ಚಾಮರಾಜನಗರ: ಮರಿಗಳನ್ನು ಹುಡುಕುತ್ತಿರುವ ತಾಯಿ ಹುಲಿಯ ವಿಡಿಯೋ ವೈರಲ್ ಆಗುತ್ತಿದೆ. ಬಸವನಕಟ್ಟೆ ಎಂಬಲ್ಲಿ ಈ ಹುಲಿ ಆಗಾಗ್ಗೆ ಪ್ರವಾಸಿಗರಿಗೆ ಆಗಾಗ್ಗೆ ಕಾಣಿಸುತ್ತಿರುತ್ತದೆ. ಹೀಗಾಗಿ, ಛಾಯಗ್ರಾಹಕರು ಈ ಹುಲಿಗೆ ಪ್ರೀತಿಯಿಂದ “ಸುಂದರಿ” ಎಂದು ಹೆಸರಿಟ್ಟಿದ್ದಾರೆ. ಸುಂದರಿ ಹುಲಿಯು ಘರ್ಜಿಸುತ್ತಾ ಮರಿಗಳನ್ನು ಕೂಗಿ ಕರೆಯುತ್ತಿರುವ ವಿಡಿಯೋವನ್ನು ಮಂಗಳವಾರ ಬೆಳಗ್ಗಿನ ಸಫಾರಿಯಲ್ಲಿ ಪ್ರವಾಸಿಗರು ಸೆರೆ ಹಿಡಿದಿದ್ದು 10 ನಿಮಿಷಗಳಿಗೂ ಹೆಚ್ಚು ಸಮಯ ಹುಲಿ ದರ್ಶನ ನೀಡಿದೆ ಎಂದು ತಿಳಿದುಬಂದಿದೆ.
ದೇವಸ್ಥಾನಗಳ ತೆರವಿಗೆ ಮುಂದಾದ ಜಿಲ್ಲಾಡಳಿತ – ಭಕ್ತರಲ್ಲಿ ಆತಂಕ
ಈ ಕುರಿತು ಮಾಹಿತಿ ನೀಡಿರುವ ಚಾಲಕರು, ಸುಂದರಿಗೆ ಎರಡು ಮರಿಗಳಿದ್ದು ಅವುಗಳನ್ನು ಕೂಗಿ ಕರೆಯುತ್ತಿತ್ತು, 10-15 ನಿಮಿಷಗಳ ಬಳಿಕ ತಾಯಿಯನ್ನು ಅವು ಸೇರಿಕೊಂಡವು ಎಂದಿದ್ದಾರೆ. ಪ್ರವಾಸಿಗರು ವ್ಯಾಘ್ರನನ್ನು ತುಂಬಾ ಖುಷಿಪಟ್ಟರು ಎಂದು ತಿಳಿಸಿದ್ದಾರೆ. ಸದ್ಯ, ಈ ವಿಡಿಯೋ ವಾಟ್ಸಾಪ್, ಫೇಸ್ ಬುಕ್‌ನಲ್ಲಿ ಹರಿದಾಡುತ್ತಿದೆ.