ದೆಹಲಿ: ಇಲ್ಲಿನ 15 ವರ್ಷದ ಬಾಲಕನೊಬ್ಬ ಎಲೆಕ್ಟ್ರಿಕ್ ಬುಲೆಟ್ ಬೈಕ್ ತಯಾರಿಸಿ ಯಶಸ್ವಿಯಾಗಿದ್ದಾನೆ. 9ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕನು ಇ-ಬೈಕ್ ತಯಾರಿಸಲು ರಾಯಲ್ ಎನ್‍ಫೀಲ್ಡ್‌ನ ಅವಶೇಷಗಳನ್ನು ಬಳಸಿ ಬೈಕ್ ತಯಾರಿಸಿದ್ದಾನೆ.
ದೆಹಲಿಯ ಸುಭಾಷ್ ನಗರದಲ್ಲಿರುವ ಸರ್ವೋದಯ ಬಾಲ ವಿದ್ಯಾಲಯದ ರಾಜನ್ ಎಂಬ ಶಾಲಾ ವಿಧ್ಯಾರ್ಥಿ ರಾಯಲ್ ಎನ್‌ಫೀಲ್ಡ್ ಬುಲೆಟನ್ನು ಇ- ಬೈಕ್ ಪರಿವರ್ತಿಸಲು ಸುಮಾರು 45 ಸಾವಿರ ರೂ. ಖರ್ಚು ಮಾಡಿದ್ದಾನೆ. ಇದನ್ನೂ ಓದಿ: ಮೃತ್ಯುಕೂಪದಲ್ಲಿ ತನ್ನವರದೇ ಮೃತದೇಹಗಳ ಮಧ್ಯೆ 4 ದಿನ ಕಳೆದ ಪುಟ್ಟ ಕಂದಮ್ಮ
ಈ ಇ-ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿಲೋಮೀಟರ್ ಓಡುತ್ತದೆ ಎಂದು ವಿಧ್ಯಾರ್ಥಿ ರಾಜನ್ ಹೇಳಿಕೊಂಡಿದ್ದಾನೆ. ಕೋವಿಡ್‌ನಿಂದ ವಿಧಿಸಲಾಗಿದ್ದ ಲಾಕ್‌ಡೌನ್ ಸಮಯದಲ್ಲಿ ರಾಜನ್ ಮೊದಲು ಇ-ಸೈಕಲ್ ಪ್ರಯೋಗಕ್ಕೆ ಮುಂದಾಗಿ
ಹಠತೊಟ್ಟು ಇ-ಸೈಕಲ್ ತಯಾರಿಸಿದ್ದ. ಆದರೆ ಇದನ್ನು ಪ್ರಯೋಗ ಮಾಡಬೇಕೆಂದು ಒಂದು ರೌಂಡ್ ರಸ್ತೆಗೆ ತೆಗೆದುಕೊಂಡು ಹೋದ ವೇಳೆ ಇ- ಸೈಕಲ್‌ನಲ್ಲಿ ತೊಂದರೆ ಉಂಟಾಗಿ ಇ ಸೈಕಲ್‌ನಿಂದ ಕೆಳಗಡೆ ನಿಂದ ಬಿದ್ದು ಗಾಯಗೊಂಡಿದ್ದಾನೆ.
ಈ ಘಟನೆಯ ನಂತರ ರಾಜನ್ ತಂದೆ ದಶರಥ್ ಶರ್ಮಾ ಅವರು ಸೈಕಲ್ ಮತ್ತು ಇ-ಬೈಕ್ ಮಾಡಬಾರದೆಂದು ರಾಜನ್ ಬೆದರಿಕೆ ಹಾಕಿ ಬೈಕ್ ಮಾಡುವ ಪ್ರಯೋಗವನ್ನು ನಿಲ್ಲಿಸಿದರು.

ಛಲ ಬಿಡದೆ ಸತತ ಪರಿಶ್ರಮ
ಬಾಲಕ ರಾಜನ್ ಇ-ಬೈಕ್‌ಗಳ ಮೇಲಿನ ಆಸಕ್ತಿಯನ್ನು ನಿಲ್ಲಿಸಲೂ ಆಗಲಿಲ್ಲ, ಇ-ಬೈಕ್ ತಯಾರಿಸುವ ಹುಚ್ಚು ಈ ಇ-ಬೈಕ್ ತಯಾರಿಸಿ ತೋರಬೇಕೆಂದು ಹಟ ಸಾಧಸಿ, ತನಗೆ ಶಾಲೆಯಲ್ಲಿ ಇ-ಬೈಕ್ ತಯಾರಿಸುವ ಪ್ರೋಜೆಕ್ಟ್ ನೀಡಿದ್ದಾರೆ ಎಂದು ತನ್ನ ತಂದೆಗೆ ಸುಳ್ಳು ಹೇಳಿದ್ದನು.
ಇಷ್ಟಲ್ಲದೇ ರಾಜನ್ ತನಗೆ ಹಳೆಯ ರಾಯಲ್ ಎನ್‌ಫೀಲ್ಡ್ (Royal Enfield) ಬುಲೆಟ್ ಬೈಕ್ ಬೇಕು ಎಂದು ರಾಜನ್ ತನ್ನ ತಂದೆಗೆ ಹೇಳಿದ್ದನಂತೆ. ಇವರ ತಂದೆ ಕೊನೆಗೂ ಒಪ್ಪಿಕೊಂಡು ಸಾಕಷ್ಟು ಹುಡುಕಾಟದ ನಂತರ ಈ ಬೈಕನ್ನು ಮಾಯಾಪುರಿ ಜಂಕ್ (ಗುಜುರಿ) ಮಾರುಕಟ್ಟೆಯಿಂದ 10 ಸಾವಿರ ರೂಪಾಯಿಗೆ ಖರೀದಿಗೆ ತಂದು ಮಗನಿಗೆ ನೀಡಿದ್ದರು ಎಂದು ವರದಿಯಾಗಿದೆ..ಇದನ್ನೂ ಓದಿ : ಏಕಕಾಲಕ್ಕೆ 8 ನ್ಯಾಯಾಧೀಶರನ್ನು ವಿವಿಧ High Court ಗಳ Chief Justice ರನ್ನಾಗಿ ಉನ್ನತೀಕರಿಸಲು ಶಿಫಾರಸು – ಸುಪ್ರೀಂ ಕೋರ್ಟ್ ಕೊಲಿಜಿಯಂ
ಇನ್ನು ರಾಜನ್ ತಾನು ಮೂರೇ ದಿನಗಳಲ್ಲಿ ಈ ಇ-ಬೈಕ್ ತಯಾರಿಸಿದನೆಂದು ಹೇಳಿಕೊಂಡಿದ್ದು, ಬೈಕ್ ತಯಾರಿಸಲು ಬೇಕಾಗುವ ಕಚ್ಚಾ ಅವಶೇಷಗಳನ್ನು ಸಂಗ್ರಹಿಸಲು ಇತನಿಗೆ ಸುಮಾರು 3 ತಿಂಗಳು ಬೇಕಾಯಿತು. ರಾಜನ್ ಗೂಗಲ್ ಮತ್ತು ಯೂಟ್ಯೂಬ್‌ನಿಂದ ಇ-ಬೈಕ್‌ಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಇ- ಬೈಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಈ ಬಾಲಕನ ತಂದೆ ದಶರಥ್ ಶರ್ಮಾ ಅವರು ಖಾಸಗಿ ಕಂಪನಿಯಲ್ಲಿ ಊದ್ಯೋಗಿಯಾಗಿದ್ದು ಮಗನ ಈ ಪ್ರಯೋಗ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.