ನವದೆಹಲಿ : ಉತ್ತರ ಪ್ರದೇಶದ ಲಕ್ನೋದಲ್ಲಿ ಇಂದುಇಂದು 45 ನೇ ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಲಿದ್ದು ಸಭೆಯಲ್ಲಿ ಪೆಟ್ರೋಲ್ ಡಿಸೇಲ್ ಮತ್ತು ಎಲ್ಪಿಜಿ ಗ್ಯಾಸ್ ಜಿಎಸ್ಟಿ ವ್ಯಾಪ್ತಿಗೆ ತರುವ ಬಗ್ಗ ಮಹತ್ವದ ಚರ್ಚೆ ನಡೆಯಲಿದೆ. ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಈ ಬಗ್ಗೆ ಈಗಾಗಲೇ ಪ್ರಸ್ತಾವಣೆ ಸಲ್ಲಿಸಿದ್ದು ಇಂದು ನಡೆಯಲಿರುವ ಸಭೆ ಅತ್ಯಂತ ಮಹತ್ವದಾಗಿದೆ.
ಪೆಟ್ರೋಲ್ ಡಿಸೇಲ್ ಸೇರಿ ಇಂಧನ ಉತ್ಪನ್ನಗಳ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಬೆಲೆ ಏರಿಕೆ ವಿರುದ್ಧ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಚ್ಚಾತೈಲದ ಬೆಲೆ ನಿಯಂತ್ರಣದಲ್ಲಿರುವ ಹೊತ್ತಲ್ಲಿ ಬೆಲೆ ಏರಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು ಆಡಳಿತ ರೂಢ ಬಿಜೆಪಿ ಸರ್ಕಾರದ ವಿರುದ್ಧ ಜನರು ಶಾಪ ಹಾಕುತ್ತಿದ್ದಾರೆ.ಜನರ ಆಕ್ರೋಶದಿಂದ ಬೆಸ್ತು ಬಿದ್ದಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್, ಡಿಸೇಲ್ ತರುವ ಲೆಕ್ಕಾಚಾರ ಹಾಕಿಕೊಂಡಿದೆ.
ಈ ಮೂಲಕ ಇಂಧನಗಳ ಬೆಲೆ ನಿಯಂತ್ರಣಕ್ಕೆ ಯೋಜನೆ ಸಿದ್ದಪಡಿಸಿದೆ ಈ ಬಗ್ಗೆ ಇಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಎಸ್ಟಿ ಕೌನ್ಸಿಲ್ ಸದಸ್ಯರ ಜೊತೆಗೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಚರ್ಚೆ ಮಾಡಲಿದ್ದಾರೆ.ಆದರೆ ಪೆಟ್ರೋಲ್ ಡಿಸೇಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಆದಾಯದ ದೊಡ್ಡ ಮೂಲ ಪೆಟ್ರೋಲ್ ಡಿಸೇಲ್ ಮೇಲಿನ ಸುಂಕವಾಗಿದ್ದು ಜಿಎಸ್ಟಿ ವ್ಯಾಪ್ತಿಗೆ ಬಂದಲ್ಲಿ ರಾಜ್ಯಗಳಿಗೆ ಬರುವ ಆದಾಯದ ಕುಂಟಿತವಾಗಲಿದೆ.

ಒಂದು ಲೆಕ್ಕಾಚಾರದ ಪ್ರಕಾರ ಪ್ರತಿ ವರ್ಷ ಒಂದು ಲಕ್ಷ ಕೋಟಿ ನಷ್ಟವಾಗಬಹುದು ಎನ್ನಲಾಗುತ್ತಿದ್ದು ಜಿಡಿಪಿಯಲ್ಲಿ ಈ ನಷ್ಟ 0.4% ರಷ್ಟಿರಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಹಲವು ರಾಜ್ಯಗಳು ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ಡಿಸೇಲ್ ಬೇಡ ಎನ್ನುತ್ತಿದ್ದು ಇಂದು ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ.ಪೆಟ್ರೋಲ್ ಡಿಸೇಲ್ ಜಿಎಸ್ಟಿ ವ್ಯಾಪ್ತಿಗೆ ಬಂದರೆ ಪೆಟ್ರೋಲ್ ಬೆಲೆ ₹75 ಡಿಸೇಲ್ ಬೆಲೆ ₹68 ರೂಪಾಯಿ ಪ್ರತಿ ಲೀಟರ್ ಗೆ ಆಗಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ತಜ್ಞರು ಹೇಳಿದ್ದಾರೆ. ಸದ್ಯದ ಬೆಲೆಗಿಂತ ಪೆಟ್ರೋಲ್ ₹30 ಹಾಗೂ ಡಿಸೇಲ್ ₹20 ರೂಪಾಯಿ ಹಗ್ಗದಲ್ಲಿ ಜನರಲಿಗೆ ಲಭ್ಯವಾಗಬಹುದು ಎನ್ನಲಾಗುತ್ತಿದೆ.
ಪ್ರಸ್ತುತ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ ₹32.90 ಪೈಸೆ ಡಿಸೇಲ್ ಮೇಲೆ ₹32 ರೂಪಾಯಿ ವರೆಗೂ ಟ್ಯಾಕ್ಸ್ ಹಾಕುತ್ತಿದ್ದು ಪ್ರತಿವರ್ಷ ಪೆಟ್ರೋಲ್ ಡಿಸೇಲ್ ನಿಂದ ಸರಿಸುಮಾರು 4 ಲಕ್ಷ ಕೋಟಿ ಆದಾಯ ಗಳಿಸುತ್ತಿದೆ. 2029-21 ರಲ್ಲಿ ಈ ಆದಾಯ ₹3.35 ಲಕ್ಷ ಕೋಟಿ ಇತ್ತು. ಈಗ ಸಂಗ್ರಹ ಹೆಚ್ಚಿರಲಿದೆ ಎಂದು ತಜ್ಞರು ಹೇಳಿದ್ದಾರೆ.