ಮುಂಬಯಿ : ನಟ ಸೋನು ಸೂದ್ ಮನೆ ಮತ್ತು ಕಚೇರಿ ಸೇರಿದಂತೆ ಆರು ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆಯ ದಾಳಿ ಸತತ ಮೂರನೇ ದಿನವೂ ಮುಂದುವರಿದಿದೆ. ಈ ದಾಳಿಯಲ್ಲಿ ವೈಯಕ್ತಿಕ ಹಣಕಾಸು ಸಂಬಂಧಿತ ಪ್ರಕರಣದಲ್ಲಿ ಐಟಿ ಇಲಾಖೆಯು ತೆರಿಗೆ ಅವ್ಯವಹಾರಗಳ ಬಗ್ಗೆ ತಿಳಿದುಕೊಂಡಿದೆ ಮತ್ತು ತೆರಿಗೆ ಅವ್ಯವಹಾರಗಳ ಅನೇಕ ಪುರಾವೆಗಳು ಲಭ್ಯವಾಗಿವೆ ಎಂದು ಮೂಲಗಳು ಹೇಳಿವೆ. ಸೋನು ಶೂಟಿಂಗ್‌ಗಾಗಿ ತೆಗೆದುಕೊಂಡ ಸಂಭಾವನೆಗಳಲ್ಲೂ ಅಕ್ರಮಗಳು ಕಂಡುಬಂದಿವೆ. ಇದರ ನಂತರ, ಸೋನು ಚಾರಿಟಿ ಫೌಂಡೇಶನ್ ಖಾತೆಯ ಬಗ್ಗೆಯೂ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ : ಏಕಕಾಲಕ್ಕೆ 8 ನ್ಯಾಯಾಧೀಶರನ್ನು ವಿವಿಧ High Court ಗಳ Chief Justice ರನ್ನಾಗಿ ಉನ್ನತೀಕರಿಸಲು ಶಿಫಾರಸು – ಸುಪ್ರೀಂ ಕೋರ್ಟ್ ಕೊಲಿಜಿಯಂ

ಈ ತನಿಖೆಯು ಇಂದು ಕೊನೆಗೊಳ್ಳಬಹುದು ಎನ್ನಲಾಗಿದ್ದು ತದ ನಂತರ ಇಲಾಖೆಯು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬಹುದು ಎಂದು ಹೇಳಲಾಗುತ್ತಿದೆ. ಐಟಿ ತಂಡಗಳು ಸೋನು ಅವರ ಖಾತೆ ಪುಸ್ತಕಗಳು, ಆದಾಯ, ವೆಚ್ಚಗಳು ಮತ್ತು ಹಣಕಾಸು ದಾಖಲೆಗಳನ್ನು ಪರಿಶೀಲಿಸುತ್ತಿವೆ. ಗುರುವಾರ ಬೆಳಿಗ್ಗೆ ಸ್ವಲ್ಪ ವಿರಾಮದ ನಂತರ, ತನಿಖಾ ತಂಡವು ತಮ್ಮ ಮುಂಬೈ ಮತ್ತು ಲಕ್ನೋ ಸ್ಥಳಗಳಲ್ಲಿ ನಿರಂತರವಾಗಿ ದಾಖಲೆಗಳನ್ನು ಹುಡುಕುತ್ತಿದೆ.
ಇದನ್ನೂ ಓದಿ : PM Narendra Modi – National Unemployment Day : ಪ್ರಧಾನಿ ಮೋದಿಯವರ ಹುಟ್ಟುಹಬ್ಬ ದಿನ ‘ರಾಷ್ಟ್ರೀಯ ನಿರುದ್ಯೋಗ ದಿನಾಚರಣೆ’

ಅವರ ಕುಟುಂಬಸ್ಥರ ಮತ್ತು ಸಿಬ್ಬಂದಿಗಳ ವಿಚಾರಣೆ
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೋನು ಅವರ ಕುಟುಂಬ ಮತ್ತು ಅವರ ಮನೆಯಲ್ಲಿ ಹಾಜರಿದ್ದ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಧಿಕಾರಿಗಳು ಅವರ ಮನೆಯಿಂದ ಕೆಲವು ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕೊರೊನಾ ಅವಧಿಯಲ್ಲಿ ಸೋನು ಸಾವಿರಾರು ಜನರಿಗೆ ಸಹಾಯ ಮಾಡಿದ್ದರು. ಅವರು ‘ಸೂದ್ ಚಾರಿಟಿ ಫೌಂಡೇಶನ್’ ಹೆಸರಿನ NGO ನಡೆಸುತ್ತಿದ್ದಾರೆ. ಈ NGO ಆರೋಗ್ಯ ರಕ್ಷಣೆ, ಶಿಕ್ಷಣ, ಉದ್ಯೋಗಗಳು ಮತ್ತು ತಂತ್ರಜ್ಞಾನದ ಬೆಳವಣಿಗೆಯ ಮೇಲೆ ಕೆಲಸ ಮಾಡುತ್ತದೆ. ಐಟಿ ಅಧಿಕಾರಿಗಳು ಕೂಡ ಇಲ್ಲಿ ತನಿಖೆ ನಡೆಸಿದ್ದಾರೆ. ಇತ್ತಿಚೇಗೆ ದೊರತ ಮಾಹಿತಿಯ ಪ್ರಕಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಿಯಲ್ ಎಸ್ಟೇಟ್ ಡೀಲ್ ಬಗ್ಗೆ ತನಿಖೆ ನಡೆಸುತ್ತಿದ್ದಾರೆ