ಲಕ್ನೋ : ಭಾರಿ ನಿರೀಕ್ಷೆಯಿಂದ ಎದುರು ನೋಡುತ್ತಿದ್ದ ಬೆಳವಣಿಗೆಯೊಂದು ಜನ ಸಾಮಾನ್ಯರಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ಡಿಸೇಲ್ ಸೇರಿಸುವ ಪ್ರಸ್ತಾಪಕ್ಕೆ ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದು ಜಿಎಸ್ಟಿ ಸಭೆಯ ಅಜೆಂಡಾದಿಂದ ಈ ಪ್ರಸ್ತಾಪವನ್ನು ಹೊರಗಿಟ್ಟು ಚರ್ಚೆ ನಡೆಸಲಾಗುತ್ತಿದೆ.
ಲಕ್ನೋದಲ್ಲಿ ನಡೆಯುತ್ತಿರುವ 45ನೇ ಜಿಎಸ್ಟಿ ಸಭೆಯಲ್ಲಿ ಪೆಟ್ರೋಲ್, ಡಿಸೇಲ್ ಜಿಎಸ್ಟಿ ವ್ಯಾಪ್ತಿಗೆ ಸೇರಿಸುವ ಬಗ್ಗೆ ಕೇಂದ್ರ ಹಣಕಾಸು ಸಚಿವ ನಿರ್ಮಲ ಸೀತಾರಾಮ ಪ್ರಸ್ತಪ ಮಂಡಿಸಿದರು. ಆದರೆ ಈ ಬಗ್ಗೆ ಚರ್ಚಿಸಲು ರಾಜ್ಯಗಳು ವಿರೋಧ ವ್ಯಕ್ತಪಡಿಸದವು, ಈ ಬಗ್ಗೆ ಚರ್ಚಿಸುವ ವೇದಿಕೆ ಇದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದವು.
All states have unanimously opposed the inclusion of petrol & diesel under GST: Sources@_pallavighosh shares details with @maryashakil pic.twitter.com/B6d5nXRSAA
— News18 (@CNNnews18) September 17, 2021
ಬಹುತೇಕ ಎಲ್ಲ ರಾಜ್ಯಗಳು ಒಕ್ಕೂರಲಿನಿಂದ ಪೆಟ್ರೋಲ್ ಡಿಸೇಲ್ ಜಿಎಸ್ಟಿ ವ್ಯಾಪ್ತಿಗೆ ತರುವ ಪ್ರಸ್ತಾಪ ವಿರೋಧಿಸಿದ ಹಿನ್ನಲೆ ಈ ಪ್ರಸ್ತಾಪವನ್ನು ಸಭೆಯ ಅಜೆಂಡಾದಿಂದ ಹೊರಗಿಟ್ಟು ಸಭೆ ನಡೆಸಲಾಯಿತು. ಹೀಗಾಗಿ ಜನ ಸಾಮಾನ್ಯರ ನಿರೀಕ್ಷೆ ಹುಸಿಯಾಗಿದ್ದು ಮತ್ತೆ ದುಬಾರಿ ಬೆಲೆ ತೆತ್ತು ಪೆಟ್ರೋಲ್ ಡಿಸೇಲ್ ಖರೀದಿ ಮಾಡಬೇಕಿದೆ.