ಲಕ್ನೋ : ಪೆಟ್ರೋಲ್, ಡಿಸೇಲ್, ಎಲ್ಪಿಜಿ ಸಿಲಿಂಡರ್ ಬಳಿಕ ಈಗ ಬೆಲೆ ಏರಿಕೆಯ ಬಿಸಿ ಕಟ್ಟಡ ನಿರ್ಮಾಣ ಮತ್ತು ಎಲೆಕ್ಟ್ರಾನಿಕ್ ವಲಯಕ್ಕೆ ತಟ್ಟಿದೆ. ಕಬ್ಬಿಣ, ಮ್ಯಾಂಗನೀಸ್, ತ್ರಾಮ ಸೇರಿದಂತೆ ಹಲವು ಅದಿರುಗಳ ಮೇಲಿನ ತೆರಿಗೆಯನ್ನು 13% ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಇಂದು ಲಕ್ನೋದಲ್ಲಿ ನಡೆದ 45ನೇ ಜಿಎಸ್ಟಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿದ ಹಿನ್ನಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಕಬ್ಬಿಣ, ಮ್ಯಾಂಗನೀಸ್, ತಾಮ್ರ, ನಿಕಲ್, ಕೋಬಾಲ್ಟ್, ಅಲ್ಯೂಮಿನಿಯಂ, ಸೀಸ, ಸತು, ತವರ, ಕ್ರೋಮಿಯಂ ಸೇರಿ ಅದಿರು ಉತ್ಪನ್ನಗಳ ಮೇಲಿನ ತೆರಿಗೆಯನ್ನು 5% ನಿಂದ 18% ಗೆ ಹೆಚ್ಚಿಸಿದೆ.

ಸರ್ಕಾರದ ತೆರಿಗೆ ಹೆಚ್ಚಳದಿಂದ ಈ ಎಲ್ಲ ಉತ್ಪನ್ನಗಳ ಮೇಲಿನ ಬೆಲೆ ಹೆಚ್ಚಾಗಲಿದ್ದು ದುಬಾರಿ ಹಣ ತೆತ್ತು ಖರೀದಿಸಬೇಕಿದೆ. ಇದರ ನೇರ ಪರಿಣಾಮ ಕಟ್ಟಡ ನಿರ್ಮಾಣ ಕಾರ್ಯಗಳು ಮತ್ತು ಸಣ್ಣ ಮತ್ತು ಬೃಹತ್ ಕೈಗಾರಿಕೆಗಳ ಮೇಲಾಗಲಿದೆ. ಇನ್ನು ಇತರೆ ಅದಿರು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಳದಿಂದ ಎಲೆಕ್ಟ್ರಾನ್ ವಸ್ತುಗಳ ಮೇಲಿನೆ ತೆರಿಗೆ ಹೆಚ್ಚಲಿದೆ.
ಇದರ ಜೊತೆಗೆ ಕೇಂದ್ರ ಸರ್ಕಾರ ಹಣ್ಣಿನ ಜ್ಯೂಸ್ ಪ್ಯಾಕೇಟ್ ಗಳ ಮೇಲಿನ ತೆರಿಗೆಯನ್ನು 12% ರಿಂದ 28% ಗೆ ಹೆಚ್ಚಿಸಿದ್ದು ಹಣ್ಣಿನ ಜ್ಯೂಸ್ ಪಾಕೇಟ್‌ಗಳು ದುಬಾರಿ ಎನಿಸಲಿದೆ. ಪೆನ್ನಿನ ಮೇಲೆಯೂ ಟ್ಯಾಕ್ಸ್ ಹೇರಿಕೆಯಾಗಿದ್ದು ಜಿಎಸ್ಟಿ ಸಭೆಯಲ್ಲಿ ಹಲವು ಉತ್ಪನ್ನಗಳ ಮೇಲಿನ ತೆರಿಗೆ ಪರಿಷ್ಕರಿಸಲಾಗಿದೆ.