ಮೈಸೂರು: ಇಂದು ಸಾಹಸಸಿಂಹ ವಿಷ್ಣುವರ್ಧನ್ (Vishnu Vardhan) ಅವರ ಜನ್ಮದಿನ. ಈ ದಿನದಂದೆ ಮೈಸೂರಿನ ವಿಷ್ಣು ಅಭಿಮಾನಿಗಳಿಗೆ ಬೇಸರವಾಗಿದೆ. ನಗರದ ವಿಷ್ಣುವರ್ಧನ್ ಉದ್ಯಾನದಲ್ಲಿ ರಾತ್ರೋ ರಾತ್ರಿ ಸ್ಥಾಪಿಸಿದ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಅಧಿಕಾರಿಗಳು ತೆರವುಗೊಳಿಸಿರುವುದಕ್ಕೆ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ .
ಇದನ್ನೂ ಓದಿ : ಎರೆಹುಳು(Earthworm) ತೊಟ್ಟಿ ನಿರ್ಮಾಣದ ಲಾಭ ನಿಮಗೇ ಗೊತ್ತೇ…?
ಅರಮನೆ ಬಳಿ ಇರುವ ವಿಷ್ಣುವರ್ಧನ್ ಉದ್ಯಾನದಲ್ಲಿ ವಿಷ್ಣು ಪ್ರತಿಮೆ ಸ್ಥಾಪಿಸಬೇಕೆಂದು ಕಳೆದ 10-11 ವರ್ಷಗಳಿಂದ ವಿಷ್ಣು ಅಭಿಮಾನಿಗಳು ಆಗ್ರಹಿಸುತ್ತಾರೆ. ಮೈಸೂರು ಮಹಾನಗರ ಪಾಲಿಕೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ, ಪಾಲಿಕೆ ಪ್ರತಿಮೆ ಸ್ಥಾಪನೆ ಸಂಬಂಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದ್ರಿಂದ ಬೇಸತ್ತ ಅಭಿಮಾನಿಗಳು ಉದ್ಯಾನದಲ್ಲಿ ರಾತ್ರೋರಾತ್ರಿ ವಿಷ್ಣು ಪ್ರತಿಮೆ ಸ್ಥಾಪಿಸಿದ್ದರು.

ಬೆಳಗ್ಗೆ ಇಲ್ಲಿಯೇ ಪೂಜೆ ಸೇರಿದಂತೆ ರಕ್ತದಾನ ಶಿಬಿರ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಆರಂಭಿಸುವ ಮುನ್ನ ಅಭಿಮಾನಿಗಳು ಇಲ್ಲದ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಪಾಲಿಕೆ ಅಧಿಕಾರಿಗಳ ತಂಡ ಪ್ರತಿಮೆ ಸ್ಥಾಪನೆಗೆ ಅನುಮತಿ ಪಡೆದಿಲ್ಲವೆಂದು ಪ್ರತಿಮೆಯ ಬಿಡಿಭಾಗ ಬಿಚ್ಚಿ ಆಟೋದಲ್ಲಿ ತುಂಬಿಕೊಂಡು ಹೊಗಿದ್ದಾರೆ.
ಕಾಲಿಗೆ ಬಿದ್ದು ಬೇಡಿದರೂ ಕರುಣೆ ತೋರದ ಅಧಿಕಾರಿಗಳು
ಪ್ರತಿಮೆ ತೆರವುಗೊಳಿಸುವ ವೇಳೆ ಅಭಿಮಾನಿಗಳು ಅಧಿಕಾರಿಗಳ ಕಾಲಿಗೆ ಬಿದ್ದು ಮನವಿ ಮಾಡಿದರೂ ಕರುಣೆ ತೋರದೆ ಪ್ರತಿಮೆ ತೆರವುಗೊಳಿಸಿದ್ದಾರೆ. ಇದ್ರಿಂದ ಆಕ್ರೋಶಗೊಂಡ ಅಭಿಮಾನಿಗಳು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ವಿಷ್ಣು ಪ್ರತಿಮೆ ದ್ವಂಸ ಮಾಡಿ ತೆರವುಗೊಳಿಸಲಾಗಿದೆ ಎಂದು ಭಾವೋದ್ವೇಗಗೊಂಡ ಅಭಿಮಾನಿಗಳು ಇದು ವಿಷ್ಣುವಿನ ಕೊಲೆ ಎಂದು ಕಿಡಿಕಾರಿದರು.
ಸಾವಿನ ಸೂತಕದ ಮನೆಯಲ್ಲಿ ಸಂಭ್ರಮ ಬೇಡವೆಂದು ವಿಷ್ಣು ಜನ್ಮದಿನಾಚರಣೆಯನ್ನು ರದ್ದುಗೊಳಿಸಲಾಗಿದೆ.
ಇದರ ನಡುವೆ ಕೆಲ ಅಭಿಮಾನಿಗಳು ಉದ್ಯಾನ ಪ್ರವೇಶಿಸಲು ಯತ್ನಿಸಿದರು. ಇದು ವಿಷ್ಣು ಅಭಿಮಾನಿಗಳು ಮತ್ತು ಪೋಲಿಸರ ನಡುವೆ ವಾಗ್ವದಕ್ಕೆ ಕಾರಣವಾಯಿತು. ಪಾರ್ಕ್ ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಬಂದೂಬಸ್ತಿಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಸಂಜೆಯವರೆಗೂ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಅಭಿಮಾನಿಗಳು ತೀರ್ಮಾನಿಸಲಾಗಿದೆ. ಪ್ರತಿಮೆ ತೆರವುಗೊಳಿಸಿದ ಜಾಗದಲ್ಲೇ ಪಾಲಿಕೆ ವತಿಯಿಂದ ಪ್ರತಿಮೆ ಸ್ಥಾಪಿಸಬೇಕೆಂದು ಅಭಿಮಾನಿಗಳು ಪಟ್ಟುಹಿಡಿದಿದ್ದಾರೆ.