ಚಂಡಿಗಡ್ : ಸಿಎಂ ಅಮರಿಂದರ್ ಸಿಂಗ್ ತಮ್ಮ ನಿವಾಸದಲ್ಲಿ ಇಂದು ಸುಮಾರು 12 ಶಾಸಕರೊಂದಿಗೆ ನಡೆಸಿದ ಸಭೆಯಲ್ಲಿ ಅಚ್ಚರಿಯ ಸುದ್ದಿಯೊಂದನ್ನು ಪ್ರಕಟಿಸಿದ್ದಾರೆ. ಮುಖ್ಯಮಂತ್ರಿ ಸಿಂಗ್‌ರವರು ರಾಜ್ಯ ಘಟಕದಲ್ಲಿ ಇತ್ತಿಚೆಗೆ ಹೆಚ್ಚು ಪ್ರತ್ಯೇಕವಾಗಿರುವುದನ್ನು ಈ ಸಮಯದಲ್ಲಿ ಗಮನಿಸಬಹುದು.

ಇಂದು ನಡೆದ ಈ ಸಭೆಯು ಸಿಂಗ್ ಅವರಿಗೆ ಒಂದು ರೀತಿಯಲ್ಲಿ ತೊಂದರೆ ಉಂಟುಮಾಡಬಹುದು, ಅವರ ಉಚ್ಚಾಟನೆಗಾಗಿ ಬಂಡಾಯ ನಾಯಕರು ಇವರನ್ನು ಗುರಿಯಾಗಿಸಿಕೊಳ್ಳಬಹುದು. ಪಾರ್ಟಿಯಲ್ಲಿರುವ ತಮ್ಮ ಸ್ನೇಹಿತರಾದ ಕಮಲ್ ನಾಥ್ ಮತ್ತು ಮನೀಶ್ ತಿವಾರಿ ಅವರಿಗೆ “ಈ ರೀತಿಯ ಅವಮಾನದಿಂದ ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಿಲ್ಲ” ಎಂದು ಹೇಳಿದ್ದ ಕೆಲವೇ ಗಂಟೆಗಳ ನಂತರ ಈ ಸಭೆ ನಡೆದಿದ್ದು ಪಂಜಾಬ್ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : Gujarat Cabinet Ministers Swearing ಹಳೆ ಸಂಪುಟ ಎಲ್ಲ ಸಚಿವರಿಗೂ ಕೊಕ್, ಯುವ ಸಂಪುಟ ರಚಿಸಿದ ಭೂಪೇಂದ್ರ ಪಟೇಲ್

ಇದನ್ನೂ ಓದಿ : Maitri Patel : 19 ವರ್ಷದ ಬಾಲಕಿ ಈಗ ಭಾರತದ ಅತ್ಯಂತ ಕಿರಿಯ ವಾಣಿಜ್ಯ ಪೈಲಟ್
ಈ ಸಭೆಯೊಂದಿಗೆ ಅಮರೀಂದರ್ ಸಿಂಗ್ ಮತ್ತು ಅವರ ಆಂತರಿಕ ಪ್ರತಿಸ್ಪರ್ಧಿ ನವಜೋತ್ ಸಿಂಗ್ ಸಿಧು ನಡುವೆ ಭಿನ್ನಾಭಿಪ್ರಾಯಗಳ ಕಟ್ಟಲೆ ಒಡೆದ ನಂತರ, ಪಂಜಾಬ್‌ನಲ್ಲಿ ಪಕ್ಷವು ಗುಜರಾತ್‌ನ ಹಾದಿಯಲ್ಲಿ ಸಾಗುತ್ತಿದೆ ಎಂದು ಹೇಳಿಕೊಂಡಿದೆ. ಗುಜರಾತಲ್ಲಿ ಬಿಜೆಪಿ ಈ ವಾರ ಇಡೀ ಕ್ಯಾಬಿನೆಟ್ ಅನ್ನು ಪರಿಷ್ಕರಿಸಿದೆ. ಈ ಎರಡೂ ರಾಜ್ಯಗಳಲ್ಲಿ ಮುಂದಿನ ವರ್ಷ ಚುನಾವಣೆ ಬರಲಿದೆ. ಮಾಜಿ ಕ್ಯಾಬಿನೆಟ್ ಮಂತ್ರಿ ಮಾಸ್ಟರ್ ಮೋಹನ್ ಲಾಲ್ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿ ಅಧಿಕಾರ ವಹಿಸಿಕೊಳ್ಳಲು ಸಿಂಗ್ ಅವರನ್ನು ಆಹ್ವಾನಿಸಿದ ಸನ್ನೀವೇಶವೂ ನಡೆದಿದೆ.