ಮುಂಬಯಿ : ಬಾಲಿವುಡ್ ನಟಿ ಕಂಗನಾ ರಣಾವತ್ ರಾಮಾಯಣದ ಸನ್ನಿವೇಶಗಳನ್ನು ಆಧರಿಸಿದ ಅಲೌಕಿಕ್ ದೇಸಾಯಿ ನಿರ್ದೇಶನದಲ್ಲಿ ಬರುತ್ತಿರುವ ‘The Incarnation – Sita’ ಚಿತ್ರದಲ್ಲಿ ಸೀತಾ ದೇವಿಯ ಪಾತ್ರವನ್ನು ನಿರ್ವಹಿಸಲು ಒಪ್ಪಿಗೆ ಸೂಚಿಸಿದ್ದಾರೆ.

ಅವರ ಇತ್ತೀಚಿಗೆ ಬಿಡುಗಡೆಯಾದ ‘ತಲೈವಿ’ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು ಈಗ ಈ ನಟಿಗೆ ರಾಮಾಯಣ ಮಹಾಕಾವ್ಯದ ಪೌರಾಣಿಕ ಸನ್ನಿವೇಶಗಳನ್ನು ಆಧರಿಸಿದ ಚಿತ್ರದಲ್ಲಿ ಸೀತಾ ದೇವಿಯ ಪಾತ್ರವನ್ನು ನಿರ್ವಹಿಸಲು ಆಯ್ಕೆ ಮಾಡಲಾಗಿದೆ, ಈ ಮೂಲಕ ಮತ್ತೊಂದು ಭವ್ಯವಾದ ಚಿತ್ರದ ಮೂಲಕ ಪ್ರೇಕ್ಷಕರಿಗೆ ಮನರಂಜನೆಯನ್ನು ಒದಗಿಸಲು ತಯಾರಿ ನಡೆಸಿದ್ದಾರೆ. ಚಿತ್ರದ ಕಥೆಯನ್ನು ಹಿರಿಯ ಚಿತ್ರಕಥೆಗಾರ ಕೆವಿ ವಿಜಯೇಂದ್ರ ಪ್ರಸಾದ್ ಬರೆದಿದ್ದಾರೆ.
ಇದನ್ನೂ ಓದಿ : PM Modi Statue made by Scrap Materials : ಗುಜರಿ ವಸ್ತುಗಳಿಂದ ಪಿಎಂ ಮೋದಿ ಪ್ರತಿಮೆ ತಯಾರು – ಸದ್ಯದಲ್ಲೆ ಬೆಂಗಳೂರಲ್ಲಿ ಅನಾವರಣ

ಈ ಹಿಂದೆ ಕರೀನಾ ಕಪೂರ್ ಖಾನ್ ಅವರನ್ನು ‘The Incarnation – Sita’ ಚಿತ್ರದಲ್ಲಿ ಸೀತಾ ದೇವಿಯ ಪಾತ್ರವನ್ನು ನಿರ್ವಹಿಸಲು ಸಂಪರ್ಕಿಸಲಾತ್ತು ಎಂದು ಮೂಲಗಳು ಹೇಳುತ್ತಿವೆ ಆದರೆ ಅದಕ್ಕಾಗಿ ಅವರು 12 ಕೋಟಿ ರೂಪಾಯಿ ಸಂಭಾವನೆ ಕೇಳಿದಾಗ ಅವರನ್ನು ಕೈ ಬೀಡಲಾಗಿತ್ತು.

ಈ ಕುರಿತು ಚಿತ್ರದ ನಿರ್ದೇಶಕ ‘ಬ್ರಹ್ಮಾಂಡವು ನಂಬಿಕೆಯಿಂದ ಶರಣಾದವರಿಗೆ ಸಹಾಯ ಮಾಡುತ್ತದೆ. ಎಲ್ಲೊ ಒಂದು ಮರೀಚಿಕೆಯಾಗಿದ್ದು ಈಗ ಸ್ಪಷ್ಟವಾಗಿದೆ. ಎಂದಿಗೂ ಪರಿಶೋಧಿಸದ ಧಾರ್ಮಿಕ ಪಾತ್ರದ ಕನಸು ಈಗ ನನಸಾಗಿದೆ. ಸೀತಾ ಆಗಿ ಕಂಗನಾ ರಣಾವತ್ ಅವರನ್ನು ಕರೆತರಲು ನನಗೆ ಸಂತೋಷವಾಗಿದೆ. ಈ ಧಾರ್ಮಿಕ ಪಯಣವು ನಮ್ಮ ಪುರಾಣವನ್ನು ನಾವು ಹೇಗೆ ತೆಗೆದುಕೊಳ್ಳುತ್ತೇವೆ ಎಂಬುದರ ಹಾದಿಯನ್ನು ಬದಲಾಯಿಸುತ್ತದೆ. ನಿಮ್ಮ ಅಪಾರ ಬೆಂಬಲ ಮತ್ತು ನಂಬಿಕೆಗಾಗಿ SS Studio ಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
SITA AARAMBH
— Alaukik Desai (@alaukikdesai) September 14, 2021
Universe does help those who surrender to it with belief. What was a mirage, is now clarity. A dream of a pious character never explored is now a reality. I am ecstatic to bring #KanganaRanaut on board as SITA. Thank you #SSStudio for your immense support. pic.twitter.com/9PX0YwdcOn