ಸೂರತ್ : ‘SILK CITY‘ ಯ 19 ವರ್ಷದ ಮೈತ್ರಿ ಪಟೇಲ್ ಭಾರತದ ಅತ್ಯಂತ ಕಿರಿಯ ವಾಣಿಜ್ಯ ಪೈಲಟ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 19 ನೇ ವಯಸ್ಸಿನಲ್ಲಿ ಆಕಾಶವನ್ನು ಮುಟ್ಟಿದ ಈ ಯುವ ಪೈಲಟ್ ತನ್ನ ಕನಸುಗಳನ್ನು ನನಸಾಗಿಸಲು ಬಹಳ ಕಷ್ಟಪಟ್ಟಿದ್ದಾಳೆ. ಮೈತ್ರಿ ಪಟೇಲ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ತನ್ನ ತರಬೇತಿಯನ್ನು ಪೂರ್ಣಗೊಳಿಸಿ, ಈಗ ಭಾರತೀಯ ಪರವಾನಗಿ ಪಡೆಯಲು ಮರು ತರಬೇತಿ ಪಡೆಯುತ್ತಿದ್ದಾಳೆ. ಆಕೆಯ ಸಾಧನೆಯು ಬಹಳ ವಿಭಿನ್ನವಾಗಿರುವುದು ಯಾಕೆಂದರೆ ರೈತನ ಮಗಳಾದ ಇಕೆ ಬಡತನ ಮತ್ತು ವಿವಿಧ ಕಷ್ಟಗಳನ್ನು ಎದುರಿಸಿ ಆದರೆ ಅಡೆತಡೆಗಳನ್ನು ಮೆಟ್ಟಿ ನಿಂತು ತನ್ನಿಂದ ಅತ್ಯುತ್ತಮವಾದ ಈ ಸಾಧನೆಯನ್ನು ಹೊರ ತಂದಿದ್ದಾಳೆ.

ಬಹಳ ಕಠಿಣ ಆರ್ಥಿಕ ಹಿನ್ನೆಲೆಯಿಂದ ಬಂದಿದ್ದರೂ, ಮೈತ್ರಿ ಪಟೇಲ್ USA ನಲ್ಲಿ ಪೈಲಟ್ ತರಬೇತಿಯನ್ನು ದಾಖಲೆಯ 11 ತಿಂಗಳಲ್ಲಿ ಪೂರ್ಣಗೊಳಿಸಿದಳು. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಆಕೆ ಕೇವಲ ಎಂಟು ವರ್ಷದವಳಾಗಿದ್ದಾಗ, ಮೊದಲ ಬಾರಿಗೆ ವಿಮಾನ ಮತ್ತು ಪೈಲಟ್ ಅನ್ನು ನೋಡಿ ತಾನು ಕೂಡ ಸ್ವತಃ ಪೈಲಟ್ ಆಗಲು ಮನಸ್ಸು ಮಾಡಿದ ನೆನಪಾಯಿತು ಎಂದಳು.
ಇದನ್ನೂ ಓದಿ : Corona Virus 3rd Wave : 10 ವರ್ಷದೊಳಗಿನ ಮಕ್ಕಳೇ ಗುರಿಯಾಗುತ್ತಿದ್ದಾರಾ ..?
ಮೈತ್ರಿ ಪಟೇಲ್ ತಂದೆ ಕಾಂತಿಲಾಲ್ ಪಟೇಲ್ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾ, ಮುಂಬೈನಲ್ಲಿ ತಮ್ಮ ಪೂರ್ವಜರ ಭೂಮಿಯನ್ನು ಮಾರಾಟ ಮಾಡಿ ಮೈತ್ರಿಯ ಆನ್-ಗ್ರೌಂಡ್ ತರಬೇತಿಯ ಶುಲ್ಕವನ್ನು ಪಾವತಿಸಿ ಅವಳನ್ನು ವಾಣಿಜ್ಯ ಪೈಲಟ್ ತರಬೇತಿ ಕೋರ್ಸ್‌ಗಾಗಿ ಯುಎಸ್‌ಎಗೆ ಕಳುಹಿಸಿದ್ದಾಗಿ ತಿಳಿಸಿದರು. ಇದೇ ವೇಳೆ ಅವರು ತಾವು ಕುಟುಂಬ ನಿರ್ವಹಣೆಗೆ ಹಣವನ್ನು ಗಳಿಸಲು ಸೂರತ್‌ನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಿದ್ದು ಮತ್ತು ಆ ಸಮಯದಲ್ಲಿ ವಿಮಾನಗಳು ಟೇಕ್-ಆಫ್ ಮತ್ತು ಲ್ಯಾಂಡ್ ಆಗುವುದನ್ನು ನೋಡುತ್ತಿದ್ದರು. ಅದೇ ಕ್ಷಣ ಕಾಂತಿಲಾಲ್ ಪಟೇಲ್ ತನ್ನ ಮಗಳು ಕೂಡ ಪೈಲಟ್ ಆಗಬೇಕು ಮತ್ತು ಪ್ರಪಂಚವನ್ನು ಸುತ್ತಬೇಕು ಎಂದು ಕನಸ್ಸನ್ನು ಕಂಡರು. ಈಗ ಅವರ ಕನಸು ನನಸಾಗಿದ್ದು 19 ವರ್ಷದ ಮೈತ್ರಿ ಪಟೇಲ್ ಭಾರತದ ಅತ್ಯಂತ ಕಿರಿಯ ವಾಣಿಜ್ಯ ಪೈಲಟ್ ಎಂಬ ಇತಿಹಾಸ ಬರೆದಿದ್ದಾರೆ.