ಬೆಂಗಳೂರು : ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಟಿ- 20 ವಿಶ್ವಕಪ್ ನಂತರ ಟಿ-20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ಕೊಹ್ಲಿಯ ಈ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದರೆ ಕೆಲವರಿಗೆ ಕೊಹ್ಲಿಯ ಈ ನಿರ್ಧಾರದಿಂದ ತಂಡದ ಬೇರೆ ಆಟಗಾರರಿಗೆ ನಾಯಕತ್ವದ ಅವಕಾಶ ಸಿಗಲಿದೆ ಎಂದು ಭಾವಿಸಿದ್ದಾರೆ.
ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಸಂಪೂರ್ಣ ಗಮನ ನೀಡಲು ಬಯಸುತ್ತೇನೆ ಎಂದು ನಾಯಕ ಕೊಹ್ಲಿ ಹೇಳಿದ್ದು, ಕೊಹ್ಲಿಯ ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ವಿಶ್ಲೇಷಕರಾದ ಸುನೀಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದು, ಕೊಹ್ಲಿ ತಮ್ಮ ನಾಯಕತ್ವವನ್ನು ತೊರೆಯಲು ಮುಖ್ಯ ಕಾರಣವನ್ನು ಹೇಳಿದ್ದಾರೆ.

ಕ್ರಿಕೆಟ್ ವೃತ್ತಿಯಲ್ಲಿ ನಾಯಕನ ಮೇಲೆ ಒತ್ತಡವು ಸಹಜವಾಗಿರುತ್ತವೆ ಹಾಗೂ ನಿರೀಕ್ಷೆಗಳು ಹೆಚ್ಚಾಗಿರುತ್ತವೆ ಆದರೆ ನೀವು ಯಾವುದೇ ಪ್ರಮುಖ ಪಂದ್ಯಾವಳಿಯನ್ನು ಗೆದ್ದಿಲ್ಲ ಎಂದು ನಿಮ್ಮ ಮೇಲೆ ಒತ್ತಡವಿದ್ದಾಗ, ಒತ್ತಡಗಳು ಮತ್ತಷ್ಟು ಹೆಚ್ಚಾಗುತ್ತದೆ. ಬಹುಶಃ ಅದಕ್ಕಾಗಿಯೇ ಕೊಹ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ: ಟಿ-20 ವಿಶ್ವಕಪ್ ನಂತರ ನಾಯಕತ್ವದಿಂದ ಕೆಳೆಗಿಳಿಯಲಿದ್ದೇನೆ: ನಾಯಕ ವಿರಾಟ್ ಕೊಹ್ಲಿ
ಇನ್ನು ನಾಯಕ ವಿರಾಟ್ ಕೊಹ್ಲಿ ಟಿ-20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟನಲ್ಲಿ ನಾಯಕತ್ವವನ್ನು ಸಮರ್ಥವಾಗಿ ನಿಭಾಯಿಸಲು ಕಷ್ಟಕರ ಹಾಗೂ ಹೆಚ್ಚಿನ ಒತ್ತಡಗಳನ್ನು ಎದುರಿಸುತ್ತಿದ್ದಾರೆ ಹಾಗಾಗಿ ವಿರಾಟ್ ಕೊಹ್ಲಿ ಈ ನಿರ್ಧಾರ ಘೋಷಣೆ ಮಾಡಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ-ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.