ಬೆಂಗಳೂರು: ಯುಎಇನಲ್ಲಿ ನಡೆಯಲ್ಲಿರುವ ವಿಶ್ವಕಪ್‌ನ ನಂತರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಿ- 20 ತಂಡದ ಭಾರತೀಯ ನಾಯಕತ್ವದಿಂದ ಕೆಳಗಿಳಿಯಲಿದ್ದೇನೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಟಿ-20ಯ ನಾಯಕತ್ವದಿಂದ ಕೆಳಗಿಳಿದ ನಂತರ ರೋಹಿತ್ ಶರ್ಮಾ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ 2022ರಲ್ಲಿ ಭಾರತವನ್ನು ಮುನ್ನಡೆಸುವ ಸಾಧ್ಯತೆಯಿದೆ.
ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ಖಚಿತಪಡಿಸಿದ್ದು, ”ಭಾರತವನ್ನು ಪ್ರತಿನಿಧಿಸುವುದಷ್ಟೇ ಅಲ್ಲದೇ ಭಾರತೀಯ ಕ್ರಿಕೆಟ್ ತಂಡವನ್ನು ನನ್ನ ಅತ್ಯುತ್ತಮ ಸಾಮರ್ಥ್ಯದತ್ತ ಮುನ್ನಡೆಸುವ ಅದೃಷ್ಟವನ್ನು ಹೊಂದಿದ್ದೇನೆ. ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ನನ್ನ ಪಯಣದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
🇮🇳 ❤️ pic.twitter.com/Ds7okjhj9J
— Virat Kohli (@imVkohli) September 16, 2021
ಸುಧಿರ್ಘ ಪತ್ರ ಬರೆದಿರುವ ಕೊಹ್ಲಿ, ತಮ್ಮ ನಾಯಕತ್ವದ ಪಯಣದಲ್ಲಿ ಹುಡುಗರು, ಸಹಾಯಕ ಸಿಬ್ಬಂದಿ, ಆಯ್ಕೆ ಸಮಿತಿ, ನನ್ನ ತರಬೇತುದಾರರು ಮತ್ತು ನಾವು ಗೆಲ್ಲಲು ಪ್ರಾರ್ಥಿಸಿದ ಪ್ರತಿಯೊಬ್ಬ ಭಾರತೀಯರಿಗೆ ಧನ್ಯವಾದ. ಕೆಲಸದ ಹೊರೆ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾದ ವಿಷಯವಾಗಿದೆ ಮತ್ತು ಕಳೆದ 8-9 ವರ್ಷಗಳಲ್ಲಿ ನನ್ನ ಅಪಾರ ಕೆಲಸದ ಹೊರೆ ಪರಿಗಣಿಸಿ ಎಲ್ಲಾ 3 ಕ್ರಿಕೆಟ್ ಫಾರ್ಮ್ಯಾಟ್‌ಗಳನ್ನು ಆಡಿ ಮತ್ತು ಕಳೆದ 5-6 ವರ್ಷಗಳಿಂದ ನಿಯಮಿತವಾಗಿ ಕ್ಯಾಪ್ಟನ್ ಆಗಿ ನಾನು ಭಾರತ ತಂಡವನ್ನು ಮುನ್ನಡೆಸಲು ಸಂಪೂರ್ಣವಾಗಿ ಸಿದ್ಧವಾಗಲು ಜಾಗವನ್ನು ತುಂಬಿದ್ದೇನೆ ಹಾಗೂ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ನನ್ನ ನಾಯಕತ್ವವನ್ನು ಮುನ್ನಡೆಸಲಿದ್ದೇನೆ ಎಂದಿದ್ದಾರೆ.
ಟಿ-20ಯಲ್ಲಿ ಕ್ಯಾಪ್ಟನ್ ಆಗಿದ್ದ ಸಮಯದಲ್ಲಿ ನಾನು ಎಲ್ಲವನ್ನೂ ತಂಡಕ್ಕೆ ನೀಡಿದ್ದೇನೆ ಮತ್ತು ನಾನು ಟಿ- 20 ತಂಡದಲ್ಲಿ ಬ್ಯಾಟ್ಸ್‌ಮನ್ ಆಗಿ ಮುಂದೆವರಿಯಲ್ಲಿದ್ದೇನೆ ಎಂದು ಹೇಳಿರುವ ಕೊಹ್ಲಿ ಸಹಜವಾಗಿ ಈ ನಿರ್ಧಾರಕ್ಕೆ ಬರಲು ಸಾಕಷ್ಟು ಸಮಯ ಹಿಡಿಯಿತು. ನನ್ನ ಆಪ್ತರಾದ ರವಿ ಭಾಯ್ (ಕೋಚ್ ರವಿಶಾಸ್ತ್ರಿ) ಮತ್ತು ರೋಹಿತ್ ಅವರೊಂದಿಗೆ ಸಾಕಷ್ಟು ಆಲೋಚನೆ ಮತ್ತು ಚರ್ಚೆಗಳ ನಂತರ ನಾಯಕತ್ವದ ಗುಂಪಿನ ಅತ್ಯಗತ್ಯ ಭಾಗವಾಗಿರುವ ನಾನು ಅಕ್ಟೋಬರ್‌ನಲ್ಲಿ ದುಬೈನಲ್ಲಿ ನಡೆಯಲ್ಲಿರುವ ಐಸಿಸಿ ಟಿ -20 ವಿಶ್ವಕಪ್ ನಂತರ ಟಿ 20 ನಾಯಕನ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರೊಂದಿಗೆ ಎಲ್ಲಾ ಆಯ್ಕೆಗಾರರೊಂದಿಗೆ ಮಾತನಾಡಿದ್ದು, ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಭಾರತೀಯ ಕ್ರಿಕೆಟ್ ಮತ್ತು ಭಾರತೀಯ ತಂಡದ ಸೇವೆ ಮುಂದುವರಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಈ ಎಲ್ಲ ತಮ್ಮ ಮಹತ್ವದ ನಿರ್ಧಾರವನ್ನು ಹೇಳಿಕೊಂಡಿದ್ದಾರೆ.