ಮೈಸೂರು : ಜಿಲ್ಲೆಯ ನಾಗಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಬರುವ ಹುಣಸೂರು ವನ್ಯಜೀವಿ ವಲಯದ ದೊಡ್ಡ ಹರವೆ ಶಾಖೆಯ ಕಾವೇರಿ ಬ್ಲಾಕ್ ಅರಣ್ಯ ಪ್ರದೇಶದ ಕಾಡಂಚಿನ ಕಾಫಿ ತೋಟದಲ್ಲಿ ಸೋಲಾರ್ ಫೇನ್ಸ್‌ಗೆ ಅಕ್ರಮವಾಗಿ ಅಳವಡಿಸಿದ ವಿದ್ಯುತ್ ತಂತಿ ಸ್ಪರ್ಶಸಿ ಕಾಡಾನೆಯೊಂದು ಮೃತಪಟ್ಟಿದೆ.
ಅರಣ್ಯಾಧಿಕಾರಿಗಳು ಮತ್ತು ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ಮಾಡಿ, ಮರಣೋತ್ತರ ಪರೀಕ್ಷೆಯನ್ನು ಸಹ ನಡೆಸಿದ್ದಾರೆ. ಈ ಕುರಿತು ಬೈಲಕುಪ್ಪೆ ಪೋಲಿಸ್ ಠಾಣೆಯಲ್ಲಿ ಜಮೀನಿನ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ