಣ-ಸಣ್ಣ ಪೋಸ್ಟರ್‌ಗಳನ್ನು ಅಂಟಿಸಬಹುದು ಎಂದು ಆಮೀರ್ ಸಲಹೆ ನೀಡಿದರು.

ಮಾಧ್ಯಮ ವರದಿಗಳ ಪ್ರಕಾರ ಆಮೀರ್ ಖಾನ್ ತನ್ನ ಕೆಲವು ಸ್ನೇಹಿತರೊಂದಿಗೆ ಸೇರಿ ಮುಂಬೈನಲ್ಲಿ ಟ್ಯಾಕ್ಸಿಗಳ ಮತ್ತು ಆಟೋಗಳ ಹಿಂದೆ ಚಿತ್ರದ ಪೋಸ್ಟರ್‌ಗಳನ್ನು ಅಂಟಿಸಲು ಆರಂಭಿಸಿದರು. ಪೋಸ್ಟರ್ ಅಂಟಿಸುವಾಗ, ಆಮೀರ್ ಕೂಡ ಟ್ಯಾಕ್ಸಿ ಚಾಲಕರಿಗೆ ನಾನು ಈ ಚಿತ್ರದ ನಾಯಕ ನಟ ಎಂದು ಹೇಳುತ್ತಿದ್ದರು, ನೀವು ಚಿತ್ರ ನೋಡಲು ಹೋಗಬೇಕೆಂದು ಆಟೋ ಹಾಗೂ ಟ್ಯಾಕ್ಸಿ ಡ್ರೈವರಗಳಿಗೆ ಹೇಳುತ್ತಿದ್ದರು ಹೀಗೆ ಪೋಸ್ಟರ್ ಅಂಟಿಸುವ ಸಮಯದಲ್ಲಿ ಒಂದು ರಾತ್ರಿ ಆಮೀರ್ ಖಾನ್ ಮತ್ತು ಅವನ ಇಬ್ಬರು ಸ್ನೇಹಿತರು ಬಾಂದ್ರಾ ನಿಲ್ದಾಣವನ್ನು ತಲುಪಿದರು, ಅಲ್ಲಿ ಅನೇಕ ಆಟೋಗಳು ಸಾಲಿನಲ್ಲಿ ನಿಂತಿದ್ದವು, ಇಲ್ಲಿಗೆ ತಲುಪಿದ ನಂತರ ಸಾಲುಗಟ್ಟಿ ನಿಂತ ಆಟೋದಲ್ಲಿ ಆಮೀರ್ ತಮ್ಮ ಸಿನಿಮಾದ ಪೋಸ್ಟರ್ ಅಂಟಿಸುತ್ತಿದ್ದ ವೇಳೆ ಒರ್ವ ಆಟೋ ಚಾಲಕನು ಅಮೀರ್ ಮೇಲೆ ಕೋಪಗೊಂಡು ಆಮೀರ್ ಖಾನ್‌ಗೆ ನಿಂದಿಸಲು ಆರಂಭಿಸಿದ್ದನು.

ಮಾಧ್ಯಮ ವರದಿಗಳ ಪ್ರಕಾರ ಆ ಆಟೋ ಚಾಲಕನಿಗೆ ಆಮೀರ್ ಫೋಸ್ಟರ್ ಅಂಟಿಸಿದ್ದಕ್ಕೆ ಕ್ಷಮೆಯಾಚಿಸಿದ್ದರು ಆದರೆ ಆಟೋ ಚಾಲಕನು ಶಾಂತವಾಗದೇ ಆಟೋ ಚಾಲಕ ಚಿತ್ರದ ಪೋಸ್ಟರ್ ಅನ್ನು ಆಮೀರ್ ಮುಂದೆಯೇ ಹರಿದು ಬೀಸಾಡಿದ್ದನು.
ನಂತರ ಪೋಸ್ಟರ್ ಹಂಚುವ ಕೆಲಸವನ್ನು ಆಮೀರ್ ನ ಸ್ನೇಹಿತರು ಕೈಗೆತ್ತಿಕೊಂಡಿದ್ದರು ಆದರೆ ಈ ಘಟನೆಯಿಂದ ಇದರಿಂದ ಆಮೀರ್ ತುಂಬಾ ದುಃಖಿತರಾಗಿದ್ದರು.

ಆಮೀರ್ ಮತ್ತು ಜೂಹಿ ಚಾವ್ಲಾ ಅವರ ‘ಖಯಾಮತ್ ಸೇ ಖಯಾಮತ್ ತಕ್’ ಚಿತ್ರ ಬಿಡುಗಡೆಯಾದಾಗ ಚಿತ್ರವು ಸೂಪರ್ ಹಿಟ್ ಎಂದು ಸಾಬೀತಾಯಿತು ಮತ್ತು ಚಿತ್ರವು ಯಶಸ್ಸಿನ ಹೊಸ ದಾಖಲೆಯನ್ನು ನಿರ್ಮಿಸಿತು. ಈ ಚಲನಚಿತ್ರವು 8 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡು ಜೊತೆಗೆ 2 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು ಆಮೀರ್ ಖಾನ್ ಎಂಬ ಸಿನಿಮಾ ನಟನನ್ನು ಸ್ಟಾರ್ ನಟನಾಗಿ ರಾತ್ರೋರಾತ್ರಿ ಆಮೀರ್ ಹಿರೋ ಆಗಿ ಬಾಲಿವುಡ್‌ನ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು.