ಮೈಸೂರು : ಕಳೆದ ಏಳು ವರ್ಷಗಳ ಹಿಂದೆ ಚುನಾವಣಾ ಯಾತ್ರೆಗಳಲ್ಲಿ ಭರ್ಜರಿ ಭಾಷಣಗಳ ಮೂಲಕ ವಾರ್ಷಿಕ ಎರಡು ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿ ಮಾಡುತ್ತೆನೆ ಅಂತ ಅಧಿಕಾರ ಚುಕ್ಕಾಣಿ ಹಿಡಿದ ಪ್ರಧಾನಿ ಮೋದಿಯವರು ಹೇಳಿದಂತೆ ದೇಶದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ನಗರ ಯೂತ್ ಕಾಂಗ್ರೆಸ್ ಆಚರಿಸಿ, ಕೇಂದ್ರ ಸರಕಾರದ ಆಡಳಿತ ವೈಫಲ್ಯಗಳನ್ನು ಖಂಡಿಸಿ ಪ್ರತಿಭಟಿಸಿತು.
ಇದನ್ನೂ ಓದಿ : IPS Officer Bhaskar Rao : ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ VRS ಗೆ ಅರ್ಜಿ ಸಲ್ಲಿಕೆ
ನಗರದ ನ್ಯಾಯಾಲಯ ಮುಂಭಾಗ ಜಮಾಯಿಸಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮೋದಿಗೆ ನಿರುದ್ಯೋಗ ದಿನದ ಶುಭ ಕೋರುವ ಭಿತ್ತಿಪತ್ರ ಹಿಡಿದು, ಬೇಕೇ ಬೇಕು ಉದ್ಯೋಗ ಬೇಕು, ಪಕೋಡ ಬಿಜೆಪಿ ಸರಕಾರಕ್ಕೆ ಧಿಕ್ಕಾರ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಇದರಿಂದ ಶೇ.23 ರಷ್ಟು ಕುಟುಂಬಗಳು ಬಿಪಿಎಲ್ ಆಗಿವೆ. ಇಂಥ ಪರಿಸ್ಥಿತಿಯಲ್ಲಿ ಬಿಜೆಪಿ ಸರಕಾರ ಮತ್ತು ಅದರ ಜನಪ್ರತಿನಿಧಿಗಳು ದೇವಸ್ಥಾನ ವಿಚಾರ ಇಟ್ಟುಕೊಂಡು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಅದರಂತೆ ಅವರ ಆಡಳಿತದ 7 ವರ್ಷದಲ್ಲಿ 14 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು. ಆದರೆ ಅದರ ಬದಲು ನಿರುದ್ಯೋಗ ಪ್ರಮಾಣ ಹೆಚ್ಚಿಸಿದ್ದಾರೆ. 2013-14ರಲ್ಲಿ ಸುಮಾರು ಶೇ.4.2 ರಷ್ಟಿದ್ದ ನಿರುದ್ಯೋಗ ಪ್ರಮಾಣವನ್ನು ಶೇ.10.3ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ : ಶೇಮ್ ಶೇಮ್ ಬಿಜೆಪಿ ಎಂದು ಹಿಂದೂ ಜಾಗರಣಾ ವೇದಿಕೆಯಿಂದ ಪ್ರತಿಭಟನೆ ; ಮುಸ್ಲಿಂ ಪತ್ರಕರ್ತನ ಮೇಲೆ ಹಲ್ಲೆ!

ತಮ್ಮ ಮಕ್ಕಳನ್ನು ಸಾಲ ಮಾಡಿ ಓದಿಸಿದ ಬಡ ಮತ್ತು ಮಧ್ಯಮ ಕುಟುಂಬದವರ ಪಾಡೇನು ? ಎಂಬುದನ್ನು ಕೇಂದ್ರ ಸರಕಾರ ಆಲೋಚಿಸಬೇಕು. ಹೀಗಾಗಿ ಮೋದಿ ಅವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸಿ ಪ್ರತಿಭಟಿಸಿದ್ದೇವೆ ಎಂದು ತಿಳಿಸಿದರು. ಯೂತ್ ಕಾಂಗ್ರೆಸ್ ಮೈಸೂರು ಉಸ್ತುವಾರಿ ಚೇತನ್, ಪ್ರಧಾನ ಕಾರ್ಯದರ್ಶಿ ನೋಫಿಲ್, ಶಾಶಾಂಕ್, ಮೊಹಮ್ಮದ್ ಬೋರನ್, ಬ್ಲಾಕ್ ಅಧ್ಯಕ್ಷರಾದ ವಿಷ್ಣು ಪ್ರಿಯ, ರಿಜ್ವಾನ, ವಿಕ್ರಮ್, ನವೀನ್, ಅಬ್ಬಾಸ್ ಇನ್ನಿತರರು ಇದ್ದರು.