ಮುಂಬಯಿ : ಕೇಂದ್ರ ಸಚಿವ ನಿತಿನ್ ಗಡ್ಕರಿ ( Nitin Gadkari ) ಯವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ತಾವು ತಮ್ಮ ಸಮಯವನ್ನು ಹೇಗೆ ಬಳಸಿಕೊಂಡರು ಅನ್ನುವ ಅನುಭವಗಳನ್ನು ಹಂಚಿಕೊಂಡರು.

ಹರಿಯಾಣದಲ್ಲಿ ಹೊಸ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಪ್ರಗತಿಯನ್ನು ಪರಿಶೀಲಿಸಿದ ನಂತರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಗಡ್ಕರಿಯವರು ‘ಕೋವಿಡ್ -19 ಸಮಯದಲ್ಲಿ, ನಾನು ಎರಡು ಕೆಲಸಗಳನ್ನು ಮಾಡಿದೆ – ನಾನು ಮನೆಯಲ್ಲಿ ಅಡುಗೆ ಮಾಡಲು ಪ್ರಾರಂಭಿಸಿದೆ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಉಪನ್ಯಾಸಗಳನ್ನು ನೀಡಲು ಆರಂಭಿಸಿದೆ‘ ಎಂದರು.
ಇದನ್ನೂ ಓದಿ : ವ್ಯಾಕ್ಸಿನ್ ಪಡೆದ್ರೆ ಮೊಬೈಲ್ ಗಿಫ್ಟ್ – ಇಲ್ಲಿದೆ ಬಂಪರ್ ಆಫರ್

ಅದರ ಜೊತೆಗೆ ನಾನು ಆನ್‌ಲೈನ್‌ನಲ್ಲಿ ನೀಡಿದ ಉಪನ್ಯಾಸಗಳನ್ನು ಯೂಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ನನ್ನ ಉಪನ್ಯಾಸಗಳನ್ನು ಅನೇಕ ಜನ ನೋಡುತ್ತ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತ ಹೊಯಿತು ಆ ಕಾರಣ ಯೂಟ್ಯೂಬ್ ಈಗ ನನಗೆ ತಿಂಗಳಿಗೆ 4 ಲಕ್ಷ ರೂ ನೀಡುತ್ತಿದೆ ಎಂದು ತಿಳಿಸಿದರು. ಅವರು ತಮ್ಮ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಒಮ್ಮೆ ತನ್ನ ಹೆಂಡತಿಗೆ ಹೇಳದೆ ತನ್ನ ಮಾವನ ಮನೆಯನ್ನು ಕೆಡವಲು ಆದೇಶಿಸಿದ್ದ ಕುರಿತು ಹೇಳಿದರು. ನಾನು ಆಗ ತಾನೆ ಹೊಸದಾಗಿ ಮದುವೆಯಾಗಿದ್ದೆ, ನಮ್ಮ ಮಾವನವರ ಮನೆ ರಸ್ತೆ ಮಧ್ಯದಲ್ಲಿತ್ತು. ನನ್ನ ಹೆಂಡತಿಗೆ ಹೇಳದೆ, ನಾನು ನನ್ನ ಮಾವನ ಮನೆಯನ್ನು ಕೆಡವಲು ಆದೇಶಿಸಿದ್ದೆ ಎಂದು ಆ ಸನ್ನಿವೇಶಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ : GST ವ್ಯಾಪ್ತಿಗೆ ಪೆಟ್ರೋಲ್ ಡಿಸೇಲ್, ಇಂದು ಮಹತ್ವದ ಸಭೆ – ಲಾಭ ನಷ್ಟಗಳೇನು?

ಸೋಹ್ನಾದಲ್ಲಿ, ಕೇಂದ್ರ ಸಚಿವ ಗಡ್ಕರಿಯವರು ಮತ್ತು ಹರಿಯಾಣದ ಮುಖ್ಯಮಂತ್ರಿ ಶ್ರೀ ಎಂ. ಎಲ್. ಖಟ್ಟರ್ ರವರು, ಮತ್ತೊಬ್ಬ ಕೇಂದ್ರ ಸಚಿವರಾದ ಶ್ರೀ ರಾವ್ ಇಂದ್ರಜೀತ್ ಸಿಂಗ್ ರವರು ದೆಹಲಿ ಮುಂಬಯಿ ಎಕ್ಸ್‌ಪ್ರೆಸ್‌ವೇ ಪ್ರಗತಿಯನ್ನು ಪರಿಶೀಲಿಸಿದರು. ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ದ ಅಧಿಕಾರಿಗಳು ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.