ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನರದಲ್ಲಿ ಜಿಗರಿ ಬಸ್ಸಗಳು (ಬಿಆರ್ ಟಿಎಸ್) ಸಂಚರಿಸುವ ರಸ್ತೆಯಲ್ಲೇ ಚಿಗರಿಯೊಂದು ರಭಸವಾಗಿ ಓಡುತ್ತಿರುವ ದೃಶ್ಯ ಕಾಣಿಸಿಕೊಂಡಿದ್ದು ಈ ವೀಡಿಯೋ ವೈರಲ್ ಆಗಿದೆ.

ಹೆಸರೇ ಸೂಚಿಸುವಂತೆ ಹುಬ್ಬಳ್ಳಿ-ಧಾರವಾಡ ಈ ಅವಳಿನಗರದಲ್ಲಿ ದಿನನಿತ್ಯ ಸಂಚರಿಸುವ ಬಿಆರ್ ಟಿಎಸ್ ಬಸ್ ವಾಹನಗಳ ಹೆಸರು ಚಿಗರಿ ಬಸ್ ಅಂದರೆ ಚಿಗರಿಯಂತೆ ಕಣ್ಣಿಗೂ ಕಾಣದಂದೆ ರಭಸವಾಗಿ ಸಂಚರಿಸುವ ಬಸ್ಸುಗಳು.

ಚಿಗರಿ ಬಸ್ ಸಂಚರಿಸುವ ರಸ್ತೆಯಲ್ಲಿ ಈ ಚಿಗರಿಯೊಂದು ಕ್ಯಾಮರಾ ದೃಶ್ಯಕ್ಕೂ ಕಾಣಸಿಗದಂತೆ ಓಡುತ್ತಿರುವ ದೃಶ್ಯವು ಹಾಗೂ ದಿಢೀರನೆ ಈ ಚಿಗರಿ ನಗರದಲ್ಲಿ ಪ್ರತ್ಯಕ್ಷಗೊಂಡಿರುವುದು ಅಚ್ಚರಿ ಮೂಡಿಸಿದೆ.