ನವದೆಹಲಿ: ಬಾಲಿವುಡ್ ನಟಿ ಕಂಗನಾ ರಣಾವತ್ ನಟನೆಯ “ತಲೈವಿ’ ಚಿತ್ರ ಬಿಡುಗಡೆಯಾಗಿದ್ದು, ಸಾಕಷ್ಟು ಸುದ್ದಿಯಲ್ಲಿದ್ದಾರೆ. ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಧಾರಿತ ಸಿನಿಮಾ ಇದಾಗಿದ್ದು, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಹೆಚ್ಚು ಚಿತ್ರಮಂದಿರಗಳನ್ನು ಬಿಡುಗಡೆಯಾಗಿದೆ ಯಶಸ್ವಿಯಾಗುತ್ತಿದೆ. ಆದರೆ ಕಂಗನಾ ಚಿತ್ರಕ್ಕೆ ಹಿಂದಿ ಭಾಷೆಯಲ್ಲಿ ಯಾವುದೇ ಚಿತ್ರಮಂದಿರಗಳು ಸಿಕ್ಕಿಲ್ಲ. ಇದರಿಂದಾಗಿ ಕಂಗನಾ ರನೌತ್ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕೋಪಗೊಂಡಿದ್ದು, ಸಿಎಂ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೃತ್ಯುಕೂಪದಲ್ಲಿ ತನ್ನವರದೇ ಮೃತದೇಹಗಳ ಮಧ್ಯೆ 4 ದಿನ ಕಳೆದ ಪುಟ್ಟ ಕಂದಮ್ಮ

ಟ್ವೀಟರ್‌ನಲ್ಲಿ ಬ್ಯಾನ್ ನಂತರ, ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಕಂಗನಾ ರನೌತ್, ಮಹಾ ಸರ್ಕಾರದ ವಿರುದ್ದ ಪೋಸ್ಟ್ ಮಾಡಿದ್ದಾರೆ. “ಮಹಾರಾಷ್ಟ್ರ ಸರ್ಕಾರವು ಚಿತ್ರರಂಗದಿಂದ ರಂಗಭೂಮಿ ಸಂಸ್ಕೃತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೆ ಚಿತ್ರಮಂದಿರಗಳನ್ನು ಮುಚ್ಚಲು ಹೊರಟಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಾಕಷ್ಟು ಸಿನಿಮಾಗಳು ಸಾಲುಗಟ್ಟಿವೆ ಮತ್ತು ಕಲಾವಿದರು, ನಿರ್ಮಾಪಕರು, ವಿತರಕರು ಮತ್ತು ಥಿಯೇಟರ್ ಆಪರೇಟರ್‌ಗಳ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಇದು ಚಲನಚಿತ್ರೋದ್ಯಮಕ್ಕೆ ವಿರುದ್ಧ ರಾಜ್ಯ ಸರ್ಕಾರಕ್ಕಿರುವ ನಿಲುವೇನು ಅನ್ನೋದನ್ನ ಸ್ಪಷ್ಟವಾಗಿ ತೋರಿಸುತ್ತದೆ. ಬಾಲಿವುಡ್ ಇದನ್ನು ಸುಮ್ಮನೆ ಸಹಿಸುವುದು ಬಿಟ್ಟು ಪ್ರಪಂಚದ ಬೆಸ್ಟ್ ಸಿಎಂರನ್ನು ಪ್ರಶ್ನೆ ಮಾಡುತ್ತಾ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ : ಏಕಕಾಲಕ್ಕೆ 8 ನ್ಯಾಯಾಧೀಶರನ್ನು ವಿವಿಧ High Court ಗಳ Chief Justice ರನ್ನಾಗಿ ಉನ್ನತೀಕರಿಸಲು ಶಿಫಾರಸು – ಸುಪ್ರೀಂ ಕೋರ್ಟ್ ಕೊಲಿಜಿಯಂ

ಮಹಾರಾಷ್ಟ್ರದಲ್ಲಿ ಸಿನಿಮಾ ಥಿಯೇಟರ್ ತೆರೆಯದ ಬಗ್ಗೆ ಕಂಗನಾ ಈ ಹಿಂದೆ ಹಲವು ಬಾರಿ ಕಿಡಿಕಾರಿದ್ದಾರೆ. ಹಲವಾರು ರಾಜ್ಯಗಳಲ್ಲಿ ರಾಜ್ಯ ಸರ್ಕಾರವು 50% ಸಾಮರ್ಥ್ಯದಲ್ಲಿ ಸಿನಿಮಾ ಮಂದಿರಗಳನ್ನು ತೆರೆದಿದೆ. ಆದರೆ ಮಹಾರಾಷ್ಟ್ರ ಸರ್ಕಾರ ಇನ್ನೂ ಚಿತ್ರಮಂದಿರಗಳನ್ನು ತೆರೆಯಲು ಅನುಮೋದನೆ ನೀಡಿಲ್ಲ. ಈ ಕಾರಣದಿಂದ ಕಂಗನಾ ಚಿತ್ರ ‘ತಲೈವಿ’ ಹಿಂದಿ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ, ಶೀಘ್ರದಲ್ಲೇ “ತಲೈವಿ’ ಹಿಂದಿ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.