ಹೈದರಾಬಾದ್: ವಿಚ್ಛೇದನ ಸುದ್ದಿ ನಡುವೆ ಪತ್ನಿ, ನಟಿ ಸಮಂತಾಗೆ ನಟ ನಾಗಚೈತನ್ಯ ಟ್ವಿಟರ್ ನಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.
ಸಮಂತಾ ಮತ್ತು ನಾಗಚೈತನ್ಯ ಟಾಲಿವುಡ್ ಫೇಮಸ್ ಕಪಲ್. ಶೂಟಿಂಗ್ ನಲ್ಲಿ ಲವ್ ಆಯ್ತು, ನಂತರ ಮದುವೆಯೂ ನಡೆಯಿತು. ಅದ್ಯಾಕೋ ಇಬ್ಬರ ಸಂಸಾರದಲ್ಲಿ ವಿರಸ ಕಾಣಿಸಿಕೊಂಡಿದೆ ಅಂತಾ ಹೇಳಲಾಗ್ತಿದೆ. ಆದ್ರೆ ಇದ್ಯಾವುದು ಅಧಿಕೃತವಾಗಿಯೂ ಆಗಿಲ್ಲ ಮತ್ತು ಸುಳ್ಳು ಎಂದು ಜೋಡಿಯೂ ಹೇಳುತ್ತಿಲ್ಲ. ಹಾಗಾಗಿ ಪ್ರತಿನಿತ್ಯ ಡಿವೋರ್ಸ್ ಬಗೆಗಿನ ಹೊಸ ಹೊಸ ಸುದ್ದಿಗಳು ಹುಟ್ಟಿಕೊಳ್ಳುತ್ತಿವೆ.

ಹೌದು, ಸೆಪ್ಟೆಂಬರ್ 24ರಂದು ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ಲವ್ ಸ್ಟೋರಿ ಸಿನಿಮಾ ರಿಲೀಸ್ ಆಗಲಿದೆ. ಚಿತ್ರದ ಟ್ರೈಲರ್ ಲಿಂಕ್ ಶೇರ್ ಮಾಡಿಕೊಂಡಿದ್ದಾರೆ. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಧನ್ಯವಾದ ಸಲ್ಲಿಸಿದ್ದಾರೆ.
Thanks Sam !! https://t.co/XDI4gAOjmR
— chaitanya akkineni (@chay_akkineni) September 14, 2021
samanಕೆಲ ದಿನಗಳ ಹಿಂದೆ ಸಮಂತಾ ತಮ್ಮ ಹೆಸರಿನ ಮುಂದಿರುವ ಅಕ್ಕಿನೇನಿ ಪದ ತೆಗೆದು ಎಸ್ ಎಂದು ಮಾಡಿಕೊಂಡಿದ್ದಾರೆ. ಮಾವ ನಾಗಾರ್ಜುನ್ ಬರ್ತ್ ಡೇ ಕಾರ್ಯಕ್ರಮದಲ್ಲಿ ಸಮಂತಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದನ್ನೂ ಓದಿ: 13 ಹಾರರ್ ಸಿನ್ಮಾ ನೋಡಿ 95 ಸಾವಿರ ಗೆಲ್ಲಿ – ಷರತ್ತುಗಳು ಅನ್ವಯ