ಬಾಲಿವುಡ್‌ನ ಖ್ಯಾತ ನಟಿ ನೇಹಾ ಧೂಪಿಯಾ ತನ್ನ ನಟನೆಯಿಂದ ಅಷ್ಟೇ ಆಲ್ದೆ ತನ್ನ ಬಿಂದಾಸ್ ಶೈಲಿಯಿಂದಲೂ ಹೆಸರುವಾಸಿಯಾಗಿದ್ದಾರೆ. ಸಿನಿಮಾಗಳ ಜೊತೆಜೊತೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರೋಡೀಸ್ ರಿಯಾಲಿಟಿ ಶೋನಿಂದಲೂ ಪ್ರಖ್ಯಾತಿ ಹೊಂದಿದ್ದಾರೆ.
ನೇಹಾ ಧೂಪಿಯಾ ಎರಡನೇ ಬಾರಿಗೆ ತಾಯಿಯಾಗ್ತಿದ್ದಾರೆ. ಕೆಲವು ದಿನಗಳ ಹಿಂದೆ, ಪತಿ ಅಂಗದ್ ಬೇಡಿ ಮತ್ತು ಮಗಳು ಮೆಹರ್ ಜೊತೆ ಮುದ್ದಾದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ನೇಹಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಸಿಹಿ ಸುದ್ದಿಯನ್ನು ನೀಡಿದ್ರು. ಗರ್ಭವತಿಯಾಗಿರುವ ನೇಹಾ ಬೇಬಿ ಬಂಪ್ ಜೊತೆಗಿನ ತನ್ನ ಫೋಟೋಸನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಏತನ್ಮಧ್ಯೆ, ನೇಹಾ ಫೂಲ್ ಸೈಟಿನಲ್ಲಿ ಕಪ್ಪು ಬಣ್ಣದ ಬಿಕಿನಿ ತೊಟ್ಟು ಬಿಂದಾಸ್ ಆಗಿ ಫೋಟೋಗೆ ಪೋಸ್ ಕೊಟ್ಟಿರುವ ಚಿತ್ರಗಳು ವೈರಲ್ ಆಗಿವೆ. ನೇಹಾ ತಮ್ಮ ಪೋಸ್ಟ್‌ನಲ್ಲಿ ನಮ್ಮಿಬ್ಬರ ಪೂಲ್ ಪಾರ್ಟಿ ಎಂದು ಬರೆದುಕೊಂಡಿದ್ದಾರೆ. ನೇಹಾ ಈ ಲುಕ್‌ಗೆ ಅಭಿಮಾನಿಗಳು ಹೃದಯ ಚಿಹ್ನೆಯನ್ನು ಕಮೆಂಟ್ ಮಾಡಿ, ಶುಭ ಹಾರೈಸಿದ್ದಾರೆ.